ಈ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡಲು ಹೊಸ ಉಪಾಯದಲ್ಲಿದೆ ಬೆಂಗಳೂರು ಬಿಬಿಎಂಪಿ!!ಅನುಮತಿ ವಿಚಾರದಲ್ಲಿ ಎದ್ದ ಗೊಂದಲಕ್ಕೆ ಚೀಟಿ ಎತ್ತುವ ಮೂಲಕ ಉತ್ತರಿಸಲಿದೆ ಬಿಬಿಎಂಪಿ

ಗಣೇಶ ಹಬ್ಬಕ್ಕೆ ಇನ್ನೇನು ಎರಡೇ ದಿನಗಳು ಬಾಕಿ ಉಳಿದಿದ್ದು, ಸರ್ಕಾರದ ನಿಯಮಗಳ ಪ್ರಕಾರ ಆಚರಣೆಗೆ ಅವಕಾಶ ಕಲ್ಪಿಸಲಾಗಿದ್ದರೂ ಬೆಂಗಳೂರಿನಲ್ಲಿ ಮಾತ್ರ ಗಣೇಶ ಮೂರ್ತಿ ಯನ್ನು ಕೂರಿಸುವಲ್ಲಿ ಸಾರ್ವಜನಿಕರ ಮಧ್ಯೆ ಕೊಂಚ ಭಿನ್ನಾಭಿಪ್ರಾಯವಿದ್ದು, ಎಲ್ಲಾ ಗೊಂದಲಕ್ಕೂ ಬಿಬಿಎಂಪಿ ತೆರೆಎಳೆಯಬೇಕಾಗಿದೆ.

ಸರ್ಕಾರದ ಆದೇಶದ ಪ್ರಕಾರ ಒಂದು ವಾರ್ಡ್‍ಗೆ ಒಂದೇ ಗಣೇಶನನ್ನು ಕೂರಿಸುವಂತಿದ್ದು, ಸ್ಮಾರ್ಟ್ ಸಿಟಿ ಯಾದ ಬೆಂಗಳೂರಿನಲ್ಲಿ ಒಂದೊಂದು ವಾರ್ಡ್ ಗೆ ಹಲವಾರು ಸಂಘಟನೆಗಳಿದ್ದು ಎಲ್ಲಾ ಸಂಘಟನೆಯವರು ಅವಕಾಶಕ್ಕಾಗಿ ಮನವಿ ಸಲ್ಲಿಸಿದ್ದಾರೆ.ಆದರೆ, ನಿಯಮ ಎಲ್ಲರಿಗೂ ಪಾಲನೆಯಾಗಲಿದ್ದು, ಯಾರಿಗೆ ಅನುಮತಿ ನೀಡುವುದು, ಯಾರನ್ನು ಬಿಡುವುದು ಎಂದು ಅಧಿಕಾರಿಗಳು ಒಂದು ಹೊಸ ಉಪಾಯವನ್ನು ಕಂಡುಹಿಡಿದಿದ್ದು, ಚೀಟಿ ಹಾಕುವ ಮೂಲಕ ಈ ಬಾರಿ ಗಣೇಶನ ಮೂರ್ತಿ ಇಡಲು ಒಂದು ಸಂಘಟನೆಯನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಚೀಟಿಯಲ್ಲಿ ಯಾರ ಹೆಸರು ಬರುತ್ತದೋ ಅವರು ಗಣೇಶನನ್ನು ಕೂರಿಸಬಹುದಾಗಿದ್ದು,ಈ ಕ್ರಮಕ್ಕೆ ಕೆಲ ಸಂಘಟನೆಗಳ ವಿರೋಧವೂ ವ್ಯಕ್ತವಾಗಿದೆ.ಈ ನಡುವೆ ಬೆಂಗಳೂರಿನಲ್ಲಿ ಸ್ಥಳ ನಿಗದಿಗೂ ಗೊಂದಲವೆದ್ದಿದ್ದು, ಬಿಬಿಎಂಪಿ ಅಧಿಕಾರಿಗಳ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುವುದನ್ನು ನಿರೀಕ್ಷಿಸಲಾಗಿದೆ.

ಅದಲ್ಲದೇ ನಾಲ್ಕು ಅಡಿಗಿಂತ ಹೆಚ್ಚು ಎತ್ತರದ ಗಣೇಶನ ಮೂರ್ತಿಯನ್ನು ಮಾರಿದರೆ, ಹಾಗೂ ಕೂರಿಸಿದರೆ ದಂಡ ವಿಧಿಸಲು ಬಿಬಿಎಂಪಿ ಮಾರ್ಷಲ್‍ಗಳು ಮುಂದಾಗಿದ್ದು, ಗಣೇಶನ ಮೂರ್ತಿಗಳನ್ನು ಸೀಜ್ ಮಾಡಲಾಗುತ್ತದೆ ಎಂಬ ಸುದ್ದಿಯೂ ಹಬ್ಬಿದ್ದು, ಗಣೇಶನ ವಿಗ್ರಹ ಮಾರಾಟಗಾರರಿಗೆ ಹೊಸ ತಲೆನೋವು ಶುರುವಾಗಿದೆ. ಗಣೇಶೋತ್ಸವದ ಗೊಂದಲಗಳು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿವೆ. ನಾಳೆ ಬಿಬಿಎಂಪಿಗೆ ಮುತ್ತಿಗೆ ಹಾಕಲು ಗಣೇಶೋತ್ಸವ ಸಮಿತಿ ನಿರ್ಧರಿಸಿದೆ.

Leave A Reply

Your email address will not be published.