T20 World Cup:  ಟಿ20 ವರ್ಲ್ಡ್ ಕಪ್ ಗೆ ಕೆಎಲ್ ರಾಹುಲ್ ಮತ್ತು ರಿಂಕು  ಆಯ್ಕೆಯಾಗದಿರಲು ಇದೇ ಕಾರಣ? : ಇಲ್ಲಿದೆ ಆಯ್ಕೆಗಾರರ ವಿವರಣೆ

T20 World Cup: ಬಿಸಿಸಿಐ ಇತ್ತೀಚೆಗೆ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಿದ್ದು ಗೊತ್ತೇ ಇದೆ . ಆದರೆ, ತಂಡ ಘೋಷಣೆಯಾದಾಗಿನಿಂದ ಕ್ರೀಡಾಭಿಮಾನಿಗಳು ಹಾಗೂ ವಿಶ್ಲೇಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದಕ್ಕಿಂತ ಮುಖ್ಯವಾಗಿ ಅಂತರಾಷ್ಟ್ರೀಯ ಟಿ20ಯಲ್ಲಿ ಮಿಂಚಿದ ರಿಂಕು ಸಿಂಗ್‌ ಮತ್ತು ಐಪಿಎಲ್‌ನಲ್ಲಿ ಉತ್ತಮವಾಗಿ ಆಡುತ್ತಿರುವ ಕೆಎಲ್ ರಾಹುಲ್ ಆಯ್ಕೆಯಾಗದೇ ಟೀಕೆ ವ್ಯಕ್ತವಾಗುತ್ತಿದೆ. ಈ ಟೀಕೆಗಳಿಗೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಪ್ರತಿಕ್ರಿಯಿಸಿದ್ದಾರೆ. ಆ ಇಬ್ಬರನ್ನು ತಂಡಕ್ಕೆ ಏಕೆ ಸೇರಿಸಿಕೊಳ್ಳಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Thailand: ದತ್ತು ಪುತ್ರನೊಂದಿಗೆ ಪ್ರಬಲ ಮಹಿಳಾ ರಾಜಕಾರಣಿಯ ರಾಸಲೀಲೆ, ಅಮ್ಮ-ಮಗನ ಕಾಮ ಕಾಂಡ ಬಯಲು !!

ಕೆಎಲ್ ರಾಹುಲ್ ಸದ್ಯ ಐಪಿಎಲ್‌ನಲ್ಲಿ ಆರಂಭಿಕರಾಗಿದ್ದಾರೆ. ಆದಾಗ್ಯೂ ನಾವು ಮುಖ್ಯವಾಗಿ ಮಧ್ಯಮ ಕ್ರಮಾಂಕದ ಆಟಗಾರರನ್ನು ಹುಡುಕುತ್ತಿದ್ದೇವೆ. ಅದಕ್ಕೆ ಸಂಜು ಸ್ಯಾಮ್ಪನ್ ಮತ್ತು ರಿಷಬ್ ಪಂತ್ ಸೂಕ್ತ ಎಂದು ಭಾವಿಸಲಾಗಿತ್ತು. ಆದ್ದರಿಂದ ಇಬ್ಬರನ್ನೂ ಆಯ್ಕೆ ಮಾಡಲಾಯಿತು. ಸ್ಯಾಟ್ಸನ್, ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬಹುದು. ಇಲ್ಲಿ ಬ್ಯಾಟಿಂಗ್ ಸ್ಥಾನವನ್ನು ಗಮನದಲ್ಲಿಟ್ಟುಕೊಂಡು, ಯಾರು ಅಗತ್ಯವಿದೆ ಎಂಬುದನ್ನು ನಾವು ನೋಡಿದ್ದೇವೆ ಎಂದು ಅಗರ್ಕರ್ ವಿವರಿಸಿದರು.

ಇದನ್ನೂ ಓದಿ: H D Devegowda: ಮಗ, ಮೊಮ್ಮಗನ ತಲೆಬಿಸಿ – ದೇವೇಗೌಡರ ಆರೋಗ್ಯದಲ್ಲಿ ಏರು ಪೇರು , ಹೆಚ್ಚಿದ ಆತಂಕ !!

ಕೆಎಲ್ ರಾಹುಲ್ ಶ್ರೇಷ್ಠ ಕ್ಲಾಸ್ ಆಟಗಾರ, ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸಂಜು ಮತ್ತು ರಿಷಬ್ ಪಂತ್ ಕೂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು ತಂಡದ ಹಿತದೃಷ್ಟಿಯಿಂದ ಮಧ್ಯಮ ಕ್ರಮಾಂಕಕ್ಕೆ ಅವರು ಪರಿಪೂರ್ಣರು ಎಂದು ಭಾವಿಸುತ್ತೇನೆ ಎಂದಿದ್ದಾರೆ.

ನಂತರ ರಿಂಕು ಸಿಂಗ್ ಬಗ್ಗೆ ಮಾತನಾಡಿದ ಆಗರ್ಕರ್, ದುರದೃಷ್ಟವಶಾತ್ ಅವರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ತಂಡಕ್ಕೆ ಮತ್ತೊಬ್ಬ ಬೌಲರ್ ಬೇಕಾಗಿರುವುದರಿಂದ ತಂಡದಲ್ಲಿ ಸ್ಥಾನ ಸಿಗಲಿಲ್ಲ ಎಂದು ತಿಳಿಸಿದ್ದಾರೆ.

ರಿಂಕು ಆಯ್ಕೆಯು ತುಂಬಾ ಕಷ್ಟಕರವಾಗಿತ್ತು, ಆದರೆ ಕೇವಲ ಈ 15 ಜನರನ್ನು ಮಾತ್ರ ತಂಡಕ್ಕೆ ಆಯ್ಕೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು. ಆದರೆ, ರಿಂಕು ಅವರು ಮೀಸಲು ವಿಭಾಗದಲ್ಲಿದ್ದಾರೆ. ಆದ್ದರಿಂದ ಅವರು ಲಭ್ಯವಿರುತ್ತಾರೆ ಎಂದು ಬಹಿರಂಗಪಡಿಸಿದರು. ಪರಿಸ್ಥಿತಿ ಯಾವಾಗ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ,  ಈ ಲೆಕ್ಕಾಚಾರದಿಂದಲೇ ರಿಂಕುಗೆ ವಿಶ್ವಕಪ್ ಸಮೀಪಿಸುವ ಮುನ್ನವೇ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶವಿದೆ ಎಂದು ತಿಳಿಯಬಹುದು ಎಂದು ತಿಳಿಸಿದ್ದಾರೆ.

Leave A Reply

Your email address will not be published.