Daily Archives

May 27, 2021

ದಕ ದಲ್ಲಿ ಇಂದು ಒಟ್ಟು 555 ಕೋವಿಡ್ ಕೇಸ್, 5 ಸಾವು | ಉಡುಪಿಯಲ್ಲಿ 905 ಕೇಸ್, 2 ಸಾವು

ದಕ್ಷಿಣ ಕನ್ನಡದಲ್ಲಿ ಗುರುವಾರ 555 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಹಾಗೂ ಐದು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ದಕ ದಲ್ಲಿ 1,695 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ದಕ ಜಿಲ್ಲೆಯಲ್ಲಿಒಟ್ಟು 8954 ಸಕ್ರಿಯ ಪ್ರಕರಣಗಳಿವೆ. ದಕ

ಬಾಗಲಕೋಟೆ | ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ನೀಡುವ ಆಹಾರ ಧಾನ್ಯಗಳ ಕಳ್ಳಸಾಗಾಣಿಕೆ, ಸಿಡಿದೆದ್ದ ಗ್ರಾಮಸ್ಥರು

ಗರ್ಭಿಣಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ನೀಡುವ ಆಹಾರ ಧಾನ್ಯವನ್ನು ಸರಿಯಾಗಿ ವಿತರಣೆ ಮಾಡದೆ, ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಹುನಗುಂದ ತಾಲೂಕಿನ ಕರಡಿ ಗ್ರಾಮಸ್ಥರು, ಅಂಗನವಾಡಿ ಕೇಂದ್ರದ ಮಹಿಳಾ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.   ಲಾಕ್ ಡೌನ್

ಆತ್ಮನಿರ್ಭರ ಯೋಜನೆಯಡಿ ರಾಜ್ಯದ ಬೀದಿ ಬದಿ ವ್ಯಾಪಾರಿಗಳಿಗೆ 20 ಸಾವಿರ ಸಾಲ

ಬೆಂಗಳೂರು : ರಾಜ್ಯದ ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ಆತ್ಮನಿರ್ಭರ್ ಯೋಜನೆಯಡಿಯಡಿಯಲ್ಲಿ 2ನೇ ಅವಧಿಗೆ ತಲಾ 20 ಸಾವಿರ ರೂ. ಸಾಲ ವಿತರಿಸುವಂತೆ ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕಿ ಎನ್. ಮಂಜುಶ್ರೀ ಅವರು ಆದೇಶಿಸಿದ್ದಾರೆ. ಕೇಂದ್ರ ವಸತಿ ಮತ್ತು ನಗರ

ಫೈನಾನ್ಸ್, ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಗೆ ಒತ್ತಡ ಹೇರುವಂತಿಲ್ಲ | ಜಿಲ್ಲಾಧಿಕಾರಿಯಿಂದ…

ಕೊರೋನಾ ಎರಡನೇ ಅಲೆಯಿಂದಾಗಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಈ ಸಮಯದಲ್ಲಿ ಎಷ್ಟೋ ಜನ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಹಲವಾರು ಮಂದಿ ಉದ್ಯೋಗವಿಲ್ಲದೆ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಹೀಗಿರುವಾಗ ಫೈನಾನ್ಸ್, ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಗೆ ಒತ್ತಡ

ನೇತ್ರಾವತಿ ನದಿಗೆ ಸ್ನಾನಕ್ಕೆಂದು ತೆರಳಿದ್ದವರಲ್ಲಿ ಓರ್ವ ನಾಪತ್ತೆ|

ನೇತ್ರಾವತಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ನಾಲ್ವರಲ್ಲಿ ಓರ್ವನು ನಾಪತ್ತೆಯಾಗಿರುವ ಘಟನೆ ಮೇ 27 ರಂದು ನಡೆದಿದೆ. ಧರ್ಮಸ್ಥಳದ ಕೂಡಿಗೆ ಪರಪ್ಪು ಎಂಬಲ್ಲಿ ನಾಲ್ವರು ಮಂದಿ ನೇತ್ರಾವತಿ ನದಿಗೆ ಸ್ನಾನಕ್ಕೆಂದು ತೆರಳಿದ್ದವರಲ್ಲಿ ಓರ್ವ ನಾಪತ್ತೆಯಾಗಿರುವ ಘಟನೆ ಸಂಭವಿಸಿದ್ದು, ನದಿಯಲ್ಲಿ

ಇಂಜಿನ್ ಕೆಟ್ಟು ಅಪಾಯದಲ್ಲಿ ಸಿಲುಕಿದ ದೋಣಿ | ಹತ್ತು ಮಂದಿ ಮೀನುಗಾರರ ರಕ್ಷಣೆ

ಮಂಗಳೂರು ಬಂದರಿನಿಂದ 20 ನಾಟಿಕಲ್ ಮೈಲಿ ದೂರ ಅರಬ್ಬಿ ಸಮುದ್ರದಲ್ಲಿ ಇಂಜಿನ್ ಕೆಟ್ಟು ಅಪಾಯಕ್ಕೆ ಸಿಲುಕಿದ್ದ ತಮಿಳುನಾಡು ಮೂಲದ ಯಾಂತ್ರೀಕೃತ ದೋಣಿ ಹಾಗೂ ಅದರಲ್ಲಿದ್ದ 10 ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆಯಿಂದ ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟ ಮೀನುಗಾರರಲ್ಲಿ 7 ಮಂದಿ

ವೆನ್ಲಾಕ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಕೈಗೆತ್ತಿಕೊಂಡಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳನ್ನು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಗುರುವಾರ ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು ಈಗಾಗಲೇ ಜಿಲ್ಲೆಯಲ್ಲಿ ಕೊರೋನ ಸೋಂಕು ತಡೆಗೆ ಎಲ್ಲಾ

ಕೋವಿಡ್ ನಿಂದ ಮೃತಪಟ್ಟ ಪುರುಷ ಹಾಗೂ ಮಹಿಳೆಯ ಅಂತ್ಯಕ್ರಿಯೆಯನ್ನು ಬೆಳ್ತಂಗಡಿ ಮತ್ತು ನೆಲ್ಯಾಡಿ ಹಿಂದೂ ಪರಿಷತ್

1)ಕೊರೊನಾದಿಂದ ಮೃತಪಟ್ಟಿದ್ದ ತನ್ನಿರುಪಂತ ನಿವಾಸಿ ಅಲಕ್ಕೆ ನೋಣಯ್ಯ ಪೂಜಾರಿ ಎಂಬುವವರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದ ಪ್ರಕಾರ ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀಧರ್ ಗುಡಿಗಾರ್ ಉಪಾಧ್ಯಕ್ಷರು VHP ಬೆಳ್ತಂಗಡಿ, ಸಂತೋಷ ಅತ್ತಾಜೆ ಸಂಚಾಲಕ ಬೆಳ್ತಂಗಡಿ, ರತನ್ ಶೆಟ್ಟಿ ಕೊಲ್ಲಿ

ಹಿಂದು ಯುವಕನೊಂದಿಗೆ ವಿವಾಹವಾದ ಮುಸ್ಲಿಂ ಯುವತಿ | ರಕ್ಷಣೆಗೆ ಕೋರ್ಟ್ ಮೆಟ್ಟಿಲೇರಿದ ನವದಂಪತಿ

ಲವ್ ಜಿಹಾದ್ ವಿರುದ್ಧ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಯುವತಿಯೋರ್ವಳು ಹಿಂದೂ ಧರ್ಮಕ್ಕೆ ಮತಾಂತರವಾಗಿ ಹಿಂದೂ ಯುವಕನನ್ನು ವಿವಾಹವಾಗಿದ್ದು, ರಕ್ಷಣೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. 19 ವರ್ಷದ ಮುಸ್ಲಿಂ ಯುವತಿ ಮತ್ತು ಆಕೆಯ ಹಿಂದೂ

ಅನ್ಯ ಧರ್ಮದ ಯುವಕನ ಮದುವೆಯಾದ ಹಿಂದೂ ಯುವತಿಯ ದುರಂತ ಅಂತ್ಯ

ಭವಿಷ್ಯದಲ್ಲಿ ಸುಖವಾಗಿರುತ್ತೇವೆಂಬ ಆಸೆಯಿಂದ ಧರ್ಮವನ್ನು ಮೀರಿ ಇಷ್ಟಪಟ್ಟವನೊಂದಿಗೆ ಮದುವೆಯಾದ ಯುವತಿಯೊಬ್ಬಳ ಜೀವನ ದುರಂತ ಅಂತ್ಯ ಕಂಡಿದೆ. ಅತ್ತೆಯ ಕಿರುಕುಳವನ್ನು ತಾಳಲಾರದೇ ಮದುವೆಯಾದ ಕೆಲವೇ ದಿವಸಗಳಲ್ಲಿ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಪಟ್ಟಣದಲ್ಲಿ