Uncategorized

ಕದ್ರಿ ಪೊಲೀಸ್ ಠಾಣಾ ಎ.ಎಸೈ ವಿಜಯ್ ಕಾಂಚನ್ ಅವರಿಗೆ ರಾಷ್ಟ್ರಪತಿ ಪದಕ

ಮಂಗಳೂರು : ಕದ್ರಿ ಪೊಲೀಸ್ ಠಾಣೆಯ ಎಎಸ್‌ಐ ವಿಜಯ್ ಕಾಂಚನ್ ಅವರಿಗೆ ರಾಷ್ಟ್ರಪತಿಯ ಪದಕ ಘೋಷಿಸಲಾಗಿದೆ. ವಿಜಯ್ ಕಾಂಚನ್ ಅವರು ಸೇವಾವಧಿಯಲ್ಲಿ ಸಲ್ಲಿಸಿದ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ಲಭಿಸಿದೆ.

ಬೆಳ್ತಂಗಡಿ : ಸವಣಾಲಿನ ಸುನೀತಾ ಡಿ’ಸೋಜ ಅನಾರೋಗ್ಯದಿಂದ ನಿಧನ

ಬೆಳ್ತಂಗಡಿ : ಸವಣಾಲು ಗ್ರಾಮದ ಪಾಲಡ್ಕ ಮನೆಯ ನವೀನ್ ರವರ ಧರ್ಮಪತ್ನಿ ಸುನೀತ ಡಿ’ಸೋಜ (35ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಜ.19 ರಂದು ನಿಧನರಾದರು. ಮೃತರು ತಂದೆ ಜೋಖಿಮ್ ಡಿ’ಸೋಜ, ತಾಯಿ ಲೀನಾ ವೇಗಸ್, ಸಹೋದರರಾದ ರೋಶನ್, ರೂಬನ್, ಸಹೋದರಿ ಅನಿತಾ, ಅತ್ತೆ ಮನ್ವೆಲಿನ್ ಹಾಗೂ ಬಂದು ವರ್ಗದವರನ್ನೂ ಅಗಲಿದ್ದಾರೆ.

ಹಬ್ಬಕ್ಕೆ ಹೋಗುತ್ತಿದ್ದ ಮಹಿಳೆ ಅಪಘಾತಕ್ಕೆ ಬಲಿ | ಕೆಲವೇ ದಿನಗಳ ಹಿಂದೆ ಕುವೈಟ್‌ ‌ನಿಂದ ಊರಿಗೆ ಬಂದಿದ್ದರು

ಉಡುಪಿ : ಪತಿ ಮತ್ತು ಮಗನೊಂದಿಗೆ ಸಾಂತ್ಮಾರಿ ಹಬ್ಬಕ್ಕೆ ಹೋಗುತ್ತಿದ್ದ ಮಹಿಳೆಯೋರ್ವರು ರಸ್ತೆ ಅಪಘಾತಕ್ಕೆ ಒಳಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಬುಧವಾರ ನಿಧನ ಹೊಂದಿದರು. ಕೆಲವೇ ದಿನಗಳ ಹಿಂದೆ ಕುವೈಟ್‌ನಿಂದ ಆಗಮಿಸಿದ್ದ ಪತಿ ಅನಿಲ್ ಪಿಂಟೊ ಮತ್ತು 3 ವರ್ಷದ ಮಗನೊಂದಿಗೆ ಕೋಟದಲ್ಲಿರುವ ತನ್ನ ತಂದೆ ತಾಯಿ ಮನೆಗೆ ದ್ವಿಚಕ್ರ ವಾಹನದಲ್ಲಿ ಸೋಮವಾರ ತೆರಳುತ್ತಿದ್ದ ಸರಿತಾ ಪಿಂಟೊ (38), ಬ್ರಹ್ಮಾವರದಲ್ಲಿ ನಡೆದ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಪತಿ ಮತ್ತು ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, …

ಹಬ್ಬಕ್ಕೆ ಹೋಗುತ್ತಿದ್ದ ಮಹಿಳೆ ಅಪಘಾತಕ್ಕೆ ಬಲಿ | ಕೆಲವೇ ದಿನಗಳ ಹಿಂದೆ ಕುವೈಟ್‌ ‌ನಿಂದ ಊರಿಗೆ ಬಂದಿದ್ದರು Read More »

ಮುಸ್ಲಿಂ ವ್ಯಕ್ತಿಯೊಂದಿಗೆ ಹಿಂದು ವಿವಾಹಿತೆ ರೈಲಿನಲ್ಲಿ ಪ್ರಯಾಣ | ಇಬ್ಬರನ್ನು ಹಿಡಿದು ಪೊಲೀಸ್ ಠಾಣೆಗೆ ಎಳೆದೊಯ್ದ ಬಜರಂಗದಳದ ಕಾರ್ಯಕರ್ತರು

ಮುಸ್ಲಿಂ ವ್ಯಕ್ತಿ ಹಾಗೂ ಹಿಂದೂ ವಿವಾಹಿತೆ ರೈಲಿನಲ್ಲಿ ಜೊತೆಗೆ ಪ್ರಯಾಣಿಸುತ್ತಿದ್ದದ್ದನ್ನು ಕಂಡ ಬಜರಂಗದಳದ ಸದಸ್ಯರು ಉಜ್ಜಯಿನಿ ರೈಲ್ವೆ ಪೊಲೀಸ್ ಠಾಣೆಗೆ ಎಳೆದೊಯ್ದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮುಸ್ಲಿಂ ವ್ಯಕ್ತಿ ಮತ್ತು ಹಿಂದೂ ಮಹಿಳೆ ರೈಲಿನಲ್ಲಿ ಜೊತೆಯಾಗಿ ಪ್ರಯಾಣಿಸಿದ್ದಾರೆ. ಇದು ಲವ್ ಜಿಹಾದ್ ಎಂದು ಭಜರಂಗದಳದ ಸದಸ್ಯರು ಆರೋಪಿಸಿದ್ದಾರೆ. ನಂತರ ಮುಸ್ಲಿಂ ವ್ಯಕ್ತಿಯನ್ನು ರೈಲಿನಿಂದ ಕೆಳಗಿಳಿಸಿ ಹಲ್ಲೆ ನಡೆಸಿ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಂದೋರ್‌ನ ಈ ಇಬ್ಬರು ಪ್ರಯಾಣಿಕರು ಮತ್ತು …

ಮುಸ್ಲಿಂ ವ್ಯಕ್ತಿಯೊಂದಿಗೆ ಹಿಂದು ವಿವಾಹಿತೆ ರೈಲಿನಲ್ಲಿ ಪ್ರಯಾಣ | ಇಬ್ಬರನ್ನು ಹಿಡಿದು ಪೊಲೀಸ್ ಠಾಣೆಗೆ ಎಳೆದೊಯ್ದ ಬಜರಂಗದಳದ ಕಾರ್ಯಕರ್ತರು Read More »

ಆತ್ಮಗಳ ಜೊತೆ ಮಾತನಾಡುತ್ತೇನೆಂದು ಮನೆಬಿಟ್ಟು ತೆರಳಿದ್ದ ಯುವತಿ ಎರಡು ತಿಂಗಳ ಬಳಿಕ ಪತ್ತೆ !! | ಅಷ್ಟಕ್ಕೂ ಆಕೆ ಇಷ್ಟು ದಿನ ಎಲ್ಲಿದ್ದಳು ಗೊತ್ತಾ??

ಎಂದಿಗೂ ಒಬ್ಬಂಟಿಯಾಗಿ ಹೊರಗೆ ಹೋಗದ 17 ವರ್ಷದ ಬಾಲಕಿ ಅನುಷ್ಕಾ ವರ್ಮ ಮಾಟ ಮಂತ್ರದ ಆಕರ್ಷಣೆಗೊಳಗಾಗಿ ಮನೆ ಬಿಟ್ಟು ಹೋಗಿದ್ದು, ಇದೀಗ 2 ತಿಂಗಳ ನಂತರ ಮನೆಗೆ ಮರಳಿದ್ದಾಳೆ ಎಂದು ತಿಳಿದುಬಂದಿದೆ. ಶಮನಿಸಂ ಆಚರಣೆಯೆಡೆಗೆ ಆಕರ್ಷಿತಳಾಗಿದ್ದ ಬಾಲಕಿ ಕಳೆದ ಅ. 31ರಂದು ಮನೆಬಿಟ್ಟು ನಾಪತ್ತೆಯಾಗಿದ್ದಳು.ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಅಪ್ರಾಪ್ತೆ ಅನುಷ್ಕಾ ವರ್ಮಾ ಗುಜರಾತ್‌ನ ಸೂರತ್‌ನ ಅನಾಥಾಶ್ರಮವೊಂದರಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಪತ್ತೆಹಚ್ಚಿ ನಗರಕ್ಕೆ ಕರೆತಂದಿರುವ ಸುಬ್ರಹ್ಮಣ್ಯನಗರ ಪೊಲೀಸರು ಆಕೆಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ತಮ್ಮ ಮಗಳು ಕಾಣೆಯಾಗಿರುವುದರ ಸಂಬಂಧ ಅನುಷ್ಕಾ ತಂದೆ …

ಆತ್ಮಗಳ ಜೊತೆ ಮಾತನಾಡುತ್ತೇನೆಂದು ಮನೆಬಿಟ್ಟು ತೆರಳಿದ್ದ ಯುವತಿ ಎರಡು ತಿಂಗಳ ಬಳಿಕ ಪತ್ತೆ !! | ಅಷ್ಟಕ್ಕೂ ಆಕೆ ಇಷ್ಟು ದಿನ ಎಲ್ಲಿದ್ದಳು ಗೊತ್ತಾ?? Read More »

ಪುತ್ತೂರು: ಅನ್ಯಕೋಮಿನ ಯುವಕರ ನಡುವೆ ಪರಸ್ಪರ ಹಲ್ಲೆ | ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ ಪೊಲೀಸರು, ನಾಲ್ವರ ಬಂಧನ

ಅನ್ಯಕೋಮಿನ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದು ನಂತರ ಅದು ಪರಸ್ಪರ ಹಲ್ಲೆಗೆ ತಿರುಗಿ ಘಟನಾ ಸ್ಥಳಕ್ಕೆ ಪೊಲೀಸರು ಬಂದು ಲಘು ಲಾಠಿಪ್ರಹಾರದ ಮೂಲಕ ಗುಂಪು ಚದುರಿಸಿದ ಘಟನೆ ಪುತ್ತೂರಿನ ಕೆದಿಲ ಗ್ರಾಮದ ಗಡಿಯಾರದಲ್ಲಿ ತಡರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗಡಿಯಾರದ ಸತ್ತಿಕಲ್ಲು ನಿವಾಸಿ ರಷ್ಪಕ್, ಪೆರ್ನೆ ನಿವಾಸಿಗಳಾದ ಹರ್ಷಿತ್, ಸತೀಶ್, ಜಗದೀಶ್ ಎನ್ನಲಾಗಿದೆ. ಅನ್ಯಕೋಮಿನ ಯುವಕರ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆದಾಗ ಪೊಲೀಸರು ಸ್ಥಳಕ್ಕಾಗಮಿಸಿ ಗುಂಪು ಚದುರಿಸಿದ್ದಾರೆ. …

ಪುತ್ತೂರು: ಅನ್ಯಕೋಮಿನ ಯುವಕರ ನಡುವೆ ಪರಸ್ಪರ ಹಲ್ಲೆ | ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ ಪೊಲೀಸರು, ನಾಲ್ವರ ಬಂಧನ Read More »

ಶುರುವಾಗಿದೆ ಸೆಲೆಬ್ರಿಟಿಗಳ ವಿಚ್ಛೇದನ ಪರ್ವ !! | ಜನಪ್ರಿಯ ಮಹಾಭಾರತ ಧಾರಾವಾಹಿಯ “ಕೃಷ್ಣ” ಪಾತ್ರಧಾರಿಯಿಂದ ಪತ್ನಿಗೆ ಡಿವೋರ್ಸ್

ಇತ್ತೀಚೆಗೆ ಸಿನಿಮಾ ತಾರೆಯರ ವಿಚ್ಛೇದನ ಪರ್ವವೇ ಶುರುವಾದಂತಿದೆ. ಇದೀಗ ಜನಪ್ರಿಯ ಧಾರವಾಹಿ ಮಹಾಭಾರತದಲ್ಲಿ ಕೃಷ್ಣನ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಿತೀಶ್ ಭಾರದ್ವಾಜ್ ಅವರು 12 ವರ್ಷಗಳ ದಾಂಪತ್ಯದ ನಂತರ ತಮ್ಮ ಪತ್ನಿಯಿಂದ ಬೇರ್ಪಟ್ಟಿರುವುದಾಗಿ ಘೋಷಿಸಿದ್ದಾರೆ. ನಟ ಧನುಷ್ ಮತ್ತು ರಜನಿಕಾಂತ್ ಅವರ ಮಗಳು ಐಶ್ವರ್ಯಾ ತಮ್ಮ 18 ವರ್ಷಗಳ ದಾಂಪತ್ಯಕ್ಕೆ ತೆರೆ ಎಳೆಯುವ ಘೋಷಣೆ ಮಾಡಿದ ಕೆಲವೇ ಗಂಟೆಗಳ ನಂತರ ಈ ಸುದ್ದಿ ಬಂದಿದೆ. ‘ನಾನು ಕಾನೂನಿನ ಬಗ್ಗೆ ದೃಢ ನಂಬಿಕೆ ಹೊಂದಿದ್ದೇನೆ. ಆದರೆ, ನಾನು ದುರಾದೃಷ್ಟವಂತನಾಗಿದ್ದೇನೆ. …

ಶುರುವಾಗಿದೆ ಸೆಲೆಬ್ರಿಟಿಗಳ ವಿಚ್ಛೇದನ ಪರ್ವ !! | ಜನಪ್ರಿಯ ಮಹಾಭಾರತ ಧಾರಾವಾಹಿಯ “ಕೃಷ್ಣ” ಪಾತ್ರಧಾರಿಯಿಂದ ಪತ್ನಿಗೆ ಡಿವೋರ್ಸ್ Read More »

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ | ಕೂದಲೆಳೆ ಅಂತರದಲ್ಲಿ ತಪ್ಪಿದ 2 ವಿಮಾನಗಳ ನಡುವಿನ ಡಿಕ್ಕಿ

ಇತ್ತೀಚೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ಎರಡು ಇಂಡಿಗೋ ದೇಶೀಯ ವಿಮಾನಗಳು ಹಾರಾಟ ನಡೆಸುತ್ತಿರುವಾಗ ಡಿಕ್ಕಿ ಹೊಡೆದು ಸಂಭವಿಸಬಹುದಾಗಿದ್ದ ಅಪಘಾತ ತಪ್ಪಿದ ಘಟನೆ ನಡೆದಿದೆ. ಆದರೆ ವಿಪರ್ಯಾಸವೆಂದರೆ, ಈ ಘಟನೆಯನ್ನು ವಿಮಾನ ನಿಲ್ದಾಣದ ಲಾಗ್‌ಬುಕ್‌ಗಳಲ್ಲಿ ದಾಖಲಿಸುವುದಾಗಲಿ ಅಥವಾ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ದೇಶದ ವಾಯುಯಾನ ನಿಯಂತ್ರಕಕ್ಕೆ ವರದಿ ಮಾಡುವುದಾಗಲಿ ಮಾಡಿಲ್ಲ. ಇಂತಹ ಘಟನೆಗಳಾದಾಗ ಇವೆರಡೂ ಕಡ್ಡಾಯವಾಗಿರುತ್ತದೆ. ಮೊನ್ನೆ ಜನವರಿ 7ರಂದು ಬೆಳಗ್ಗೆ 8.45ರ ಸುಮಾರಿಗೆ ಸಂಭವಿಸಿದ ಘಟನೆಗೆ ಏರ್ ಟ್ರಾಫಿಕ್ ಕಂಟ್ರೋಲ್ ರೂಂನಲ್ಲಿ ನಿಯಂತ್ರಕರ …

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ | ಕೂದಲೆಳೆ ಅಂತರದಲ್ಲಿ ತಪ್ಪಿದ 2 ವಿಮಾನಗಳ ನಡುವಿನ ಡಿಕ್ಕಿ Read More »

ಪಂಜ : ಬೈಕ್-ಸ್ಕೂಟರ್ ಡಿಕ್ಕಿ, ಸವಾರರಿಗೆ ಗಾಯ

ಪಂಜ ಪೇಟೆಯಲ್ಲಿ ಬೈಕ್ ಮತ್ತು ಸ್ಕೂಟರ್ ಡಿಕ್ಕಿ ಹೊಡೆದು ಸವಾರರಿಗೆ ಗಾಯಗೊಂಡ ಘಟನೆ ಜ. 18 ರಂದು ರಾತ್ರಿ ವರದಿಯಾಗಿದೆ. ಪಂಜ ಪೇಟೆಗೆ ಬರುತ್ತಿದ್ದ ಶಶಿಧರ ಎಂಬವರ ಬೈಕ್ ಮತ್ತು ಸುಳ್ಯ ಕಡೆಗೆ ಹೋಗುತ್ತಿದ್ದ ಪುನೀತ್ ಎಂಬವರ ಸ್ಕೂಟರ್ ಡಿಕ್ಕಿಯಾಗಿದೆ. ಶಶಿಧರರ ಕಾಲಿನ ಭಾಗಕ್ಕೆ ಗಾಯವಾಗಿದ್ದು ಅವರನ್ನು ಕಡಬ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪುನೀತ್ ರವರ ಕೈ ಭಾಗಕ್ಕೆ ಸಣ್ಣಗಾಯವಾಗಿದೆ.

ಬಹಳ ವಿಶೇಷವಾಗಿ ಮದುವೆಯಾಗುತ್ತಿದೆ ಈ ಜೋಡಿ |ಅತಿಥಿಗಳ ಮನೆಗೆ ಬರಲಿದೆಯಂತೆ ಮದುವೆಯ ಬಾಡೂಟ| ಹೇಗೆ ಅಂತೀರಾ.. ಮದುವೆ ಪ್ಲಾನ್ ಕುರಿತು ಇಲ್ಲಿದೆ ವರದಿ

ಮದುವೆ ಬಗ್ಗೆ ಹಲವರಿಗೆ ಹಲವಾರು ಕಲ್ಪನೆಗಳಿರುತ್ತವೆ. ಆದರೆ ಈ ಕೊರೊನಾ ಕಾಲದಲ್ಲಿ ಸರಕಾರದ ನಿಯಮಗಳಿಂದ ಮದುವೆಗೆ ಇಂತಿಷ್ಟೇ ಜನ ಇರಬೇಕು ಎಂದು ನಿಯಮ ಮಾಡಿದೆ. ಆದರೆ ಇಲ್ಲೊಂದು ಜೋಡಿಗೆ ತಾವು ಎಲ್ಲರ ಸಮ್ಮುಖದಲ್ಲೇ ಮದುವೆಯಾಗಬೇಕು ಎಂಬ ಆಸೆ ವ್ಯಕ್ತವಾಗಿದೆ. ಅದಕ್ಕಾಗಿ ಒಂದು ಒಳ್ಳೇ ಐಡಿಯಾ ಮಾಡಿದ್ದಾರೆ. ಏನೆಂದರೆ ಈ ಮದುವೆಯಲ್ಲಿ ಸಂಬಂಧಿಕರು ಪರಿಚಯಸ್ಥರೆಲ್ಲ ಗೂಗಲ್ ಮೂಲಕ ಮೀಟ್ ಆಗ್ತಿದ್ದಾರೆ. 450 ಕ್ಕೂ ಹೆಚ್ಚು ಜನ ಗೂಗಲ್ ಮೂಲಕ ಸೇರಲಿದ್ದಾರೆ. ವೀಡಿಯೋ ಮೂಲಕ ಈ ಮದುವೆಯ ಸಂಭ್ರಮವನ್ನು ಕಣ್ತುಂಬಿಕೊಳ್ಳಲಿದ್ದಾರೆ. …

ಬಹಳ ವಿಶೇಷವಾಗಿ ಮದುವೆಯಾಗುತ್ತಿದೆ ಈ ಜೋಡಿ |ಅತಿಥಿಗಳ ಮನೆಗೆ ಬರಲಿದೆಯಂತೆ ಮದುವೆಯ ಬಾಡೂಟ| ಹೇಗೆ ಅಂತೀರಾ.. ಮದುವೆ ಪ್ಲಾನ್ ಕುರಿತು ಇಲ್ಲಿದೆ ವರದಿ Read More »

error: Content is protected !!
Scroll to Top