Daily Archives

May 27, 2021

ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಪಡಿತರದಾರರಿಗೆ ಸ್ಥಳೀಯ ಕೆಂಪು ಕುಚ್ಚಲಕ್ಕಿ ಸರಬರಾಜು. ವಿಧಾನ ಸೌಧದಲ್ಲಿ ಸಚಿವ ಉಮೇಶ್…

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಪಡೆಯುವ ಜನಸಾಮಾನ್ಯರಿಗೆ ಪಡಿತರದ ಮೂಲಕ ಸ್ಥಳೀಯ ಕೆಂಪು ಕುಚ್ಚಲಕ್ಕಿ ವಿತರಿಸಬೇಕೆಂದು ಪ್ರಸ್ತಾವನೆ ಬಂದ ಹಿನ್ನೆಲೆಯಲ್ಲಿ, ಇಂದು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ

ಕೋವಿಡ್ ನಿಂದ ಮೃತಪಟ್ಟ ಮಹಿಳೆ, ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ ಘಟಕದ ವತಿಯಿಂದ ಅಂತ್ಯಕ್ರಿಯೆ

ಅರಸಿನಮಕ್ಕಿಯ ಉಡ್ಯೆರೆ ನಿವಾಸಿ ಪದ್ಮಯ ಗೌಡ ಅವರ ಪತ್ನಿ ಕುಸುಮಾವತಿ ಅವರು ಇಂದು ಬೆಳಗ್ಗೆ ಕೋವಿಡ್ ನಿಂದ ಮೃತಪಟ್ಟಿದ್ದರು. ಈ ವಿಷಯ ತಿಳಿದ ತಕ್ಷಣ ಅವರ ಅಂತ್ಯಕ್ರಿಯೆಯನ್ನು ಹಿಂದೂ ಜಾಗರಣ ವೇದಿಕೆ ನೆಲ್ಯಾಡಿಯ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯತ್ ನೆಲ್ಯಾಡಿ ಇವರ ಸಹಕಾರದೊಂದಿಗೆ ಪಿಪಿಇ ಕಿಟ್

ಕಡಬ ತಾಲೂಕು : ಪತ್ರಕರ್ತರ ಗ್ರಾಮ ವಾಸ್ತವ್ಯದ ಫಲಶ್ರುತಿ , ಶಿವರಾಮ ಅವರ ಮನೆಗೆ ಕೊನೆಗೂ ವಿದ್ಯುತ್ ಬೆಳಕು

ಕೊಂಬಾರಿನಲ್ಲಿ ನಡೆದ ಕಡಬ ತಾಲೂಕು ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನಡೆದ ಪತ್ರಕರ್ತರ ಗ್ರಾಮವಾಸ್ತವ್ಯದಲ್ಲಿ ಬೇಡಿಕೆ ಸಲ್ಲಿಸಿದ ವ್ಯಕ್ತಿಯೊಬ್ಬರ ಮನೆಗೆ ಕೊನೆಗೂ ವಿದ್ಯುತ್ ಸಂಪರ್ಕ ಆಗಿದೆ. ಕಡಬ ತಾಲೂಕು ಕೊಂಬಾರು ಗ್ರಾಮದ ಶಿವರಾಮ ಅವರು ತನ್ನ

ಕರ್ತವ್ಯ ನಿರತ ಮಲ್ಲೂರು ಪಿಡಿಒಗೆ ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಮಂಗಳೂರು: ಮಲ್ಲೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ(ಪಿಡಿಒ) ಕರ್ತವ್ಯದಲ್ಲಿದ್ದ ವೇಳೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಪಲ್ಟಿಯಾದ ಹಾಲು ಸಾಗಾಟದ ವಾಹನ | ಸಾವಿರ ಲೀಟರ್ ಹಾಲು ರಸ್ತೆ ಪಾಲು

ಬೀದಿ ನಾಯಿಯೊಂದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಹಾಲಿನ ವಾಹನ ಪಲ್ಟಿಯಾಗಿ ಸುಮಾರು 1 ಸಾವಿರಕ್ಕೂ ಅಧಿಕ ಲೀಟರ್ ಹಾಲು ರಸ್ತೆ ಪಾಲಾದ ಬಗ್ಗೆ ಘಟನೆ ಧಾರವಾಡ ಜೆಎಸ‌್‌ಎಸ್‌ಕಾಲೇಜ್ ಬಳಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಿಂದ ಧಾರವಾಡ ಕೆಎಂಎಫ್‍ಗೆ ಹಾಲು ತುಂಬಿಕೊಂಡು

ಪಡೀಲ್ : ಲಾರಿ ಪಲ್ಟಿ, ಚಾಲಕ ಸಹಿತ ಇಬ್ಬರಿಗೆ ಗಾಯ

ಮಂಗಳೂರು : ಪಡೀಲ್ ಕ್ರಾಸ್ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ಕಳಕೊಂಡು ಪಲ್ಟಿಯಾದ ಘಟನೆ ಗುರುವಾರ ನಡೆದಿದೆ. ಈ ಘಟನೆಯಿಂದ ಲಾರಿ ಚಾಲಕ ಪ್ರಮೋದ್ ಮತ್ತು ಕ್ಲೀನರ್ ಕಾರ್ತಿಕ್ ಎಂಬವರಿಗೆ ಗಾಯವಾಗಿದೆ. ಪಣಂಬೂರಿನಿಂದ ಮಂಡ್ಯದ ಮದ್ದೂರಿಗೆ ಕೋಕ್ ಸಲ್ಫರ್ ಹೇರಿಕೊಂಡು ಹೋಗುತ್ತಿದ್ದ ಈ

ಆತ ಕರ್ತವ್ಯಕ್ಕೆ ಹಾಜರಾಗಿದ್ದು ಆಕ್ಸಿಜನ್ ಸಿಲಿಂಡರ್ ಜೊತೆಗೆ | ಇಲ್ಲಿದೆ ಕಂಪ್ಲೀಟ್ ಸ್ಟೋರಿ

ಕೊರೊನಾ ಸೋಂಕಿನಿಂದ ಬಳಲುತ್ತಿದ್ದರೂ ರಜೆ ನೀಡಲು ನಿರಾಕರಿಸಿದ ಕಾರಣಕ್ಕೆ ಕೋಪಗೊಂಡ ಬ್ಯಾಂಕ್ ಸಿಬ್ಬಂದಿಯೊಬ್ಬರು ಆಕ್ಸಿಜನ್ ಸಿಲಿಂಡರ್ ಸಹಿತ ಕೆಲಸಕ್ಕೆ ಹಾಜರಾಗಿರುವ ಘಟನೆ ಜಾರ್ಖಂಡ್‌ನ ಬೊಕೊರಾದಲ್ಲಿ ನಡೆದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಉದ್ಯೋಗಿ ಅರವಿಂದ್ ಕುಮಾರ್ ಈ ರೀತಿ ಮಾಡಿದ್ದು,

ಬೆಳ್ತಂಗಡಿ | ಅಕ್ರಮ ಕಸಾಯಿಖಾನೆಗೆ ಪೊಲೀಸರ ದಿಢೀರ್ ದಾಳಿ, ಇಬ್ಬರ ಬಂಧನ

ಕಳೆಂಜ ಗ್ರಾಮದ ಕುಡುಪ್ಪಾರು ಎಂಬಲ್ಲಿ ರಬ್ಬರ್ ತೋಟದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ಪೊಲೀಸರು ದಿಢೀರ್ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ 3 ಕ್ವಿಂಟಾಲ್ ದನದ ಮಾಂಸ ವಶಪಡಿಸಿಕೊಂಡ ಘಟನೆ ಮೇ.26 ರಂದು ನಡೆದಿದೆ. ಕಳೆಂಜ ಗ್ರಾಮದ ಕುಡುಪ್ಪಾರು

ಪಂಪ್‌ವೆಲ್ ಫ್ಲೈಓವರ್ ನಲ್ಲಿ ಅಪಘಾತ: ದ್ವಿಚಕ್ರ ವಾಹನ ಸವಾರನಿಗೆ ಗಾಯ

ಮಂಗಳೂರು : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಉರುಳಿಬಿದ್ದ ಘಟನೆ ನಗರದ ಪಂಪ್ ವೆಲ್ ನಲ್ಲಿರುವ ಫ್ಲೈಓವರ್ ನಲ್ಲಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಸಂಭವಿಸಿದೆ. ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ

ಸುಳ್ಯ | ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಕ್ರಿಕೆಟ್ | ಅಧಿಕಾರಿಗಳ ದಾಳಿ,ಓಟಕ್ಕಿತ್ತ ಆಟಗಾರರು| ಬ್ಯಾಟ್,ಬಾಲ್,ವಿಕೆಟ್…

ಸುಳ್ಯ : ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ನಿಯಮಾವಳಿಯನ್ನು ಉಲ್ಲಂಘಿಸಿ ಕ್ರಿಕೆಟ್ ಆಟವಾಡುತ್ತಿದ್ದ ಮೈದಾನಕ್ಕೆ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಹಾಗೂ ಕಾರ್ಯಪಡೆ ಸದಸ್ಯರು ದಾಳಿ ನಡೆಸಿ ಕ್ರಿಕೆಟ್ ಆಟಕ್ಕೆ ಬಳಸುತಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.