ಇನ್ನು ಕೆಲವೇ ದಿನಗಳಲ್ಲಿ ಮಾನವನು ಊಸರವಳ್ಳಿಯಾಗಿ ಬದಲಾಗುವ ಕಾಲ ಸನ್ನಿಹಿತವಾಗಿದೆ !!? | ಏನಿದು ಅಂತೀರಾ?? ಲಾಗಿನ್ ಟು ಹೊಸ ಕನ್ನಡ ಡಾಟ್ ಕಾಮ್

ಇಂದಿನ ಕಾಲದಲ್ಲಿ ತಂತ್ರಜ್ಞಾನ ಇಲ್ಲದ ಕ್ಷೇತ್ರವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ವಿಜ್ಞಾನ, ವೈದ್ಯ ವಿಜ್ಞಾನ ಎಲ್ಲದಕ್ಕೂ ತಂತ್ರಜ್ಞಾನ ಬೇಕೇ ಬೇಕು. ತಂತ್ರಜ್ಞಾನ ಇಲ್ಲದಿದ್ದರೆ ಪ್ರಪಂಚದ ವೈಶಾಲ್ಯತೆ ಮನುಷ್ಯನಿಗೆ ತಿಳಿಯುತ್ತಿರಲಿಲ್ಲ. ಮನುಷ್ಯ ಕುಬ್ಜನಾಗುತ್ತಿದ್ದ. ತಂತ್ರಜ್ಞಾನದಿಂದ ಭೂಮಿ- ಆಕಾಶ, ಪಾತಾಳ ಒಂದಾಗಿದೆ. ಸಾಕಷ್ಟು ವಿಚಾರಗಳು ಕ್ಷಣಮಾತ್ರದಲ್ಲಿ ದೊರೆಯುತ್ತವೆ.

ಇಂತಹ ಮುಂದುವರಿದ ಕಾಲದಲ್ಲಿ ಇದೀಗ ಹೊಸ ಆವಿಷ್ಕಾರವೊಂದು ಸದ್ದಿಲ್ಲದೆ ಈ ಪ್ರಪಂಚಕ್ಕೆ ಕಾಲಿಡುತ್ತಿದೆ. ನೈಸರ್ಗಿಕ ಜೀವವಿಜ್ಞಾನದಿಂದ ಪ್ರೇರಿತವಾದ ದಕ್ಷಿಣ ಕೊರಿಯಾದ ಸಂಶೋಧಕರು ಊಸರವಳ್ಳಿಯಂತೆ ಬದಲಾಗುವ ಕೃತಕ ಚರ್ಮವನ್ನು ಕಂಡು ಹಿಡಿದಿದ್ದಾರೆ.

ದಕ್ಷಿಣ ಕೊರಿಯಾದ ಸಿಯೋಲ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಕೋ ಸೆಯುಂಗ್ ಹ್ವಾನ್ ಈ ಕೃತಕ ಚರ್ಮವನ್ನು ಕಂಡು ಹಿಡಿದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ನೈಸರ್ಗಿಕ ಜೀವವಿಜ್ಞಾನದಿಂದ ಪ್ರೇರಿತನಾಗಿ ಕೃತಕ ಚರ್ಮದಂತಹ ವಸ್ತುವನ್ನು ಕಂಡು ಹಿಡಿದಿದ್ದೇನೆ. ಈ ಕೃತಕ ಚರ್ಮ ತಾಪಮಾನಕ್ಕೆ ತಕ್ಕಂತೆ ಊಸರವಳ್ಳಿಯ ರೀತಿ ತಕ್ಷಣ ತನ್ನ ಬಣ್ಣವನ್ನು ಬದಲಾಯಿಸುತ್ತದೆ ಎಂದು ಹೇಳಿದ್ದಾರೆ.

ಒಂದು ವೇಳೆ ನಾವು ಮರುಭೂಮಿ ರೀತಿಯ ಪ್ರದೇಶಕ್ಕೆ ಹೋದರೆ ಈ ರೀತಿಯ ಚರ್ಮವನ್ನು ಧರಿಸಬಹುದು. ಈ ಮೂಲಕ ನಾವು ಎಷ್ಟೇ ಬಿಸಿಲಿನಲ್ಲಿದ್ದರೂ ಸುಲಭವಾಗಿ ಓಡಾಡಬಹುದು. ಅದೇ ರೀತಿ ನಾವು ತಯಾರಿಸುವ ಈ ಕೃತಕ ಚರ್ಮವನ್ನು ಆ ವಾತಾವರಣಕ್ಕೆ ತಕ್ಕಂತೆ ಬದಲಾಯಿಸಬೇಕು ಎಂದಿದ್ದಾರೆ.

ಕೋ ಸೆಯುಂಗ್ ಹ್ವಾನ್ ಮತ್ತು ಅವರ ತಂಡ ವಿವಿಧ ಬಣ್ಣಗಳ ಮೇಲೆ ರೋಬೋಟ್ ಅನ್ನು ಬಿಟ್ಟು ತಮ್ಮ ಪ್ರಯೋಗವನ್ನು ಪ್ರದರ್ಶಿಸಿದರು. ರೋಬೋಟ್ ಕೆಂಪು, ನೀಲಿ ಮತ್ತು ಹಸಿರು ಬಣ್ಣಗಳ ಮೇಲೆ ಹೋಗುತ್ತ ಇದ್ದಂತೆ ಆ ಬಣ್ಣಗಳಿಗೆ ತಿರುಗುತ್ತಿತ್ತು ಇದನ್ನು ನೋಡಿದ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಬೆರಗಾಗಿ ನಿಂತಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಕೋ, ಸೆನ್ಸರ್‍ಗಳಿಂದ ಪತ್ತೆಯಾದ ಬಣ್ಣದ ಮಾಹಿತಿಯನ್ನು ಮೈಕ್ರೊಪ್ರೊಸೆಸರ್ ಗೆ ಮತ್ತು ನಂತರ ಸಿಲ್ವರ್ ನ್ಯಾನೊವೈರ್ ಹೀಟರ್‍ಗಳಿಗೆ ವರ್ಗಾಯಿಸಲಾಗುತ್ತದೆ. ಹೀಟರ್‍ಗಳು ಒಂದು ನಿರ್ದಿಷ್ಟ ತಾಪಮಾನವನ್ನು ತಲುಪಿದ ನಂತರ, ಥರ್ಮೋಕ್ರೋಮಿಕ್ ಲಿಕ್ವಿಡ್ ಸ್ಫಟಿಕ ಪದರವು ಅದರ ಬಣ್ಣವನ್ನು ಬದಲಾಯಿಸುತ್ತೆ ಎಂದು ತಿಳಿಸಿದರು.

ಈ ಆವಿಷ್ಕಾರದಿಂದ ಮನುಷ್ಯನ ಚರ್ಮದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದೆಂದು ತಿಳಿದಿಲ್ಲ. ಈ ಕೃತಕ ಚರ್ಮದಲ್ಲಿ ಸಹಜ ಚರ್ಮದಲ್ಲಿ ಬೆಳೆಯುವಂತೆ ಕೂದಲುಗಳು ಬೆಳೆಯಬಹುದೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ತೆಳ್ಳಗಿರುವವರು ದಪ್ಪ ಕಾಣಬಹುದೇ ಎಂಬ ಕುತೂಹಲವೂ ಹಲವರಲ್ಲಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಕೃತಕ ಚರ್ಮ ಮಾರುಕಟ್ಟೆಗೆ ಬಂದ ನಂತರವೇ ತಿಳಿಯಲಿದೆ.

ಈ ರೀತಿಯ ಹೊಸ ಹೊಸ ಆವಿಷ್ಕಾರಗಳು ಮಾನವನ ಜೀವನವನ್ನೇ ಬೇರೆ ದಿಕ್ಕಿನಲ್ಲಿ ಕೊಂಡೊಯ್ಯುತ್ತದೆ. ಈ ಕೃತಕ ಚರ್ಮವು ಸ್ಪರ್ಶೇಂದ್ರಿಯವಾಗಿ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂಬುವುದನ್ನು ಕಾದುನೋಡಬೇಕಾಗಿದೆ. ಈ ಆವಿಷ್ಕಾರ ನಡೆಸಿದ ಕೋ ಸೆಯುಂಗ್ ಹ್ವಾನ್ ಅವರು ಇದೀಗ ಎಲ್ಲೆಡೆ ಜನಪ್ರಿಯತೆ ಪಡೆಯುತ್ತಿದ್ದಾರೆ. ಪ್ರಾಧ್ಯಾಪಕರಾಗಿರುವ ಇವರ ಈ ಸಾಧನೆ ಹಲವಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿದೆ.

Leave A Reply

Your email address will not be published.