H D Devegowda: ಮಗ, ಮೊಮ್ಮಗನ ತಲೆಬಿಸಿ – ದೇವೇಗೌಡರ ಆರೋಗ್ಯದಲ್ಲಿ ಏರು ಪೇರು , ಹೆಚ್ಚಿದ ಆತಂಕ !!

H D Devegowda: ರಾಜ್ಯದಲ್ಲಿ ಮಗ ಮತ್ತು ಮೊಮ್ಮಗನ ಕೇಸ್‌ನಿಂದ ಚಿಂತೆಗೀಡಾಗಿರುವ ಹಾಗೂ ವಯೋಸಹಜ ಅನಾರೋಗ್ಯದಿಂದ ಮಾಜಿ ಪ್ರಧಾನಿ ದೇವೇಗೌಡರ(H D Devegowda) ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಕುಟುಂಬದಲ್ಲಿ ಆತಂಕ ಹೆಚ್ಚಿದೆ ಎನ್ನಲಾಗಿದೆ.

ಹೌದು, ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು, ಮೊಮ್ಮಗ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್(Pendrive)ಪ್ರಕರಣ ಉಂಟುಮಾಡಿರುವ ಚಿಂತೆ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಹಾಗೂ ಪತ್ನಿ ಚೆನ್ನಮ್ಮ ಆರೋಗ್ಯದ ಬಗ್ಗೆಯೂ ಕುಟುಂಬದ ಸದಸ್ಯರು ತೀವ್ರ ನಿಗಾ ವಹಿಸುತ್ತಿದ್ದಾರೆ.

ಗೌಡರನ್ನು ಆಸ್ಪತ್ರೆಗೆ ಸೇರಿಸದೆ, ಕುಟುಂಬದವರು ಮನೆಯಲ್ಲಿಯೇ ಹೆಚ್ಚು ನಿಗಾ ವಹಿಸಿ ನೋಡಿಕ್ಕೊಳ್ಳುತ್ತಿದ್ದು, ಆರೋಗ್ಯದ ಬಗ್ಗೆ ಹೆಣ್ಣು ಮಕ್ಕಳು ಸಂಪೂರ್ಣ ಮೇಲ್ವಿಚಾರಣೆ ಹೊತ್ತಿದ್ದಾರೆ ಎನ್ನಲಾಗಿದೆ. ನಿನ್ನೆ ದೇವೇಗೌಡರ ಅಳಿಯ ಹಾಗೂ ಹೃದಯ ತಜ್ಞ ಡಾ. ಸಿ.ಎನ್‌ ಮಂಜುನಾಥ್(Dr CN Manjunath) ಗೌಡರ ಮನೆಗೆ ಭೇಟಿ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಮತ್ತು ಸೂಕ್ತ ರೀತಿಯಲ್ಲಿ ಮೇಲ್ವಿಚಾರಣೆ ಮಾಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಅಲ್ಲದೆ ‘ಟಿವಿ ನೋಡಬೇಡಿ.. ಸಂಪೂರ್ಣ ರೆಸ್ಟ್ ಮಾಡಿ” ಎಂದು ದೇವೇಗೌಡರಿಗೆ ವೈದ್ಯರು ಕೂಡ ಸಲಹೆ ನೀಡಿದ್ದಾರೆ. ದೇವೇಗೌಡರ ಕೋಣೆಯಲ್ಲಿ ಒಬ್ಬ ವ್ಯಕ್ತಿಯನ್ನು ಸದಾ ನೋಡಿಕೊಳ್ಳಲು ಇರಿಸಿದ್ದಾರೆ ಎನ್ನಲಾಗಿದೆ. ಕುಟುಂಬದ ಆತ್ಮೀಯರು ಹೊರತು ಪಡಿಸಿ ಬೇರೆಯವರಿಗೆ ಅವರನ್ನು ಭೇಟಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎನ್ನಲಾಗಿದೆ.

Leave A Reply

Your email address will not be published.