Day: September 9, 2021

ಬಂಟ್ವಾಳ | ಅಡ್ರೆಸ್ ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಗರಿಸಿದ ಕಳ್ಳರು

ಬಂಟ್ವಾಳ:ಇತ್ತೀಚಿಗೆ ಕಳ್ಳರ ಹಾವಳಿ ಅಧಿಕವಾಗಿದ್ದು ಒಬ್ಬಂಟಿಯಾಗಿ ಓಡಾಡೋದು ಕಷ್ಟ-ಕರವಾಗಿದೆ.ಹೀಗಿಯೇ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ದಾರಿ ಕೇಳುವ ನೆಪದಲ್ಲಿ ಮಹಿಳೆಯನ್ನು ಪುಸಲಾಯಿಸಿ ಬಳಿಕ ಮಾಂಗಲ್ಯ ಸರ ಅಪಹರಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಸೆ.9 ರಂದು ಬಂಟ್ವಾಳದ ಸಜಿಪಮೂಡ ಗ್ರಾಮದ ಮಾರ್ನಬೈಲು ಸಮೀಪ ಈ ಘಟನೆ ನಡೆದಿದ್ದು,ವತ್ಸಲಾ ನಾರಾಯಣ ಎಂಬುವವರು ಮೋಸದ ಕೃತ್ಯಕ್ಕೆ ಒಳಗಾಗಿದ್ದವರಾಗಿದ್ದಾರೆ. ಬೈಕ್ ನಲ್ಲಿ ಬಂದ ಇಬ್ಬರು ನಡೆದುಕೊಂಡು ಹೋಗುತ್ತಿದ್ದ ವತ್ಸಲಾ ಎಂಬ ಮಹಿಳೆಯನ್ನು ನಿಲ್ಲಿಸಿ ದಾರಿ ಕೇಳಿದ್ದಾರೆ. ಬಳಿಕ ಮಹಿಳೆ ವಿಳಾಸ ಹೇಳುವ ಸಂದರ್ಭ …

ಬಂಟ್ವಾಳ | ಅಡ್ರೆಸ್ ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಗರಿಸಿದ ಕಳ್ಳರು Read More »

ಹಳೆನೇರಂಕಿ ಮಹಿಳೆ ನಾಪತ್ತೆ ದೂರು ದಾಖಲು

ಕಡಬ: ಹಳೆನೇರಂಕಿ ಗ್ರಾಮದ ಮಹಿಳೆಯೋರ್ವರು ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೆನೇರಂಕಿ ಗ್ರಾಮದ ಮಡೆಂಜಿಮಾರು ನಿವಾಸಿ ಹೊನ್ನಮ್ಮ(೫೮ವ.) ಎಂಬವರು ನಾಪತ್ತೆಯಾಗಿರುವವರು. ಈ ಬಗ್ಗೆ ಹೊನ್ನಮ್ಮ ಅವರ ಮಗ ವಿಶ್ವನಾಥ ಎಂಬವರು ಕಡಬ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ನೀಡಿರುವ ಮಹಿಳೆಯ ಪುತ್ರ ನಾನು ಕೂಲಿ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದು ನನ್ನ ತಾಯಿಗೆ ಸ್ವಲ್ಪ ಮಾನಸಿಕ ಅಸ್ವಸ್ಥತೆ ಇದ್ದು ಮನೆಯಲ್ಲಿಯೇ ಇರುತ್ತಿದ್ದರು. ಒಮ್ಮೊಮ್ಮೆ ಮಾನಸಿಕ ಅಸ್ವಸ್ಥತೆಯಿಂದ ಮನೆ ಬಿಟ್ಟು ಹೋಗುತ್ತಿದ್ದು ಈ ಹಿಂದೆ ಕೂಡ …

ಹಳೆನೇರಂಕಿ ಮಹಿಳೆ ನಾಪತ್ತೆ ದೂರು ದಾಖಲು Read More »

ಬೆಳ್ತಂಗಡಿ | ನಿಡ್ಲೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು | 1,75,000 ರೂ. ಮೌಲ್ಯದ ಚಿನ್ನಾಭರಣ ಕಳವು

ಬೆಳ್ತಂಗಡಿ ತಾಲೂಕಿನ ನಿಡ್ಲೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿದ ಕಳ್ಳರು ಅಂದಾಜು ರೂ. 1,75,000 ಮೌಲ್ಯದ 6 ಪವನ್ ಚಿನ್ನದ ಆಭರಣಗಳನ್ನು ಕಳವುಗೈದ ಘಟನೆ ಸೆ.8ರ ರಾತ್ರಿ ನಡೆದಿದೆ. ನಿಡ್ಲೆ ಗ್ರಾಮದ ಮಾಡಂಗಲ್ಲು ನಿವಾಸಿ ಗಣೇಶ ಗೌಡ ಎಂ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ. ಸೆ.8 ರಂದು ಸಂಜೆ 4.30ಕ್ಕೆ ಗಣೇಶ್ ಗೌಡ ಅವರು ತನ್ನ ಮನೆಯಾದ ನಿಡ್ಲೆ ಗ್ರಾಮದ ಮಾಡಂಗಲ್ಲು ಎಂಬಲ್ಲಿಂದ ಹೆಂಡತಿ ಹಾಗೂ ಮಕ್ಕಳನ್ನು ಕರೆದುಕೊಂಡು ಹೆಂಡತಿ ತವರು …

ಬೆಳ್ತಂಗಡಿ | ನಿಡ್ಲೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು | 1,75,000 ರೂ. ಮೌಲ್ಯದ ಚಿನ್ನಾಭರಣ ಕಳವು Read More »

ಈ ವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಾರಾಂತ್ಯ ಕರ್ಫ್ಯೂ ತೆರವುಗೊಳಿಸಿ ಅದೇಶಿಸಿದ ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಮಹಾಮಾರಿ ಕೊರೋನದ ಪಾಸಿಟಿವ್ ರೇಟ್ ಇಳಿಮುಖವಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ವಿಧಿಸಿದ್ದ ವೀಕೆಂಡ್ ಕರ್ಫ್ಯೂ ಈ ವಾರದಿಂದ ತೆರವುಗೊಳಿಸಿ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಅದೇಶಿಸಿದ್ದಾರೆ. ಕಳೆದ ವಾರವಷ್ಟೇ ವರ್ತಕರ ಸಂಘದ ಪ್ರಮುಖರೊಂದಿಗೆ ಫೋನ್ ಸಂಭಾಷಣೆಯಲ್ಲಿ ಈ ಬಗ್ಗೆ ಆಶ್ವಾಸನೆ ಕೊಟ್ಟಿದ್ದ ಜಿಲ್ಲಾಧಿಕಾರಿ, ಈ ವಾರದಿಂದ ವೀಕೆಂಡ್ ಕರ್ಫ್ಯೂ ಗೆ ಬ್ರೇಕ್ ಹಾಕಿದ್ದಾರೆ. ಜಿಲ್ಲೆಯಾದ್ಯಂತ ವಾರಾಂತ್ಯದಲ್ಲಿ ಎಲ್ಲಾ ವ್ಯಾಪಾರ ವಹಿವಾಟುಗಳು ನಡೆಯಲಿದ್ದು, ಎಲ್ಲಾ ವ್ಯಾಪಾರಕ್ಕೂ ರಾತ್ರಿ ಗಂಟೆ 09ರ ವರೆಗೆ ಅನುಮತಿ ನೀಡಲಾಗಿದೆ. ಎಲ್ಲಾ ವ್ಯಾಪಾರಸ್ಥರು, ಸಿಬ್ಬಂದಿಗಳು ವಾಕ್ಸಿನ್ ಪಡೆದ …

ಈ ವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಾರಾಂತ್ಯ ಕರ್ಫ್ಯೂ ತೆರವುಗೊಳಿಸಿ ಅದೇಶಿಸಿದ ಜಿಲ್ಲಾಧಿಕಾರಿ Read More »

ಕಡಬ : ಪತ್ರಕರ್ತರಿಗೆ ಕಾರ್ಮಿಕ ಇಲಾಖೆಯಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ

ಕಡಬ: ಕಾರ್ಮಿಕ ಇಲಾಖೆಯಿಂದ ಪತ್ರಕರ್ತರಿಗೆ ನೀಡಲಾದ ಆಹಾರ ಧಾನ್ಯಗಳ ಕಿಟ್ ನ್ನು ಕಡಬ ತಾಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ ಗುರುವಾರ ಕಡಬ ಪ್ರೆಸ್ ಕ್ಲಬ್‌ನಲ್ಲಿ ವಿತರಣೆ ಮಾಡಲಾಯಿತು. ಅತಿಥಿಯಾಗಿದ್ದ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಅವರು ಕಿಟ್ ವಿತರಿಸಿ ಶುಭಹಾರೈಸಿದರು. ಕಾರ್ಯನಿರತ ಪತ್ರಕರ್ತರ ದ.ಕ ಜಿಲ್ಲಾ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಕೋಶಾಧಿಕಾರಿ ಪುಷ್ಪರಾಜ್ ಬಿ ಎನ್, ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ , ಕಡಬ ತಾಲೂಕು ಪತ್ರಕರ್ತರ ಸಂಘದ …

ಕಡಬ : ಪತ್ರಕರ್ತರಿಗೆ ಕಾರ್ಮಿಕ ಇಲಾಖೆಯಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ Read More »

ಸದಾ ಟೀಕೆ ಚಾಳಿ ಹೊಂದಿರುವ ಈತನಿಗೀಗ ಕಾಂಗ್ರೆಸ್ ಹಾಗೂ ಬಿಜೆಪಿಯೇ ಟಾರ್ಗೆಟ್ !!| ಸಮಾಜದಲ್ಲಿ ಸಮಾನತೆಗಾಗಿ ಕಾಂಗ್ರೆಸನ್ನು ಮೊದಲು ತೊಡೆದು ನಂತರ ಬಿಜೆಪಿಯನ್ನು ಸೋಲಿಸಬೇಕು ಎಂದ ನಟ ಚೇತನ್

ಸಮಾನತೆಯ ಬಗೆಗೆ ಟ್ವೀಟ್ ಮಾಡಿದ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ , ಜಾತಿ ರಹಿತ ಸಮಾಜ ನಿರ್ಮಾಣವಾಗಬೇಕು.ಸ್ವ-ಲಾಭಕ್ಕಾಗಿ ಯಾವುದೇ ಅಧಿಕಾರ ಸ್ವೀಕಾರ ಒಳಿತಲ್ಲ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಸಮಾಜದಲ್ಲಿ ಸಮಾನತೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನು ಸೋಲಿಸಬೇಕು ಎಂದು ಟ್ವೀಟ್ ಮಾಡಿರುವ ಅವರು, ಅಧಿಕಾರಕ್ಕೋಸ್ಕರ ಕಾಂಗ್ರೆಸ್ ಪಕ್ಷವು ಏನನ್ನು ಬೇಕಾದರೂ ಮಾಡುತ್ತದೆ. ಬಿಜೆಪಿ ಪಕ್ಷವು ದ್ವೇಷದ ಸಿದ್ದಾಂತವನ್ನು ಹೊಂದಿದೆ. ನಾವು ಮೊದಲು ಬಿಜೆಪಿಯನ್ನು ತೊಡೆದು ಹಾಕಿದರೆ, ಕಾಂಗ್ರೆಸ್ ಅದರಿಂದ ಲಾಭ ಪಡೆದು ಇನ್ನಷ್ಟು ಬಲಗೊಳ್ಳುತ್ತದೆ. …

ಸದಾ ಟೀಕೆ ಚಾಳಿ ಹೊಂದಿರುವ ಈತನಿಗೀಗ ಕಾಂಗ್ರೆಸ್ ಹಾಗೂ ಬಿಜೆಪಿಯೇ ಟಾರ್ಗೆಟ್ !!| ಸಮಾಜದಲ್ಲಿ ಸಮಾನತೆಗಾಗಿ ಕಾಂಗ್ರೆಸನ್ನು ಮೊದಲು ತೊಡೆದು ನಂತರ ಬಿಜೆಪಿಯನ್ನು ಸೋಲಿಸಬೇಕು ಎಂದ ನಟ ಚೇತನ್ Read More »

ಇನ್ನು ಕೆಲವೇ ದಿನಗಳಲ್ಲಿ ಮಾನವನು ಊಸರವಳ್ಳಿಯಾಗಿ ಬದಲಾಗುವ ಕಾಲ ಸನ್ನಿಹಿತವಾಗಿದೆ !!? | ಏನಿದು ಅಂತೀರಾ?? ಲಾಗಿನ್ ಟು ಹೊಸ ಕನ್ನಡ ಡಾಟ್ ಕಾಮ್

ಇಂದಿನ ಕಾಲದಲ್ಲಿ ತಂತ್ರಜ್ಞಾನ ಇಲ್ಲದ ಕ್ಷೇತ್ರವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ವಿಜ್ಞಾನ, ವೈದ್ಯ ವಿಜ್ಞಾನ ಎಲ್ಲದಕ್ಕೂ ತಂತ್ರಜ್ಞಾನ ಬೇಕೇ ಬೇಕು. ತಂತ್ರಜ್ಞಾನ ಇಲ್ಲದಿದ್ದರೆ ಪ್ರಪಂಚದ ವೈಶಾಲ್ಯತೆ ಮನುಷ್ಯನಿಗೆ ತಿಳಿಯುತ್ತಿರಲಿಲ್ಲ. ಮನುಷ್ಯ ಕುಬ್ಜನಾಗುತ್ತಿದ್ದ. ತಂತ್ರಜ್ಞಾನದಿಂದ ಭೂಮಿ- ಆಕಾಶ, ಪಾತಾಳ ಒಂದಾಗಿದೆ. ಸಾಕಷ್ಟು ವಿಚಾರಗಳು ಕ್ಷಣಮಾತ್ರದಲ್ಲಿ ದೊರೆಯುತ್ತವೆ. ಇಂತಹ ಮುಂದುವರಿದ ಕಾಲದಲ್ಲಿ ಇದೀಗ ಹೊಸ ಆವಿಷ್ಕಾರವೊಂದು ಸದ್ದಿಲ್ಲದೆ ಈ ಪ್ರಪಂಚಕ್ಕೆ ಕಾಲಿಡುತ್ತಿದೆ. ನೈಸರ್ಗಿಕ ಜೀವವಿಜ್ಞಾನದಿಂದ ಪ್ರೇರಿತವಾದ ದಕ್ಷಿಣ ಕೊರಿಯಾದ ಸಂಶೋಧಕರು ಊಸರವಳ್ಳಿಯಂತೆ ಬದಲಾಗುವ ಕೃತಕ ಚರ್ಮವನ್ನು ಕಂಡು ಹಿಡಿದಿದ್ದಾರೆ. ದಕ್ಷಿಣ ಕೊರಿಯಾದ …

ಇನ್ನು ಕೆಲವೇ ದಿನಗಳಲ್ಲಿ ಮಾನವನು ಊಸರವಳ್ಳಿಯಾಗಿ ಬದಲಾಗುವ ಕಾಲ ಸನ್ನಿಹಿತವಾಗಿದೆ !!? | ಏನಿದು ಅಂತೀರಾ?? ಲಾಗಿನ್ ಟು ಹೊಸ ಕನ್ನಡ ಡಾಟ್ ಕಾಮ್ Read More »

ಆನ್‍ಲೈನ್ ಪಾವತಿಯಲ್ಲಿನ ವಂಚನೆ ತಡೆಯಲು ಹೊಸ ಯೋಜನೆ ರೂಪಿಸಿದ ಆರ್‌ಬಿಐ | ಇನ್ನಾದರೂ ಬೀಳಲಿದೆಯೇ ಈ ರೀತಿಯ ವಂಚನೆಗಳಿಗೆ ಬ್ರೇಕ್ ??

ಇತ್ತೀಚಿಗೆ ಆನ್‍ಲೈನ್ ಪಾವತಿಗಳಲ್ಲಿ ಹೆಚ್ಚೆಚ್ಚು ವಂಚನೆಗಳು ಆಗುತ್ತಿವೆ. ಕಾರ್ಡ್ ಪಿನ್ ಗಳು, ಒಟಿಪಿಗಳು, ಪಾಸ್ ವರ್ಡ್ ಮುಂತಾದವುಗಳಿಂದ ವಂಚಕರು ದುಡ್ಡು ಕೊಳ್ಳೆ ಹೊಡೆಯುವ ಪ್ರಸಂಗಗಳು ಮುನ್ನೆಲೆಗೆ ಬರುತ್ತಿವೆ. ಹಾಗಾಗಿ ಆನ್‍ಲೈನ್ ಪಾವತಿಯಲ್ಲಾಗುತ್ತಿರುವ ಕೆಲ ವಂಚನೆ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಿಶೇಷ ಗಮನಹರಿಸಿದೆ. ಮುಂದಿನ ದಿನಗಳಲ್ಲಿ ಆನ್‍ಲೈನ್ ಕಾರ್ಡ್ ತಯಾರಕರು ಮತ್ತು ಬ್ಯಾಂಕ್‍ಗಳು ಮಾತ್ರ ಗ್ರಾಹಕರ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳ ಮಾಹಿತಿಯನ್ನು ಸಂಗ್ರಹ ಮಾಡಿಟ್ಟುಕೊಳ್ಳಬಹುದೇ ಹೊರತು ಪೇಮೆಂಟ್ ಆ್ಯಪ್, ಆನ್‍ಲೈನ್ ಶಾಪಿಂಗ್ …

ಆನ್‍ಲೈನ್ ಪಾವತಿಯಲ್ಲಿನ ವಂಚನೆ ತಡೆಯಲು ಹೊಸ ಯೋಜನೆ ರೂಪಿಸಿದ ಆರ್‌ಬಿಐ | ಇನ್ನಾದರೂ ಬೀಳಲಿದೆಯೇ ಈ ರೀತಿಯ ವಂಚನೆಗಳಿಗೆ ಬ್ರೇಕ್ ?? Read More »

ಪರ ಯುವತಿಯೊಂದಿಗೆ ಹೋಟೆಲ್ ರೂಮ್ ನಲ್ಲಿದ್ದಾಗ ಪತ್ನಿ ಮತ್ತು ಮಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ!!ಮುಂದೆ ನಡೆಯಿತು ಆತನ ಪತ್ನಿಯಿಂದ ಚರ್ಮ ಸುಲಿಯುವ ಕಾರ್ಯ

ದಾಂಪತ್ಯ ಜೀವನದಲ್ಲಿ ಅನ್ಯ ಪುರುಷ ಅಥವಾ ಮಹಿಳೆಯ ಪ್ರವೇಶದಿಂದ ಅದೆಷ್ಟೋ ದಂಪತಿಗಳ ಸಂಸಾರ ಹಾಳಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಗಂಡ ಅಥವಾ ಹೆಂಡತಿ ಇನ್ನೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿರುವುದರಿಂದ ಅನೇಕ ಕೊಲೆಗಳು, ಅನೇಕ ವಿಚ್ಛೇದನಗಳೂ ನಡೆದಿವೆ. ಅಂತಹುದೇ ಒಂದು ಘಟನೆ ಗುಜರಾತ್ ನಲ್ಲಿ ನಡೆದಿದ್ದು, ಪರ ಯುವತಿಯೊಂದಿಗೆ ಹೋಟೆಲ್ ರೂಮ್ ನಲ್ಲಿ ಚಕ್ಕಂದವಾಡುತ್ತಿದ್ದ ಪತಿಯನ್ನು ಕಂಡ ಪತ್ನಿಯು ಆತನನ್ನು ಮನಬಂದಂತೆ ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಹಿಳೆಯು ತನ್ನ ಮಗಳೊಂದಿಗೆ ಶಾಪಿಂಗ್ ಗೆಂದು …

ಪರ ಯುವತಿಯೊಂದಿಗೆ ಹೋಟೆಲ್ ರೂಮ್ ನಲ್ಲಿದ್ದಾಗ ಪತ್ನಿ ಮತ್ತು ಮಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ!!ಮುಂದೆ ನಡೆಯಿತು ಆತನ ಪತ್ನಿಯಿಂದ ಚರ್ಮ ಸುಲಿಯುವ ಕಾರ್ಯ Read More »

ಈ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡಲು ಹೊಸ ಉಪಾಯದಲ್ಲಿದೆ ಬೆಂಗಳೂರು ಬಿಬಿಎಂಪಿ!!ಅನುಮತಿ ವಿಚಾರದಲ್ಲಿ ಎದ್ದ ಗೊಂದಲಕ್ಕೆ ಚೀಟಿ ಎತ್ತುವ ಮೂಲಕ ಉತ್ತರಿಸಲಿದೆ ಬಿಬಿಎಂಪಿ

ಗಣೇಶ ಹಬ್ಬಕ್ಕೆ ಇನ್ನೇನು ಎರಡೇ ದಿನಗಳು ಬಾಕಿ ಉಳಿದಿದ್ದು, ಸರ್ಕಾರದ ನಿಯಮಗಳ ಪ್ರಕಾರ ಆಚರಣೆಗೆ ಅವಕಾಶ ಕಲ್ಪಿಸಲಾಗಿದ್ದರೂ ಬೆಂಗಳೂರಿನಲ್ಲಿ ಮಾತ್ರ ಗಣೇಶ ಮೂರ್ತಿ ಯನ್ನು ಕೂರಿಸುವಲ್ಲಿ ಸಾರ್ವಜನಿಕರ ಮಧ್ಯೆ ಕೊಂಚ ಭಿನ್ನಾಭಿಪ್ರಾಯವಿದ್ದು, ಎಲ್ಲಾ ಗೊಂದಲಕ್ಕೂ ಬಿಬಿಎಂಪಿ ತೆರೆಎಳೆಯಬೇಕಾಗಿದೆ. ಸರ್ಕಾರದ ಆದೇಶದ ಪ್ರಕಾರ ಒಂದು ವಾರ್ಡ್‍ಗೆ ಒಂದೇ ಗಣೇಶನನ್ನು ಕೂರಿಸುವಂತಿದ್ದು, ಸ್ಮಾರ್ಟ್ ಸಿಟಿ ಯಾದ ಬೆಂಗಳೂರಿನಲ್ಲಿ ಒಂದೊಂದು ವಾರ್ಡ್ ಗೆ ಹಲವಾರು ಸಂಘಟನೆಗಳಿದ್ದು ಎಲ್ಲಾ ಸಂಘಟನೆಯವರು ಅವಕಾಶಕ್ಕಾಗಿ ಮನವಿ ಸಲ್ಲಿಸಿದ್ದಾರೆ.ಆದರೆ, ನಿಯಮ ಎಲ್ಲರಿಗೂ ಪಾಲನೆಯಾಗಲಿದ್ದು, ಯಾರಿಗೆ ಅನುಮತಿ ನೀಡುವುದು, …

ಈ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡಲು ಹೊಸ ಉಪಾಯದಲ್ಲಿದೆ ಬೆಂಗಳೂರು ಬಿಬಿಎಂಪಿ!!ಅನುಮತಿ ವಿಚಾರದಲ್ಲಿ ಎದ್ದ ಗೊಂದಲಕ್ಕೆ ಚೀಟಿ ಎತ್ತುವ ಮೂಲಕ ಉತ್ತರಿಸಲಿದೆ ಬಿಬಿಎಂಪಿ Read More »

error: Content is protected !!
Scroll to Top