Parliment Election : ಮಂಡ್ಯಕ್ಕೆ ಎಚ್ ಡಿ ಕುಮಾರಸ್ವಾಮಿ ಅಭ್ಯರ್ಥಿ – ದೇವೇಗೌಡ ಘೋಷಣೆ!!

Parliment Electionಗೆ ಬಿಜೆಪಿ-ಜೆಡಿಎಸ್ ಮೈತ್ರಿ ಫಲದಿಂದಾಗಿ ಹೈವೋಲ್ಟೇಜ್ ಕ್ಷೇತ್ರವಾದ ಮಂಡ್ಯ ಜೆಡಿಎಸ್ ಪಾಲಾಗಿದ್ದು, ಅಭ್ಯರ್ಥಿ ಯಾರೆಂಬ ಕುತೂಹಲಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಯಾಕೆಂದರೆ ಇದೀಗ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಎಚ್ ಡಿ ಕುಮಾರಸ್ವಾಮಿ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ.

ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹೆಚ್​ಡಿ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯುತ್ತಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರು ಇದನ್ನು ಮಾಧ್ಯಮಗಳೆದುರು ರಿವೀಲ್ ಮಾಡಿದ್ದಾರೆ. ಮಂಡ್ಯ ಜನ ಅವನನ್ನು ಬಿಡುತ್ತಿಲ್ಲ, ಅವರೇ ಬೇಕು, ಅವರೇ ಬೇಕು ಎಂದು ಹಟ ಹಿಡಿದಿದ್ದಾರೆ ಎಂದಿದ್ದಾರೆ. ಚನ್ನಪಟ್ಟಣದ ಕಾರ್ಯಕರ್ತರ ತೀವ್ರ ವಿರೋಧದ ನಡುವೆಯೂ ಮಂಡ್ಯದಿಂದ ಕಣಕ್ಕಿಳಿಯಲು ಕುಮಾರಸ್ವಾಮಿ ಮುಂದಾಗಿದ್ದಾರೆ.

ಈ ಬಗ್ಗೆ ಬೆಳಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು ನಾನು ಮಂಡ್ಯದಿಂದ ಅನಿವಾರ್ಯವಾಗಿ ಕಣಕ್ಕಿಳಿಯುವ ಬಗ್ಗೆ ಚನ್ನಪಟ್ಟಣ ಜನತೆಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಇದಕ್ಕೆ ಚನ್ನಪಟ್ಟಣ ಮುಖಂಡರು ಸಹಮತವನ್ನ ವ್ಯಕ್ತಪಡಿಸಿದ್ದಾರೆ, ನಾವು ಇವತ್ತು ನೆಲ‌ಕಚ್ಚಿದ್ದೇವೆ, ಮತ್ತೆ ಪುಟಿದೇಳಬೇಕು. ನಮ್ಮಲ್ಲಿನ ಲೋಪದೋಷಗಳಿವೆ, ಸರಿಪಡಿಸಿಕೊಳ್ಳುತ್ತೇವೆ, ನನ್ನ ಪಕ್ಷದ ಭವಿಷ್ಯಕ್ಕಾಗಿ ಸ್ಪರ್ಧೆ ಅನಿವಾರ್ಯ ಎಂದಿದ್ದಾರೆ.

ಇನ್ನು ಹಾಸನದಿಂದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna), ಕೋಲಾರದಿಂದ ಮಲ್ಲೇಶ್‌ ಬಾಬು (Mallesh Babu) ಕಣಕ್ಕೆ ಇಳಿಯಲಿದ್ದಾರೆ.

[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

Leave A Reply

Your email address will not be published.