ನನ್ನ ಬಳಿ ಇರೋದು ಎರಡೇ ಚಡ್ಡಿ. ಈಗ ಅವೂ ಹರಿದಿದೆ. ಯಾರಿಗೆ ಹೇಳ್ಲಿ ನನ್ ಪ್ರಾಬ್ಲಮ್ ?! ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದ ವ್ಯಕ್ತಿ
ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಅಗತ್ಯ ವಸ್ತುಗಳ ಬಗ್ಗೆಯೇ ಹೆಚ್ಚು ಒತ್ತು ನೀಡಿತ್ತು. ಆದರೆ, ವ್ಯಕ್ತಿಯೊಬ್ಬರು ಬಟ್ಟೆಯಂಗಡಿ ತೆರೆಸಿ ಎಂದು ಒಳ ಚಡ್ಡಿ ಯ ಸಮಸ್ಯೆ ಹೇಳಿಕೊಂಡು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮಾಡಿರುವ ಮನವಿ ಇದೀಗ ರಾಜ್ಯದೆಲ್ಲೆಡೆ ಹಾಸ್ಯದ ವಸ್ತುವಾಗಿ ವ್ಯಾಪಕ ಚರ್ಚೆಗೀಡಾಗುತ್ತಿದೆ.
ಮೈಸೂರು ಮೂಲದ ನಾಗರಿಕರೊಬ್ಬರು ಸಿಎಂ ಯಡಿಯೂರಪ್ಪ ಅವರಿಗೆ ಒಂದು ವಿಶಿಷ್ಟ ಶೈಲಿಯಲ್ಲಿ ಮನವಿ ಮಾಡಿದ್ದು, ಈ ಪತ್ರ ಈಗ ಭಾರೀ ಚರ್ಚೆಗೆ ಗ್ರಾಸ.
‘ನನ್ನ ಬಳಿ ಇರುವುದು ಎರಡೇ ಎರಡೂ ಚಡ್ಡಿಗಳು. ಅವು ಕೂಡಾ ಈಗ ಹರಿದು ಹೋಗಿವೆ. ನಾನೇನು ಮಾಡಲಿ ? ‘ ಎಂದು ಅವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕೇಳಿದ್ದು ಇದೀಗ ವ್ಯಾಪಕ ಟ್ರೊಲ್ ಆಗಿ ಹಾಸ್ಯದ ವಸ್ತುವಾಗಿದೆ. ಜತೆಗೆ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಯೊಂದನ್ನು ಮುಖ್ಯಮಂತ್ರಿಗಳ ಮುಂದೆ ಇಟ್ಟಿದ್ದಾರೆ.
ಮೈಸೂರಿನ ಚಾಮರಾಜಪುರದ ಕೊ.ಸು.ನರಸಿಂಹಮೂರ್ತಿ ಅವರೇ ಈ ಪತ್ರ ಬರೆದು ಸುದ್ದಿಯಾದವರು.
ಮಾನ್ಯ ಮುಖ್ಯಮಂತ್ರಿಗಳೇ, ನನ್ನ ಬೇಡಿಕೆ ನಿಮಗೆ ವಿಚಿತ್ರವೆನಿಸಬಹುದು. ಆದರೆ ಪರಿಸ್ಥಿತಿಯನ್ನು ಒಮ್ಮೆ
ನೀವು ಅವಲೋಕನೆ ಮಾಡಿ, ಕಳೆದ ಸುಮಾರು ಎರಡು ತಿಂಗಳುಗಳಿಂದ ಎಲ್ಲಾ ಅಂಗಡಿಗಳಿಗೆ ತೆರೆಯುವ ಭಾಗ್ಯ ಸಿಕ್ಕಿದೆ. ಆದರೆ, ಅದೇಕೋ ಬಟ್ಟೆ ಅಂಗಡಿಗಳು ತೆರೆಯಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಜನರ ಕಷ್ಟವೇನು ಇದರಿಂದ ಎಂದು ನಿಮಗೆ ತಿಳಿದಿದೆಯೇ? ಎಂದು ಅವರು ಪ್ರಶ್ನಿಸಿದರು.
‘ ಕೇವಲ ಎರಡು ಜೊತೆ ಒಳ ಉಡುಪುಗಳನ್ನು ಹೊಂದಿರುವ ನನ್ನಂತಹವರ ಒಳ ಉಡುಪುಗಳು ಹರಿದು ಚಿಂದಿಯಾಗಿದೆ. ಇನ್ನು ಪಾಪ ಹೆಣ್ಣುಮಕ್ಕಳ ಬಟ್ಟೆಗಳ ಕಥೆಯೂ ಹೀಗೇ ಇರಬಹುದು. ಯಾರ ಬಳಿ ಹೇಳಲಿ ಸಾರ್ ನಮ್ ಪ್ರಾಬ್ಲಮ್ಮು ? ‘ ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.
‘ಮಾನ್ಯ ಮುಖ್ಯಮಂತ್ರಿಗಳೇ, ಕಳೆದೆರಡು ತಿಂಗಳುಗಳಿಂದ ಎಲ್ಲಾ ಅಂಗಡಿಗಳು ತೆರೆಯುತ್ತಿದ್ದರೂ ಅದೇಕೋ ಬಟ್ಟೆ ತಿಂಗಳಲ್ಲಿ ವಾರಕ್ಕೆ ಒಮ್ಮೆಯಾದರೂ ಬಟ್ಟೆ ಅಂಗಡಿಯನ್ನು ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ’ ಎಂದು ಸಿಎಂಗೆ ಅವರು ಮನವಿ ಮಾಡಿದ್ದಾರೆ.