ಪಡೀಲ್ : ಲಾರಿ ಪಲ್ಟಿ, ಚಾಲಕ ಸಹಿತ ಇಬ್ಬರಿಗೆ ಗಾಯ

ಮಂಗಳೂರು : ಪಡೀಲ್ ಕ್ರಾಸ್ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ಕಳಕೊಂಡು ಪಲ್ಟಿಯಾದ ಘಟನೆ ಗುರುವಾರ ನಡೆದಿದೆ.

ಈ ಘಟನೆಯಿಂದ ಲಾರಿ ಚಾಲಕ ಪ್ರಮೋದ್ ಮತ್ತು ಕ್ಲೀನರ್ ಕಾರ್ತಿಕ್ ಎಂಬವರಿಗೆ ಗಾಯವಾಗಿದೆ.

ಪಣಂಬೂರಿನಿಂದ ಮಂಡ್ಯದ ಮದ್ದೂರಿಗೆ ಕೋಕ್ ಸಲ್ಫರ್ ಹೇರಿಕೊಂಡು ಹೋಗುತ್ತಿದ್ದ ಈ ಲಾರಿಯು ಪಡೀಲ್ ಕ್ರಾಸ್ ಬಳಿ ಬ್ರೇಕ್ ಫೇಲ್ ಆದ ಪರಿಣಾಮ ಡಿವೈಡರ್‌ಗೆ ಬಡಿದು ರಸ್ತೆಯ ಇನ್ನೊಂದು ಬದಿಗೆ ಮಗುಚಿ ಬಿದ್ದಿದೆ.

ಲಾರಿ ಹಿಂಬದಿ ಸಂಪೂರ್ಣ ಜಖಂ ಆಗಿದೆ. ಲಾರಿಯಲ್ಲಿದ್ದ ಕೋಕ್ ಸಲ್ಫರ್ ರಸ್ತೆಗೆ ಬಿದ್ದು ಚೆಲ್ಲಾಪಿಲ್ಲಿಯಾಗಿದೆ.

Leave A Reply

Your email address will not be published.