Dakshina Kannada: ಡ್ಯಾಂನಲ್ಲಿ ನೀರಿನ ಮಟ್ಟ ಕುಸಿತ; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ಕುಡಿಯುವ ನೀರು

Dakshina Kannada: ಕರಾವಳಿಯಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಬೇಸಿಗೆ ಬೇಗೆ ಜನರನ್ನು ಮನೆಯಿಂದ ಹೊರಗೆ ಹೋಗದ ಹಾಗೆ ಮಾಡಿದೆ. ಇನ್ನೊಂದು ಕಡೆ ತಾಪಮಾನದ ಏರಿಕೆಯಿಂದ ಬಾವಿ, ನದಿಗಳಲ್ಲಿ ನೀರು ಬತ್ತಿ ಹೋಗಿದೆ. ಅದರಲ್ಲೂ ಕರಾವಳಿಯ ಜೀವನದಿ ನೇತ್ರಾವತಿಯ ನೀರಿನ ಮಟ್ಟ ಕುಸಿದಿದೆ.

ಇದನ್ನೂ ಓದಿ: ಬದಲಾದ ಕ್ರೆಡಿಟ್ ಕಾರ್ಡ್ ನಿಯಮಗಳು; ಏನೇನು ಬದಲಾವಣೆ ಗೊತ್ತಾ? ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹೀಗಾಗಿ ತುಂಬೆ ವೆಂಟೆಂಡ್‌ ಡ್ಯಾಮ್‌ನಲ್ಲಿ ನೀರಿಗೆ ಬರ ಬಂದಿದೆ. ಡ್ಯಾಮ್‌ನಲ್ಲಿ ನೀರಿನ ಮಟ್ಟ 4.20 ಇಳಿಕೆಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರಿಗರಿಗೆ ಇನ್ನು ನಾಳೆಯಿಂದ ಎರಡು ದಿನಕ್ಕೊಮ್ಮೆ ನೀರಿನ ರೇಷನಿಂಗ್‌ ಮಾಡುವ ಮಾಹಿತಿ ಹೊರಬಿದ್ದಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕರು ಅನಗತ್ಯ ನೀರು ಪೋಲು ಮಾಡಬಾರದೆಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜನರಲ್ಲಿ ಮನವಿ ಮಾಡಿದ್ದಾರೆ. ಎರಡು ದಿನಕ್ಕೊಮ್ಮೆ ನೀರಿನ ರೇಷನಿಂಗ್‌ ಮಾಡುವ ಮೂಲಕ ನಿತ್ಯ ಸುಮಾರು 40 ರಿಂದ 50 ಎಂ.ಎಲ್‌.ಡಿ ನೀರು ಉಳಿಕೆಯಾಗಲಿದೆ ಎಂದು ಹೇಳಲಾಗಿದೆ.

ನೀರನ್ನು ಗಾರ್ಡನಿಂಗ್‌ಗೆ, ವಾಹನ ತೊಳೆಯಲು ಬಳಸಿಕೊಂಡರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಹೇಳಿದೆ. ಜೂನ್‌ ಮೊದಲ ವಾರದೊಳಗೆ ಮುಂಗಾರು ಬಂದರೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ.

ಇದನ್ನೂ ಓದಿ: Madikeri: ಅತ್ತೆಯನ್ನು ಕೊಂದ ಸೊಸೆ; ಸಹಜ ಸಾವು ಎಂದು ಬಿಂಬಿಸಿ ಅಂತ್ಯಕ್ರಿಯೆ, 15 ದಿನ ನಂತರ ಬಯಲಾಯ್ತು ಕೊಲೆಯ ಭೀಕರ ರಹಸ್ಯ

Leave A Reply

Your email address will not be published.