Anganawadi Teacher: ಊರಿಗೆ ಹೊರಟ ಅಂಗನವಾಡಿ ಶಿಕ್ಷಕಿಯ ಬಸ್‌ ಮಿಸ್‌, ಬೈಕ್‌ನಲ್ಲಿ ಹೋದ ಶಿಕ್ಷಕಿಯ ದಾರುಣ ಕೊಲೆಮಾಡಿದ ದುರುಳರು

Anganawadi Teacher: ಮುಳಗುವಿಯಲ್ಲಿ ಎರಡು ದಿನಗಳ ಹಿಂದೆ ಅಂಗನವಾಡಿ ಶಿಕ್ಷಕಿಯೊಬ್ಬರ ಭೀಕರ ಹತ್ಯೆಯಾಗಿದ್ದು, ಇದೀಗ ತೆಲಂಗಾಣ ಪೊಲೀಸರು ಕೊಲೆ ರಹಸ್ಯ ಭೇದಿಸಿದ್ದಾರೆ. ಕೆಲಸ ಮುಗಿನ ಮನೆಗೆ ಮರುಳುತ್ತಿದ್ದ ಮಹಿಳೆಯನ್ನು ಬಳಿಕ ತಾಡ್ವಾಯಿ ಹೊರವಲಯದ ಅರಣ್ಯದಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾಡ್ವಾಯಿ ಪೊಲೀಸರು 48 ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧನ ಮಾಡಿ ರಿಮಾಂಡ್‌ ಮಾಡಲಾಗಿದೆ.

ಇದನ್ನೂ ಓದಿ: Brutal Murder: ಮನೆಯಲ್ಲಿ ಹೆಚ್ಚು ಮಕ್ಕಳಿದ್ದಾರೆಂದು ಚಿಂತೆ ಮಾಡುತ್ತಿದ್ದ ತಂದೆ; ಇಬ್ಬರನ್ನು ಕತ್ತು ಹಿಸುಕಿ ಕೊಂದೇ ಬಿಟ್ಟ ಅಕ್ಕ

ಏತೂರು ನಗರ ಮಂಡಲದ ಚಿನ್ನಬೋಯಿನಪಲ್ಲಿ ಗ್ರಾಮದ ರಾದಂ ಸುಜಾತಾ ಎಂಬ ಮಹಿಳೆ ತಡವಾಯಿ ಮಂಡಲದ ಕಾಟಾಪುರದಲ್ಲಿ ಅಂಗನವಾಡಿ ಶಿಕ್ಷಕಿ ವೃತ್ತಿ ಮಾಡುತ್ತಿದ್ದರು. ತನ್ನ ಕೆಲಸ ಮುಗಿದ ನಂತರ ಊರಿಗೆಂದು ಹೊರಟ ಸುಜಾತ ತುಂಬಾ ಹೊತ್ತಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಸಂದರ್ಭ ಸುಜಾತಾ ಸಾವಿಗೀಡಾಗಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: Arecanut Price: ಏರಿಕೆ ಕಂಡ ಚಾಲಿ ಅಡಿಕೆ ಧಾರಣೆ : ಕೃಷಿಕರ ಮುಖದಲ್ಲಿ ಮಂದಹಾಸ : 500 ರು. ಗಡಿ ದಾಟುವ ನಿರೀಕ್ಷೆ

ಬಟ್ಟೆಯಿಂದ ಕತ್ತು ಹಿಸುಕಿ, ಕೊಲೆ ಮಾಡಲಾಗಿತ್ತು. ಕೊಲೆ ಮಾಡುವುದಕ್ಕೂ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಲಕ್ಷಣಗಳು ಕೂಡಾ ಕಂಡು ಬಂದಿದೆ. ಸಿಸಿಕ್ಯಾಮರಾ ದೃಶ್ಯಾವಳಿ ಮತ್ತು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.

ರಾಮಯ್ಯ ಮತ್ತು ಜಂಪಯ್ಯ ಎಂಬುವವರೇ ಆರೋಪಿಗಳು. ಬಸ್‌ ತಪ್ಪಿದ ಕಾರಣ ಅಂಗನವಾಡಿ ಶಿಕ್ಷಕಿಯನ್ನು ರಾಮಯ್ಯ ತನ್ನ ಬೈಕಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಆನ ಸ್ನೇಹಿತ ಜಂಪಯ್ಯ ಸೇರಿ ಕಾಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಲೆ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿದ ನಂತರ ಕತ್ತಿನಲ್ಲಿದ್ದ 3 ತೊಲ ಚಿನ್ನದ ಸರ, ಎಟಿಎಂ ಕಾರ್ಡ್‌ ಕಳ್ಳತನ ಮಾಡಿದ್ದಾರೆ.

Leave A Reply

Your email address will not be published.