ಪುತ್ತೂರು | ಬ್ಯಾಂಕ್ ಹೆಸರಲ್ಲಿ ಮಹಿಳೆಯ ಅಕೌಂಟ್ ನಿಂದ ಹಣ ದೋಚಿದ ಖದೀಮರು | ಒಟಿಪಿ ನೀಡಿ ಹಣ ಕಳೆದುಕೊಂಡು ತನ್ನ ತಲೆಗೆ ತಾನೇ ಕೈಯಿಟ್ಟು ಕುಳಿತ ಮಹಿಳೆ !

ಪುತ್ತೂರು:ಹಣದ ವಿಚಾರವಾಗಿ ನಾವು ಎಷ್ಟು ಎಚ್ಚರಿಕೆ ಇಂದ ಇದ್ದರೂ ಈಗಿನ ಕಾಲದಲ್ಲಿ ಸಾಕಾಗುವುದಿಲ್ಲ. ಒಂದಲ್ಲ ಒಂದು ರೀತಿಲಿ ದುಷ್ಕರ್ಮಿಗಳು ಹಣವನ್ನು ದೋಚುತ್ತಲೇ ಇದ್ದಾರೆ. ಇದೀಗ ಇಂತಹುದೇ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಯಾರೋ ಕಿರಾತಕರು ಬ್ಯಾಂಕ್ ನ ಹೆಸರಿನಲ್ಲಿ ಮಹಿಳೆಯ ಮೊಬೈಲ್ ಗೆ ಸಂದೇಶವನ್ನು ಕಳುಹಿಸಿ ಸಾವಿರಾರು ರೂ. ಹಣ ದೋಚಿದ ಘಟನೆ ಸಂಭವಿಸಿದೆ.

ಬ್ಯಾಂಕ್ ಇಂದಲೇ ಬಂದ ಸಂದೇಶ ಎಂದು ತಿಳಿದು,ಕಸಬಾ ಗ್ರಾಮದ ನಿವಾಸಿ ಸುಧಾ ಎಂಬ ಮಹಿಳೆ ಮೋಸಹೋಗಿದ್ದಾರೆ.

ಸುಧಾರವರ ಮೊಬೈಲ್ ಗೆ ಸೆ.7 ರಂದು ಎಸ್ ಬಿ ಐ ಖಾತೆ ಅಪ್ಡೇಟ್ ಮಾಡುವಂತೆ ಲಿಂಕ್ ನೊಂದಿಗೆ ಸಂದೇಶವೊಂದು ಬಂದಿದ್ದು, ಅವರು ಆ ಲಿಂಕ್ ಅನ್ನು ಒತ್ತಿ ಬ್ಯಾಂಕ್ ಮಾಹಿತಿಗಳನ್ನು ಹಾಗೂ ಒಟಿಪಿಯನ್ನು ಹಾಕಿದ್ದರಿಂದ ಅವರ ಎಸ್ ಬಿಐ ಖಾತೆಯಿಂದ ದುಷ್ಕರ್ಮಿಗಳು ಹಂತ ಹಂತವಾಗಿ ಒಟ್ಟು 65,000 ರೂ. ಹಣವನ್ನು ವಿಥ್ ಡ್ರಾ ಮಾಡಿದ್ದಾರೆ.

ಈ ಬಗ್ಗೆ ವಂಚನೆಗೊಳಗಾದ ಸುಧಾರವರು ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಠಾಣೆಯಲ್ಲಿ ಅಕ್ರ: 35/2021 ಕಲಂ: 66(D) ಐಟಿ ಆಕ್ಟ್ ಮತ್ತು ಕಲಂ 419,420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Leave A Reply

Your email address will not be published.