Honey purity check: ಕಲಬೆರಕೆ ಜೇನುತುಪ್ಪವನ್ನು ಗುರುತಿಸುವುದು ಹೇಗೆ? : ಹೀಗೆ ಮಾಡಿ ನಕಲಿಯೋ ಅಥವಾ ಅಸಲಿಯೋ ತಿಳಿಯುತ್ತೆ

Honey Purity Check: ಕಲಬೆರಕೆ ಉತ್ಪನ್ನಗಳಿಂದಾಗಿ ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೆಲವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜೇನು ತುಪ್ಪವನ್ನು ನಾನಾ ರೀತಿಯಲ್ಲಿ ಕಲಬೆರಕೆ ಮಾಡಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಲಬೆರಕೆ ಜೇನುತುಪ್ಪವನ್ನು ಹೇಗೆ ಗುರುತಿಸಬಹುದು ಎಂದು ತಿಳಿಯೋಣ.

ನೀರಿನ ಸಹಾಯದಿಂದ ಜೇನು ನಿಜವೇ..? ಇದು ನಕಲಿಯೇ? ಗುರುತಿಸಬಹುದು. ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ಅದು ನೀರಿನ ತಳವನ್ನು ತಲುಪಿದರೆ ಅದು ಶುದ್ಧವಾಗಿರುತ್ತದೆ. ಒಂದು ವೇಳೆ ಅದು ನೀರಿನಲ್ಲಿ ಕರಗಿದರೆ ಅದು ನಕಲಿ ಜೇನುತುಪ್ಪ ಆಗಿರುತ್ತದೆ.

ಸಾಮಾನ್ಯವಾಗಿ ನೀವು ಬಿಳಿ ಬಟ್ಟೆಯ ಮೇಲೆ ಜೇನುತುಪ್ಪವನ್ನು ಹಾಕಿದರೆ ಅದು ಹೀರಿಕೊಳ್ಳುವುದಿಲ್ಲ, ಇದಲ್ಲದೆ, ಅದರ ಮೇಲೆ ಯಾವುದೇ ಕಲೆಗಳಾಗುವುದಿಲ್ಲ, ಒಂದು ವೇಳೆ ಅದು ನಕಲಿ ತುಪ್ಪವಾಗಿದ್ದರೆ ಬಟ್ಟೆಯ ಮೇಲೆ ಕಲೆಯಾಗುತ್ತದೆ, ಮಾತ್ರವಲ್ಲ ಬಟ್ಟೆ ಅದನ್ನು ಹೀರಿಕೊಳ್ಳುತ್ತದೆ

Leave A Reply

Your email address will not be published.