ನೇತ್ರಾವತಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ನಾಲ್ವರಲ್ಲಿ ಓರ್ವನು ನಾಪತ್ತೆಯಾಗಿರುವ ಘಟನೆ ಮೇ 27 ರಂದು ನಡೆದಿದೆ.
ಧರ್ಮಸ್ಥಳದ ಕೂಡಿಗೆ ಪರಪ್ಪು ಎಂಬಲ್ಲಿ ನಾಲ್ವರು ಮಂದಿ ನೇತ್ರಾವತಿ ನದಿಗೆ ಸ್ನಾನಕ್ಕೆಂದು ತೆರಳಿದ್ದವರಲ್ಲಿ ಓರ್ವ ನಾಪತ್ತೆಯಾಗಿರುವ ಘಟನೆ ಸಂಭವಿಸಿದ್ದು, ನದಿಯಲ್ಲಿ ಮುಳುಗಿರಬಹುದೆಂಬ ಸಂಶಯ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಧರ್ಮಸ್ಥಳ ಪೊಲೀಸರು ಆಗಮಿಸಿದ್ದು, ಶೋಧ ಕಾರ್ಯ ನಡೆಯುತ್ತಿದೆ.