H D Devegowda: ಪ್ರಜ್ವಲ್ ಓಕೆ, ರೇವಣ್ಣ ಯಾಕೆ? ಕೊನೆಗೂ ಮೌನ ಮುರಿದ ದೊಡ್ಡ ಗೌಡರ !!
H D Devegowda: ಅಶ್ಲೀಲ ವಿಡಿಯೋ ವಿಚಾರವಾಗಿ ಮೊಮ್ಮಗ ಪ್ರಜ್ವಲ್ ರೇವಣ್ಣನನ್ನು(Prajwal Revanna)ಪಕ್ಷದಿಂದ ಅಮಾನತು ಮಾಡಿ, ಮಗ ರೇವಣ್ಣನ ಬಂಧನ ಆದರೂ ಮೌನಕ್ಕೆ ಜಾರಿದ್ದ ಮಾಜಿ ಪ್ರಧಾನಿ ದೇವೇಗೌಡರು(H D Devegowda) ಕೊನೆಗೂ ಈ ವಿಚಾರವಾಗಿ ಮೌನ ಮುರಿದಿದ್ದಾರೆ.
ಇದನ್ನೂ ಓದಿ: Everest and MDH Masala: ಎವರೆಸ್ಟ್, ಎಂಡಿಎಚ್ ಮಸಾಲೆಯಲ್ಲಿ ಕ್ಯಾನ್ಸರ್ ಬರುವ ಅಂಶ ಪತ್ತೆ-ನೇಪಾಳದಲ್ಲಿ ನಿಷೇಧ
ಪ್ರಜ್ವಲ್ ತಪ್ಪುಮಾಡಿದ್ದಾನೆ ತಯಾರಾಗುತ್ತಿದ್ದು ಅವನ ಮೇಲೆ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ನಮ್ಮದು ಯಾವ ತಕರಾರು ಇಲ್ಲ, ಆದರೆ ರೇವಣ್ಣ ಏನು ಮಾಡಿದ್ರು? ಅವರ ಬಗ್ಗೆ ಯಾಕೆ ಸರ್ಕಾರ ಷಡ್ಯಂತ್ರ ಮಾಡಿರೋದು? ಇದು ರಾಜ್ಯದ ಜನರಿಗೆ ಗೊತ್ತಿದೆ. ಇದರಲ್ಲಿ ರೇವಣ್ಣರನ್ನ ಯಾವ ರೀತಿ ಸಿಲುಕಿಸಿದ್ದಾರೆ, ಕೇಸ್ ಹೇಗೆ ದಾಖಲು ಮಾಡಿದ್ದಾರೆ ಎಂಬುದು ತಿಳಿದಿದೆ ಎಂದು ಎಚ್‌ಡಿ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Prajwal Revanna Video: ಪ್ರಜ್ವಲ್ ರೇವಣ್ಣ ಅಕೌಂಟ್‌ಗೆ ಬೆಂಗಳೂರಿನಿಂದ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ
ಹಾಸನ ಪೆನ್‌ಡ್ರೈವ್(Pendrive) ಪ್ರಕರಣದಲ್ಲಿ ಯಾರಾಗೂ ಗೊತ್ತಿಲ್ಲದೆ ಪ್ರಜ್ವಲ್ ಹೊರಗಡೆ ಹೋಗಿದ್ದಾರೆ. ಆದರೆ ಈ ಘಟನೆ ಬಗ್ಗೆ ನಮ್ಮ ಇಡೀ ಕುಟುಂಬದ ಪರವಾಗಿ ಕುಮಾರಸ್ವಾಮಿಯವರು ಉತ್ತರ ಕೊಟ್ಟಿದ್ದಾರೆ. ಕಾನೂನು ಏನಿದೆಯೋ ಆ ಕಾನೂನಿನ ವ್ಯಾಪ್ತಿಯಲ್ಲಿ ಏನೇನು ಕ್ರಮ ಕೈಗೊಳ್ಳಬೇಕೋ ಆ ಕ್ರಮ ಕೈಗೊಳ್ಳೋದು ಸರ್ಕಾರದ ಜವಾಬ್ದಾರಿ, ಸರ್ಕಾರ ಹಾಗೆ ಮಾಡಲಿ ಅಂತಾ ಹೇಳಿದ್ದಾರೆ. ಆದರೆ ರೇವಣ್ಣನ(H D Revanna) ಸಿಲುಕಿಸಿರೋದು ಮಾತ್ರ ಷಡ್ಯಂತ್ರ ಎಂದು ಹೇಳಿದ್ದಾರೆ.
ಅಲ್ಲದೆ ರೇವಣ್ಣ ವಿಚಾರದಲ್ಲಿ ಕೋರ್ಟ್‌ನಲ್ಲಿ ಏನು ನಡೆಯುತ್ತಿದೆ. ಅದರ ಬಗ್ಗೆ ನಾನು ಈಗ ಕಾಮೆಂಟ್ ಮಾಡೊಲ್ಲ. ಸತ್ಯ ಗೆಲ್ಲಲಿದೆ. ಸಂತ್ರಸ್ತೆಯರಿಗೆ ನ್ಯಾಯ ಸಿಗಬೇಕು ಅಷ್ಟೇ ಎಂದೂ ಅವರು ಹೇಳಿದ್ದಾರೆ.
[…] […]