ಬಂಟ್ವಾಳ | ಸಿಮೆಂಟ್ ಶೀಟ್ ಅಳವಡಿಸುತ್ತಿದ್ದಾಗ ಜಾರಿ ಬಿದ್ದು ಕೆಲಸಗಾರ ಮೃತ್ಯು

ಬಂಟ್ವಾಳ : ಪ್ಲೈ ವುಡ್ ಫ್ಯಾಕ್ಟರಿಗೆ ಸಿಮೆಂಟ್ ಸೀಟು ಹಾಕುವ ವೇಳೆ ಓರ್ವ ಕಾರ್ಮಿಕ ಸೀಟು ತುಂಡಾಗಿ ಕೆಳಕ್ಕೆ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟು,ಇನ್ನೊಬ್ಬ ಕಾರ್ಮಿಕನ ಕೈಗೆ ಗಾಯಗೊಂಡ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಅಬೂಬಕ್ಕರ್ ಸಿದ್ದಿಕ್‌(68) ಮೃತಪಟ್ಟವರು,ನಂದಾವರ ನಿವಾಸಿ ಇಬ್ರಾಹಿಂ ಖಲೀಲ್ (24) ಗಾಯಗೊಂಡವರು.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ಲೈವುಡ್ ಫ್ಯಾಕ್ಟರಿಯ ಮಾಲಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿ ಮಾಲಕ ಬಿ ಅಬ್ದುಲ್ ಸಲಾಂ ವಿರುದ್ಧ ದೂರು ನೀಡಲಾಗಿದೆ.

Leave A Reply

Your email address will not be published.