ಕೋವಿಡ್ ನಿಂದ ಮೃತಪಟ್ಟ ಪುರುಷ ಹಾಗೂ ಮಹಿಳೆಯ ಅಂತ್ಯಕ್ರಿಯೆಯನ್ನು ಬೆಳ್ತಂಗಡಿ ಮತ್ತು ನೆಲ್ಯಾಡಿ ಹಿಂದೂ ಪರಿಷತ್

1)ಕೊರೊನಾದಿಂದ ಮೃತಪಟ್ಟಿದ್ದ ತನ್ನಿರುಪಂತ ನಿವಾಸಿ ಅಲಕ್ಕೆ ನೋಣಯ್ಯ ಪೂಜಾರಿ ಎಂಬುವವರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದ ಪ್ರಕಾರ ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀಧರ್ ಗುಡಿಗಾರ್ ಉಪಾಧ್ಯಕ್ಷರು VHP ಬೆಳ್ತಂಗಡಿ, ಸಂತೋಷ ಅತ್ತಾಜೆ ಸಂಚಾಲಕ ಬೆಳ್ತಂಗಡಿ, ರತನ್ ಶೆಟ್ಟಿ ಕೊಲ್ಲಿ ಮಿತ್ತಬಾಗಿಲು ಸಂಚಾಲಕರು, ಹರೀಶ್ ನಾಯ್ಕ ಉಜಿರೆರವರು ಸೇರಿ ನೆರವೇರಿಸಿದರು.

ನೆಲ್ಯಾಡಿ
ಬೆಳ್ತಂಗಡಿ

2)ಅರಸಿನಮಕ್ಕಿಯ ಉಡೈರೆ ನಿವಾಸಿ ಪದ್ಮಯ ಗೌಡ ಅವರ ಪತ್ನಿ ಕುಸುಮಾವತಿ ಅವರು ಇಂದು ಬೆಳಗ್ಗೆ ಕೋವಿಡ್ ನಿಂದ ಮೃತಪಟ್ಟಿದ್ದರು. ಈ ವಿಷಯ ತಿಳಿದ ತಕ್ಷಣ ಅವರ ಅಂತ್ಯಕ್ರಿಯೆಯನ್ನು ಹಿಂದೂ ಜಾಗರಣ ವೇದಿಕೆ ನೆಲ್ಯಾಡಿಯ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯತ್ ನೆಲ್ಯಾಡಿ ಇವರ ಸಹಕಾರದೊಂದಿಗೆ ಪಿಪಿಇ ಕಿಟ್ ಧರಿಸಿ, ಹಿಂದೂ ಧರ್ಮದ ವಿಧಿ ವಿಧಾನದಂತೆ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.

ನಿಸ್ವಾರ್ಥ ಮನೋಭಾವದಿಂದ ಮಾನವೀಯತೆ ಮೆರೆದ ಹಿಂದೂ ಜಾಗರಣ ವೇದಿಕೆ ನೆಲ್ಯಾಡಿಯ ಹಾಗೂ ಬಜರಂಗದಳ ಕಾರ್ಯಕರ್ತರು ಬೆಳ್ತಂಗಡಿ ಕಾರ್ಯಕರ್ತರ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Leave A Reply

Your email address will not be published.