Month: May 2021

ಬೆಳ್ತಂಗಡಿ | ಜನಸ್ನೇಹಿ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ. ದಿಢೀರ್ ವರ್ಗಾವಣೆ

ಬೆಳ್ತಂಗಡಿ : ಇಲ್ಲಿನ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಅವರನ್ನು ಧಿಡೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಸರ್ಕಾರ. ಬೆಳ್ತಂಗಡಿ ತಾಲೂಕಿನಲ್ಲಿ ಮೂರುವರೆ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಿಷ್ಠಾವಂತ ಹಾಗೂ ಖಡಕ್ ಪೊಲೀಸ್ ಅಧಿಕಾರಿ ಸಂದೇಶ್ ಪಿಜಿ ವರ್ಗಾವಣೆ ಆಗಿದ್ದಾರೆ. ಅವರನ್ನು ಮಂಗಳೂರಿನ ಬಜ್ಜೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ವೇಣೂರು,ಪುಂಜಾಲಕಟ್ಟೆ, ಧರ್ಮಸ್ಥಳ ಠಾಣೆಗಳ ಸರ್ಕಲ್ ಇನ್ಸೆಕ್ಟರ್ ಆಗಿದ್ದ ಸಂದೇಶ್ ಅವರು ಖಡಕ್ ಖಾಕಿ ಎಂದೇ ಹೆಸರುವಾಸಿಯಾಗಿದ್ದರು. ಇತ್ತಿಚೆಗೆ ನಡೆದ …

ಬೆಳ್ತಂಗಡಿ | ಜನಸ್ನೇಹಿ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ. ದಿಢೀರ್ ವರ್ಗಾವಣೆ Read More »

ಸಾರಿಗೆ ಇಲಾಖೆಯಿಂದ ಸಹಾಯವಾಣಿ ಪ್ರಾರಂಭ

ಕೋವಿಡ್ ಪಿಡುಗನ್ನು ತಡೆಯುವ ಪ್ರಯತ್ನದ ಅಂಗವಾಗಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಸಾರಿಗೆ ಸೇವೆ, ಅಂಬ್ಯುಲೆನ್ಸ್ ಸೇವೆ ಮತ್ತು ಚಾಲಕರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಇತ್ಯಾದಿಗಳ ಕುರಿತಂತೆ ಯಾವುದೇ ಸಮಸ್ಯೆಗಳಿದ್ದರೆ ಕೂಡಲೇ ಸ್ಪಂದಿಸಲು ಅನುಕೂಲವಾಗುವಂತೆ ಸಾರಿಗೆ ಇಲಾಖೆಯಿಂದ ಪ್ರತ್ಯೇಕ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ಈ ಸಹಾಯವಾಣಿಯ ನಂಬರ್ 9449 86 3214. ವಿಳಾಸ: ಸಾರಿಗೆ ಆಯುಕ್ತರ ಕಛೇರಿ, 1ನೇ ಮಹಡಿ, ಬಿಎಂಟಿಸಿ ಸಂಕೀರ್ಣ, ಶಾಂತಿನಗರ, ಬೆಂಗಳೂರು- 27 ಸಾರಿಗೆ ಸೇವೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಅಥವಾ ಕುಂದುಕೊರತೆಗಳಿದ್ದಲ್ಲಿ ಸಾರ್ವಜನಿಕರು …

ಸಾರಿಗೆ ಇಲಾಖೆಯಿಂದ ಸಹಾಯವಾಣಿ ಪ್ರಾರಂಭ Read More »

ರಾಜಕೀಯ ಗಿಮಿಕ್ ಬೇಡ -ಉರಿಯಾದರೆ ಬರ್ನಾಲ್ ಹಚ್ಚಿಕೊಳ್ಳಿ – ಕಾಂಗ್ರೆಸ್ ಗೆ ಸುಳ್ಯ ಬಿಜೆಪಿ ಅಧ್ಯಕ್ಷರ ತಿರುಗೇಟು

ಸುಳ್ಯದಲ್ಲಿ ಸಚಿವರ ವಾರ್ ರೂಮ್ ಮೂಲಕ ಸೇವಾಭಾರತಿಯ ಸಹಯೋಗದಲ್ಲಿ ಕೋವಿಡ್ ನ ಎರಡನೆಯ ಅಲೆಯ ಸಂದರ್ಭದಲ್ಲಿ ಕಳೆದ ಒಂದೂವರೆ ತಿಂಗಳಿನಿಂದಲೂ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಸೇವೆಯ ಅರ್ಥವೇ ಗೊತ್ತಿಲ್ಲದ ಕಾಂಗ್ರೆಸ್ಸಿಗರು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಎಲ್ಲಿಯೂ ಮೂಗು ತೂರಿಸಲಾಗದ ಕಾಂಗ್ರೆಸ್ಸಿಗರು ಇದೀಗ ಲಸಿಕಾ ಕೇಂದ್ರದ ವ್ಯವಸ್ಥೆಯಲ್ಲಿ ಗೊಂದಲವನ್ನು ಸೃಷ್ಟಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸುಳ್ಯದ ಸ್ವಯಂಸೇವಕರು ಗಳ ಕಾರ್ಯದಿಂದ ಉರಿ ಉಂಟಾದಲ್ಲಿ ಬರ್ನಾಲ್ ಹಚ್ಚಿಕೊಳ್ಳಲಿ ಎಂದು ಸಚಿವರ ವಾರ್ ರೂಮ್ ಸಂಚಾಲಕ ಹಾಗೂ …

ರಾಜಕೀಯ ಗಿಮಿಕ್ ಬೇಡ -ಉರಿಯಾದರೆ ಬರ್ನಾಲ್ ಹಚ್ಚಿಕೊಳ್ಳಿ – ಕಾಂಗ್ರೆಸ್ ಗೆ ಸುಳ್ಯ ಬಿಜೆಪಿ ಅಧ್ಯಕ್ಷರ ತಿರುಗೇಟು Read More »

ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಸರ್ಕಾರದಿಂದ ಲಾಕ್’ಡೌನ್ ಮುಂದುವರಿಕೆ!??

ಮಹಾಮಾರಿಯ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಈಗಾಗಲೇ ಸರ್ಕಾರ ಜೂನ್ 7ರ ಬೆಳಗ್ಗೆ 6ಗಂಟೆಯ ವರೆಗೆ ಲಾಕ್‍ಡೌನ್ ಹೇರಿದ್ದು, ಅಗತ್ಯ ಬಿದ್ದರೆ ಆ ಬಳಿಕವೂ ಇನ್ನೂ ಹದಿನಾಲ್ಕು ದಿನಗಳ ಕಾಲ ಲಾಕ್‍ಡೌನ್ ವಿಸ್ತರಣೆಯಾಗಲಿದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ. ಕೇಂದ್ರ ಸರಕಾರದ ನಿರ್ದೇಶನದ ಪ್ರಕಾರ ಸೋಂಕು ಸಂಪೂರ್ಣ ನಿಯಂತ್ರಣಗೊಳ್ಳುವ ದೃಷ್ಟಿಯಿಂದ ಜೂನ್ ಅಂತ್ಯದವರೆಗೆ ಲಾಕ್‍ಡೌನ್ ಸೇರಿದಂತೆ ಇತರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಸರಕಾರಗಳಿಗೆ ಅದೇಶಿಸಿತ್ತು.ಜೊತೆಗೆ ಈಗಾಗಲೇ ರಾಜ್ಯದ ಗ್ರಾಮೀಣ ಪ್ರದೇಶಕ್ಕೆ ಸೋಂಕು ಹಬ್ಬಿರುವ …

ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಸರ್ಕಾರದಿಂದ ಲಾಕ್’ಡೌನ್ ಮುಂದುವರಿಕೆ!?? Read More »

ಶೈಕ್ಷಣಿಕ ವರ್ಷಾರಂಭದ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ | ಜೂ.15ರಿಂದ ಶಾಲಾರಂಭ ?

ಕರ್ನಾಟಕ ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೆ 2020-21ನೇ ಸಾಲಿನ ಬೇಸಿಗೆ ರಜೆ ಮತ್ತು 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಕುರಿತು (ತಾತ್ಕಾಲಿಕ) ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಕೋವಿಡ್-19ರ ಹಿನ್ನಲೆಯಲ್ಲಿ 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯನ್ನು ಮುಂದೂಡಲಾಗಿದೆ. 07-06-2021ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಿಸಿ, ಆದೇಶಿಸಲಾಗಿದೆ. ಈ ಅಂಶಗಳ ಹಿನ್ನಲೆಯಲ್ಲಿ ಶಾಲೆಗಳಿಗೆ 2020-21ನೇ ಸಾಲಿನ ಬೇಸಿಗೆ ರಜಾ ಅವಧಿಯನ್ನು ಈ ಹಿಂದೆ ನಿಗದಿ ಪಡಿಸಿರುವುದನ್ನು ಮಾರ್ಪಡಿಸಿದೆ. …

ಶೈಕ್ಷಣಿಕ ವರ್ಷಾರಂಭದ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ | ಜೂ.15ರಿಂದ ಶಾಲಾರಂಭ ? Read More »

ಕೋವಿಡ್ ಬಾಧಿತ ಪ್ರದೇಶದಲ್ಲಿ ಎಸ್ ಡಿ ಪಿ ಐ ವತಿಯಿಂದ ಸ್ಯಾನಿಟೈಝಿಂಗ್

ಸವಣೂರು:ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ವತಿಯಿಂದ ಕೋವಿಡ್ ಹಾಗೂ ಡೆಂಗ್ಯೂ ಬಾಧಿತ ಸ್ಥಳಗಳಲ್ಲಿ ಸ್ವಚ್ಛತೆ ಹಾಗೂ ಸೊಳ್ಳೆ ನಿರೋಧಕ ಸಿಂಪಡಣೆ ಕಾರ್ಯಕ್ರಮ ಸವಣೂರು ಎರಡನೇ ವಾರ್ಡ್ನಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಎಂ ಎ ನೇತೃತ್ವದಲ್ಲಿ ನಡೆಯಿತು. ಸವಣೂರು ಪರಿಸರದಲ್ಲಿ ಡೆಂಗ್ಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದನ್ನು ಮನಗಂಡು ಜನನಿಬಿಢ ಪ್ರದೇಶಗಳಾದ ಮುಂಡತ್ತಡ್ಕ ಕಾಲನಿ, ಅಗರಿ, ಬಸ್ತಿಮೂಲೆ ಸೇರಿದಂತೆ ಸವಣೂರು ಸುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆ ನಿರೋಧಕ ಸಿಂಪಡಣೆ ಮಾಡುವ ಮೂಲಕ ಸಾರ್ವಜನಿಕರ ಶ್ಲಾಘಣೆಗೆ ಪಾತ್ರರಾದರು. ಈ ಸಂದರ್ಭದಲ್ಲಿ …

ಕೋವಿಡ್ ಬಾಧಿತ ಪ್ರದೇಶದಲ್ಲಿ ಎಸ್ ಡಿ ಪಿ ಐ ವತಿಯಿಂದ ಸ್ಯಾನಿಟೈಝಿಂಗ್ Read More »

ಚಿಕ್ಕಮಗಳೂರು | ವೈದ್ಯರ ಮೇಲೆ ಮಚ್ಚು ಝಳಪಿಸಿ ಮಾರಣಾಂತಿಕ ಹಲ್ಲೆ ನಡೆಸಿ ರಸ್ತೆಯಲ್ಲಿ ಎಸೆದು ಪರಾರಿ

ಖಾಸಗಿ ಆಸ್ಪತ್ರೆ ವೈದ್ಯರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವ ವಾಗಿ ವೈದ್ಯರು ಬಿದ್ದಿದ್ದರು. ವೈದ್ಯರು ರಸ್ತೆಬದಿಯಲ್ಲಿ ಬಿದ್ದು ಒದ್ದಾಡುತ್ತಿರುವ ಕರುಣಾಜನಕ ಸನ್ನಿವೇಶ ಸೃಷ್ಟಿಯಾಗಿತ್ತು. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಅಗ್ನಿಶಾಮಕ ಠಾಣೆ ಬಳಿಯೇ ಈ ಕೃತ್ಯ ನಡೆದಿದ್ದು, ಖಾಸಗಿ ಆಸ್ಪತ್ರೆಯ ಡಾ.ದೀಪಕ್ ಎಂಬವರು ಗಾಯಾಳು. ಇವರು ಕ್ಲಿನಿಕ್‌ನಿಂದ ಮನೆಗೆ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ಮಚ್ಚಿನಿಂದ …

ಚಿಕ್ಕಮಗಳೂರು | ವೈದ್ಯರ ಮೇಲೆ ಮಚ್ಚು ಝಳಪಿಸಿ ಮಾರಣಾಂತಿಕ ಹಲ್ಲೆ ನಡೆಸಿ ರಸ್ತೆಯಲ್ಲಿ ಎಸೆದು ಪರಾರಿ Read More »

ಚಿಕನ್ ಬಿರಿಯಾನಿಯಲ್ಲಿ ಲೆಗ್ ಪೀಸ್ ಇಲ್ಲ ಎಂದು ಮಂತ್ರಿಗಳಿಗೆ ದೂರು ಸಲ್ಲಿಸಿದ ಭೂಪ

ಜೊಮ್ಯಾಟೋದ ಮೂಲಕ ಚಿಕನ್ ಬಿರಿಯಾನಿ ಪಾರ್ಸೆಲ್ ತರಿಸಿಕೊಂಡ ವ್ಯಕ್ತಿಯೊಬ್ಬ, ಬಿರಿಯಾನಿಯಲ್ಲಿ ಲೆಗ್ ಪೀಸ್ ಇಲ್ಲದೇ ಭಾರಿ ನಿರಾಸೆಗೆ ಒಳಗಾಗಿ, ಸಿಟ್ಟಿನಿಂದ ಸಚಿವರಿಗೆ ದೂರು ದಾಖಲು ಮಾಡಿದ್ದಾನೆ.ಈ ಬಿರಿಯಾನಿ ಪ್ರಿಯನ ದೂರನ್ನು ನೋಡಿ ಸಚಿವರು ಸುಸ್ತಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮಾಷೆಗೆ ವಸ್ತುವಾಗಿ ವೈರಲ್ ಆಗುತ್ತಿದೆ. ಬಿರಿಯಾನಿ ಯಾರಿಗೆ ಇಷ್ಟವಿಲ್ಲ ಹೇಳಿ. ಹೈದರಾಬಾದ್ ಎಂದ ತಕ್ಷಣ ಎಲ್ಲರಿಗೆ ಮೊದಲು ನೆನಪಾಗುವುದೇ ಅಲ್ಲಿನ ಹಬೆಯಾಡುವ ಬಿರಿಯಾನಿ. ಹೈದರಾಬಾದ್ ಬಿರಿಯಾನಿ ದೇಶದಲ್ಲಿ ಭಾರಿ ಜನಪ್ರಿಯವಾಗಿದೆ. ಹೈದರಾಬಾದಿನ ಪ್ಯಾರಡೈಸ್ ಬಿರಿಯಾನಿ ವರ್ಲ್ಡ್ ಫೇಮಸ್. …

ಚಿಕನ್ ಬಿರಿಯಾನಿಯಲ್ಲಿ ಲೆಗ್ ಪೀಸ್ ಇಲ್ಲ ಎಂದು ಮಂತ್ರಿಗಳಿಗೆ ದೂರು ಸಲ್ಲಿಸಿದ ಭೂಪ Read More »

ತಪ್ಪು ಮಾಹಿತಿ ಮತ್ತು ಪೋಕ್ಸೋ ಕಾಯ್ದೆ ಉಲ್ಲಂಘನೆ ಮಾಡಿದ ಟ್ವಿಟರ್ ವಿರುದ್ಧ ಎಫ್ಐಆರ್

ಪೊಕ್ಸೋ ಕಾಯಿದೆ ಉಲ್ಲಂಘನೆ ಹಾಗೂ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸಾಮಾಜಿಕ ಜಾಲತಾಣ ಟ್ವಿಟರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಟ್ವಿಟರ್ ವಿರುದ್ಧ ದೂರು ನೀಡಿದೆ. ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಟ್ವಿಟರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.ಮಕ್ಕಳಿಗೆ ಟ್ವಿಟರ್ ಸುರಕ್ಷಿತವಲ್ಲ. ಹೀಗಾಗಿ ಮಕ್ಕಳಿಗೆ ಟ್ವಿಟರ್ ಬಳಕೆಗೆ ನೀಡಬಾರದು. ಆದರೆ ನಮ್ಮ ಆಯೋಗ ವಿಚಾರಣೆ ನಡೆಸಿದ ವೇಳೆ ಈ ವಿಚಾರದಲ್ಲಿ ಟ್ವಿಟರ್ ಸುಳ್ಳು ಹೇಳಿದೆ ಹಾಗೂ ತಪ್ಪು ಮಾಹಿತಿ ನೀಡಿದೆ ಎಂದು …

ತಪ್ಪು ಮಾಹಿತಿ ಮತ್ತು ಪೋಕ್ಸೋ ಕಾಯ್ದೆ ಉಲ್ಲಂಘನೆ ಮಾಡಿದ ಟ್ವಿಟರ್ ವಿರುದ್ಧ ಎಫ್ಐಆರ್ Read More »

ಹಣ ಕೊಟ್ಟರೆ ಗಾಡಿ ಬಿಡ್ತೀನಿ ಎಂದು ಲಾರಿ ಚಾಲಕರಿಂದ ಹಣ ಪೀಕಿಸುತ್ತಿದ್ದ ಅರಣ್ಯ ಇಲಾಖೆಯ ಅಧಿಕಾರಿ ಅಮಾನತು | ಲಂಚ ಪಡೆಯುವ ವಿಡಿಯೋ ವೈರಲ್ ಆಗುವ ಮೂಲಕ ಬೆಳಕಿಗೆ ಬಂದಿದ್ದ ಪ್ರಕರಣ

ದುಡ್ಡು ಕೊಟ್ಟರೆ ಗಾಡಿ ಬಿಡ್ತೀನಿ ಎಂದು ಲಾರಿ ಚಾಲಕರಿಂದ ಹಣ ಪೀಕಿಸುತ್ತಿದ್ದ ಸಂಪಾಜೆ ವಲಯ ದಬ್ಬಡ್ಕ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಕ್ಷಿತ್ ಅವರನ್ನು ಲಂಚ ಸ್ವೀಕಾರದ ಆರೋಪದ ಮೇರೆಗೆ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯವರು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಮೇ. 24ರಂದು ತನಿಖಾ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ರಕ್ಷಿತ್ ಅವರು ಲಾರಿ ಚಾಲಕನಿಂದ ಲಂಚಕ್ಕೆ ಬೇಡಿಕೆಯಿಟ್ಟು ಹಣವನ್ನು ಪಡೆದುಕೊಂಡಿದ್ದನ್ನು ಸ್ವತಃ ಲಾರಿ ಚಾಲಕನೇ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. …

ಹಣ ಕೊಟ್ಟರೆ ಗಾಡಿ ಬಿಡ್ತೀನಿ ಎಂದು ಲಾರಿ ಚಾಲಕರಿಂದ ಹಣ ಪೀಕಿಸುತ್ತಿದ್ದ ಅರಣ್ಯ ಇಲಾಖೆಯ ಅಧಿಕಾರಿ ಅಮಾನತು | ಲಂಚ ಪಡೆಯುವ ವಿಡಿಯೋ ವೈರಲ್ ಆಗುವ ಮೂಲಕ ಬೆಳಕಿಗೆ ಬಂದಿದ್ದ ಪ್ರಕರಣ Read More »

error: Content is protected !!
Scroll to Top