ಸುಳ್ಯ | ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಕ್ರಿಕೆಟ್ | ಅಧಿಕಾರಿಗಳ ದಾಳಿ,ಓಟಕ್ಕಿತ್ತ ಆಟಗಾರರು| ಬ್ಯಾಟ್,ಬಾಲ್,ವಿಕೆಟ್ ವಶಕ್ಕೆ

ಸುಳ್ಯ : ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ನಿಯಮಾವಳಿಯನ್ನು ಉಲ್ಲಂಘಿಸಿ ಕ್ರಿಕೆಟ್ ಆಟವಾಡುತ್ತಿದ್ದ ಮೈದಾನಕ್ಕೆ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಹಾಗೂ ಕಾರ್ಯಪಡೆ ಸದಸ್ಯರು ದಾಳಿ ನಡೆಸಿ ಕ್ರಿಕೆಟ್ ಆಟಕ್ಕೆ ಬಳಸುತಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊಲ್ಲಮೊಗ್ರು ಗ್ರಾಮದ ತೋಟದಮಜಲು, ಕಟ್ಟ, ಗಡಿಕಲ್ಲು ಸ್ಥಳದಲ್ಲಿ ಕೆಲ ಯುವಕರು, ಬಾಲಕರು ಸೇರಿ ಕ್ರಿಕೆಟ್ ಆಡುತ್ತಿದ್ದರೆನ್ನಲಾಗಿದೆ.

ಈ ಮಾಹಿತಿ ಅರಿತ ಗ್ರಾ.ಪಂ. ಪಿಡಿಒ ರವಿಚಂದ್ರ ಮತ್ತು ಸಿಬ್ಬಂದಿ ಸಂತೋಷ್ ಅಲ್ಲಿಗೆ ತೆರಳಿದ್ದಾರೆ.

ಈ ವೇಳೆ ಕ್ರಿಕೆಟ್ ಆಡುತ್ತಿದ್ದವರು ಬ್ಯಾಟ್, ವಿಕೆಟ್, ಬಾಲ್ ಬಿಟ್ಟು ಓಡಿ ಹೋಗಿದ್ದು,ಅವುಗಳನ್ನು ವಶಕ್ಕೆ ಪಡೆಯಲಾಗಿದೆ.

Leave A Reply

Your email address will not be published.