ಆನ್‍ಲೈನ್ ಪಾವತಿಯಲ್ಲಿನ ವಂಚನೆ ತಡೆಯಲು ಹೊಸ ಯೋಜನೆ ರೂಪಿಸಿದ ಆರ್‌ಬಿಐ | ಇನ್ನಾದರೂ ಬೀಳಲಿದೆಯೇ ಈ ರೀತಿಯ ವಂಚನೆಗಳಿಗೆ ಬ್ರೇಕ್ ??

ಇತ್ತೀಚಿಗೆ ಆನ್‍ಲೈನ್ ಪಾವತಿಗಳಲ್ಲಿ ಹೆಚ್ಚೆಚ್ಚು ವಂಚನೆಗಳು ಆಗುತ್ತಿವೆ. ಕಾರ್ಡ್ ಪಿನ್ ಗಳು, ಒಟಿಪಿಗಳು, ಪಾಸ್ ವರ್ಡ್ ಮುಂತಾದವುಗಳಿಂದ ವಂಚಕರು ದುಡ್ಡು ಕೊಳ್ಳೆ ಹೊಡೆಯುವ ಪ್ರಸಂಗಗಳು ಮುನ್ನೆಲೆಗೆ ಬರುತ್ತಿವೆ.

ಹಾಗಾಗಿ ಆನ್‍ಲೈನ್ ಪಾವತಿಯಲ್ಲಾಗುತ್ತಿರುವ ಕೆಲ ವಂಚನೆ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಿಶೇಷ ಗಮನಹರಿಸಿದೆ. ಮುಂದಿನ ದಿನಗಳಲ್ಲಿ ಆನ್‍ಲೈನ್ ಕಾರ್ಡ್ ತಯಾರಕರು ಮತ್ತು ಬ್ಯಾಂಕ್‍ಗಳು ಮಾತ್ರ ಗ್ರಾಹಕರ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳ ಮಾಹಿತಿಯನ್ನು ಸಂಗ್ರಹ ಮಾಡಿಟ್ಟುಕೊಳ್ಳಬಹುದೇ ಹೊರತು ಪೇಮೆಂಟ್ ಆ್ಯಪ್, ಆನ್‍ಲೈನ್ ಶಾಪಿಂಗ್ ಪೋರ್ಟಲ್‍ಗಳು ಕಾರ್ಡ್ ಮಾಹಿತಿಯನ್ನು ಸಂಗ್ರಹ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ.

ಕೆಲ ಪೇಮೆಂಟ್ ಆ್ಯಪ್, ಆನ್‍ಲೈನ್ ಶಾಪಿಂಗ್ ಪೋರ್ಟಲ್‍ಗಳು ತಮ್ಮ ಗ್ರಾಹಕರ ಕಾರ್ಡ್ ಮಾಹಿತಿಯನ್ನು ಸಂಗ್ರಹ ಮಾಡಿಕೊಂಡಿರುತ್ತದೆ. ಮುಂದಿನ ಬಾರಿ ಅವರು ವ್ಯವಹರಿಸುವಾಗ ಅವರು ಕಾರ್ಡ್ ಸಂಖ್ಯೆ ತಿಳಿಸಬೇಕೆಂದಿಲ್ಲ, ಬದಲಾಗಿ ಅವರ ಒಟಿಪಿ ಮತ್ತು ಪಾಸ್‍ವರ್ಡ್ ನೀಡಿದರೆ ಸುಲಭವಾಗಿ ವ್ಯವಹರಿಸಬಹುದಿತ್ತು. ಈ ನಿಯಮಕ್ಕೆ ಮುಂದಿನ ವರ್ಷ ಜನವರಿ 1ರ ಬಳಿಕ ಆರ್‌ಬಿಐ ಬ್ರೇಕ್ ಹಾಕಲಿದೆ.

ಆನ್‍ಲೈನ್ ಕಾರ್ಡ್ ತಯಾರಕರು ಮತ್ತು ಬ್ಯಾಂಕ್‍ಗಳು ಮಾತ್ರ ಗ್ರಾಹಕರ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳ ಮಾಹಿತಿಯನ್ನು ಸಂಗ್ರಹ ಮಾಡಿಟ್ಟುಕೊಳ್ಳಬಹುದು. ಉಳಿದಂತೆ ಆನ್‍ಲೈನ್ ಶಾಪಿಂಗ್ ಪೋರ್ಟಲ್‍ಗಳು ತಮ್ಮ ಸರ್ವರ್ ನಲ್ಲಿ ಸಂಗ್ರಹಮಾಡಿಟ್ಟುಕೊಂಡರೆ ಗ್ರಾಹಕರ ಡೇಟಾ ಸೋರಿಕೆಯಾಗಿ ವಂಚನೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಆರ್‌ಬಿಐ ಈ ಹೊಸ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ.

Leave A Reply

Your email address will not be published.