Daily Archives

September 9, 2021

ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸಿಹಿ ಸುದ್ದಿ ನೀಡಿದ ಇಂಧನ ಸಚಿವ ಸುನಿಲ್ ಕುಮಾರ್ | ರಾಜ್ಯದಲ್ಲೆಡೆ ರಿಚಾರ್ಜ್…

ಬೆಂಗಳೂರು: ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಚಾಲಿತ ವಾಹನಗಳು ಬರುತ್ತಿರುವ ಕಾರಣದಿಂದ ಎಲೆಕ್ಟ್ರಿಕ್ ರೀಚಾರ್ಜ್ ಸೆಂಟರ್‌ಗಳನ್ನು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ತೆರೆಯಲಾಗುವುದು ಎಂದು ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.

ತಾಲಿಬಾನಿಗಳ ಹಾದಿಯಲ್ಲಿ ಇದೀಗ ಪಾಕಿಸ್ತಾನ | ಅಲ್ಲಿನ ಹೆಣ್ಣುಮಕ್ಕಳಿಗೂ ಶುರುವಾಯಿತು ನಿಷೇಧಗಳ ಹೇರಿಕೆ !!

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಆಕ್ರಮಣ ಆಗುತ್ತಿದ್ದಂತೆಯೇ ಮಹಿಳೆಯರ ಮೇಲೆ ಇನ್ನಿಲ್ಲದ ಹೇರಿಕೆ, ಅತ್ಯಂತ ಕ್ರೂರ ಎನಿಸುವಂಥ ಷರತ್ತುಗಳನ್ನು ವಿಧಿಸಿರುವುದು ಈಗ ಜಗಜ್ಜಾಹೀರವಾಗಿದೆ. ಇದರ ಬೆನ್ನಲ್ಲೇ ತಾಲಿಬಾನಿಗಳ ಹಾದಿಯನ್ನು ಪಾಕಿಸ್ತಾನ ತುಳಿಯಲು ಶುರು ಮಾಡಿದ್ದು, ಹೇರಿಕೆಗಳಿಗೆ

ಪುತ್ತೂರು | ಬ್ಯಾಂಕ್ ಹೆಸರಲ್ಲಿ ಮಹಿಳೆಯ ಅಕೌಂಟ್ ನಿಂದ ಹಣ ದೋಚಿದ ಖದೀಮರು | ಒಟಿಪಿ ನೀಡಿ ಹಣ ಕಳೆದುಕೊಂಡು ತನ್ನ ತಲೆಗೆ…

ಪುತ್ತೂರು:ಹಣದ ವಿಚಾರವಾಗಿ ನಾವು ಎಷ್ಟು ಎಚ್ಚರಿಕೆ ಇಂದ ಇದ್ದರೂ ಈಗಿನ ಕಾಲದಲ್ಲಿ ಸಾಕಾಗುವುದಿಲ್ಲ. ಒಂದಲ್ಲ ಒಂದು ರೀತಿಲಿ ದುಷ್ಕರ್ಮಿಗಳು ಹಣವನ್ನು ದೋಚುತ್ತಲೇ ಇದ್ದಾರೆ. ಇದೀಗ ಇಂತಹುದೇ ಘಟನೆ ಪುತ್ತೂರಿನಲ್ಲಿ ನಡೆದಿದೆ.ಯಾರೋ ಕಿರಾತಕರು ಬ್ಯಾಂಕ್ ನ ಹೆಸರಿನಲ್ಲಿ ಮಹಿಳೆಯ ಮೊಬೈಲ್ ಗೆ

ಕರಾವಳಿಯಲ್ಲಿ ಬಿರುಸುಗೊಂಡ ಮುಂಗಾರು | ಇಂದಿನಿಂದ 3 ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗುವ ಸೂಚನೆ | ದಕ್ಷಿಣ…

ರಾಜ್ಯದಲ್ಲಿ ಸೆಪ್ಟೆಂಬರ್​ ತಿಂಗಳಿನಲ್ಲಿ ಮುಂಗಾರು ಬಿರುಸು ಪಡೆದುಕೊಂಡಿದ್ದು, ಈ ತಿಂಗಳ ಆರಂಭದಿಂದಲೂ ರಾಜ್ಯದೆಲ್ಲೆಡೆ ಎಡೆಬಿಡದೆ ಮಳೆ ಸುರಿಯುತ್ತಿದೆ. ಹಾಗೆಯೇ ಇಂದಿನಿಂದ ಮಳೆಯ ತೀವ್ರತೆ ಇನ್ನೂ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ.

ಧರ್ಮಸ್ಥಳ | ಹತ್ಯಡ್ಕ ಸಮೀಪ ನಡೆದಿದ್ದ ಸಾಕೆಮ್ಮ ಹತ್ಯೆಯ ಆರೋಪಿಗಳನ್ನು ಬಂಧಿಸುವಂತೆ ಹಿಂ.ಜಾ.ವೇ ಕಡೆಯಿಂದ ಮನವಿ

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಸಮೀಪ ಸೆಪ್ಟೆಂಬರ್ 7ರಂದು ಗುಂಡು ಹಾರಿಸಿ ಸಾಕು ಎಮ್ಮೆಯನ್ನು ಹತ್ಯೆ ಮಾಡಿದ ಘಟನೆಯನ್ನು ಹಿಂ.ಜಾ.ವೇ. ಕೊಕ್ಕಡ ವಲಯವೂ ತೀವ್ರವಾಗಿ ಖಂಡಿಸಿದೆ.ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದು ಕೊಕ್ಕಡ ವಲಯ ಹಿಂದು ಜಾಗರಣ ವೇದಿಕೆ

ಪಡುಬಿದ್ರಿ | ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಪಾದಚಾರಿ ಸಾವು

ರಸ್ತೆ ದಾಟುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಪಾದಚಾರಿ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ಪಡುಬಿದ್ರಿಯಲ್ಲಿ ನಡೆದಿದೆ.ಮೃತರನ್ನು ಪಡುಬಿದ್ರಿ ಬೆಂಗ್ರೆ ನಿವಾಸಿ ಆನಂದ ದೇವಾಡಿಗ (62) ಎಂದು ಗುರುತಿಸಲಾಗಿದೆ.ಆನಂದ ದೇವಾಡಿಗ ಅವರು ಬುಧವಾರ ರಾತ್ರಿ ಪಡುಬಿದ್ರಿ

ಸರ್ವೆ : ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ವೀಕ್ಷಿಸಿದ ಶಾಸಕ ಸಂಜೀವ ಮಠಂದೂರು

ಸವಣೂರು : ಜೀರ್ಣೋದ್ಧಾರ ಗೊಳ್ಳುತ್ತಿರುವ ನಮ್ಮ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಶಾಸಕರಾದ ಶ್ರೀ ಸಂಜೀವ ಮಠಂದೂರುರವರು ಭೇಟಿ ನೀಡಿಕಾಮಗಾರಿಗಳ ವೀಕ್ಷಣೆ ಮಾಡಿದರು.ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಇನ್ನಷ್ಟು ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.

ಇನ್ಮುಂದೆ ಸ್ಮಾರ್ಟ್ ಫೋನ್ ಡಿಸ್​ಪ್ಲೇ ಒಡೆದರೆ ಚಿಂತೆ ಮಾಡೋ ಅಗತ್ಯವಿಲ್ಲಾ!!| ಹೊಸದಾಗಿ ಬರಲಿದೆ
ಬಿರುಕು ಬಿಟ್ಟರೆ ಸ್ವಯಂ

ತಮ್ಮ ತಮ್ಮ ಮೊಬೈಲ್ ಫೋನ್ ಎಂದರೆ ಯಾರಿಗೆ ಪ್ರೀತಿಯಿಲ್ಲ ಹೇಳಿ. ಅದಕ್ಕೆ ಕಿಂಚಿತ್ತು ಸ್ಕ್ರ್ಯಾಚ್ ಅಥವಾ ಯಾವುದೇ ರೀತಿಯ ತೊಂದರೆಯಾಗಬಾರದೆಂದು ಸದಾ ಜೋಪಾನವಾಗಿಯೇ ನೋಡಿಕೊಳ್ಳುತ್ತೇವೆ.ಒಂದೊಮ್ಮೆ ಕೈಜಾರಿ ಫೋನ್ ಬಿತ್ತೆಂದರೆ ಸಾಕು ಆಕಾಶ ಭೂಮಿ ಒಂದು ಮಾಡುತ್ತೇವೆ. ಯಾಕೆಂದರೆ ಎಲ್ಲರೂ

ಕಾಡುಹಂದಿಯೆಂದು ತಿಳಿದು ಹೊಡೆದ ಗುಂಡು ಯುವಕನ ಹೊಟ್ಟೆಗೆ!!| ಬೇಟೆಗಾರರು ಪೊಲೀಸ್ ವಶಕ್ಕೆ

ಕಾಡುಹಂದಿಯ ಬೇಟೆಗೆ ಬಂದಿದ್ದ ಹವ್ಯಾಸಿ ಬೇಟೆಗಾರರಿಂದ ಹಂದಿ ಎಂದು ತಿಳಿದು ಹೊಡೆದ ಗುಂಡು ಯುವಕನಿಗೆ ತಗುಲಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದ ಹೊರವಲಯದಲ್ಲಿ ಈ ದುರಂತ ಸಂಭವಿಸಿದೆ. ಮಾದೇಶ್ (25) ಎಂಬ ಯುವಕನಿಗೆ ಗುಂಡೇಟು

ರಸ್ತೆಯಲ್ಲಿ ಕಬ್ಬಿನ ಲಾರಿಗೆ ಅಡ್ಡ ಹಾಕಿ ಕಬ್ಬು ಸವಿದ ಆನೆಗಳು !! | ಸಾಮಾಜಿಕ ಜಾಲತಾಣದಲ್ಲಿ ಫೋಟೋ ಫುಲ್ ವೈರಲ್

ಇತ್ತೀಚಿಗಷ್ಟೇ ಅದೆಷ್ಟೋ ಆನೆಗಳು ರಸ್ತೆಗೆ ಇಳಿದು ಅನೇಕ ಅಪಘಾತಗಳು ಸಂಭವಿಸಿದ್ದು ಉಂಟು. ಕಾಡಿನಿಂದ ನಾಡಿಗೆ ಬರುವ ಈ ಆನೆಗಳು ತೊಂದರೆ ನೀಡುವುದಂತೂ ಖಚಿತ.ಇದೀಗ ಜಿಲ್ಲೆಯ ಗಡಿ ಭಾಗವಾದ ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ