ಹಳೆನೇರಂಕಿ ಮಹಿಳೆ ನಾಪತ್ತೆ ದೂರು ದಾಖಲು

ಕಡಬ: ಹಳೆನೇರಂಕಿ ಗ್ರಾಮದ ಮಹಿಳೆಯೋರ್ವರು ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೆನೇರಂಕಿ ಗ್ರಾಮದ ಮಡೆಂಜಿಮಾರು ನಿವಾಸಿ ಹೊನ್ನಮ್ಮ(೫೮ವ.) ಎಂಬವರು ನಾಪತ್ತೆಯಾಗಿರುವವರು. ಈ ಬಗ್ಗೆ ಹೊನ್ನಮ್ಮ ಅವರ ಮಗ ವಿಶ್ವನಾಥ ಎಂಬವರು ಕಡಬ ಠಾಣೆಗೆ ದೂರು ನೀಡಿದ್ದಾರೆ.

ಈ ದೂರು ನೀಡಿರುವ ಮಹಿಳೆಯ ಪುತ್ರ ನಾನು ಕೂಲಿ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದು ನನ್ನ ತಾಯಿಗೆ ಸ್ವಲ್ಪ ಮಾನಸಿಕ ಅಸ್ವಸ್ಥತೆ ಇದ್ದು ಮನೆಯಲ್ಲಿಯೇ ಇರುತ್ತಿದ್ದರು. ಒಮ್ಮೊಮ್ಮೆ ಮಾನಸಿಕ ಅಸ್ವಸ್ಥತೆಯಿಂದ ಮನೆ ಬಿಟ್ಟು ಹೋಗುತ್ತಿದ್ದು ಈ ಹಿಂದೆ ಕೂಡ ಒಮ್ಮೆ ಮನೆಯಿಂದ ಹೇಳದೆ ಹೋದವರನ್ನು ಪತ್ತೆ ಮಾಡಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಸೆ.05ರಂದು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮನೆಯಲ್ಲಿ ತಂದೆ-ತಾಯಿ ಮಾತ್ರ ಇದ್ದರು.ಈ ವೇಳೆ ತಾಯಿ ಮನೆಯಿಂದ ಗುಡ್ಡದ ಕಡೆಗೆ ಹೋದವರು ಮತ್ತೆ ಮನೆಗೆ ಬರಲಿಲ್ಲ, ಈ ಬಗ್ಗೆ ಹುಡುಕಾಡಿದರೂ ಅವರು ಪತ್ತೆಯಾಗಲಿಲ್ಲ ಎಂದು ಮಹಿಳೆಯ ಮಗ ಕಡಬ ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.