Day: May 21, 2021

ಕೆಸರಿಗೆ ಸ್ಕಿಡ್ಡಾಗಿ ರಸ್ತೆಗೆ ಬಿದ್ದ ಬೈಕ್ ಸವಾರ | ತಿಂಗಳಿಗಾಗುವಷ್ಟು ಮದ್ಯದ ಪ್ಯಾಕೆಟ್ ತುಂಬಿಕೊಂಡು ಹೊರಟವನ ಗುಟ್ಟು ರಟ್ಟಾಯಿತು !

ಈಗ ಬೀಳುತ್ತಿರುವ ಮಳೆಗೆ ರಸ್ತೆಯಲ್ಲಿರುವ ಕೆಸರಿಗೆ ಟೈಯರ್ ಬೈಕೊಂದು ಸ್ಕಿಡ್ ಆಗಿ ಬಿದ್ದ ವೇಳೆ ಸವಾರ ಗಾಯಗೊಂಡಿದ್ದಾರೆ. ಆದರೆ ಅವರು ರಸ್ತೆಗೆ ಬೀಳುವ ಸಂದರ್ಭದಲ್ಲಿ ತಮ್ಮೊಂದಿಗೆ ಒಯ್ಯುತ್ತಿದ್ದ ಮದ್ಯದ ಪ್ಯಾಕೆಟ್ ಗಳ ರಾಶಿ ರಸ್ತೆಗೆ ಬಿದ್ದಿದೆ. ಕೊಲ್ಲಮೊಗ್ರದ ನಿಟ್ಟೂರು ಬಳಿ ಇಂದು ಬೆಳಿಗ್ಗೆ ಬೈಕೊಂದು ಪಲ್ಟಿಯಾಗಿ ಸವಾರ ಬಿದ್ದು ಗಾಯಗೊಂಡಿದ್ದರು. ಈ ವೇಳೆ ಬೈಕಲ್ಲಿ ಮದ್ಯದ ಪ್ಯಾಕೆಟ್ ಒಯ್ಯುತ್ತಿದ್ದುದು ಕಂಡುಬಂದಿದೆ. ಬೈಕಿನ ಬಾಕ್ಸ್ ನಲ್ಲಿ ಮತ್ತು ಸವಾರನ ಬ್ಯಾಗ್ ನಲ್ಲಿ ಮದ್ಯದ ಹಲವು ಪ್ಯಾಕೆಟ್ ಗಳು ಇದ್ದವು. …

ಕೆಸರಿಗೆ ಸ್ಕಿಡ್ಡಾಗಿ ರಸ್ತೆಗೆ ಬಿದ್ದ ಬೈಕ್ ಸವಾರ | ತಿಂಗಳಿಗಾಗುವಷ್ಟು ಮದ್ಯದ ಪ್ಯಾಕೆಟ್ ತುಂಬಿಕೊಂಡು ಹೊರಟವನ ಗುಟ್ಟು ರಟ್ಟಾಯಿತು ! Read More »

ಪೆರುವಾಜೆ : ಕಾಪುತಕಾಡಿನಲ್ಲಿ ಕಾಡುಕೋಣಗಳ ಓಡಾಟ

ಸುಳ್ಯ : ಸವಣೂರು-ಬೆಳ್ಳಾರೆ ರಸ್ತೆಯ ಕುಂಡಡ್ಕ ಸಮೀಪದ ಕಾಪುತಕಾಡಿನಲ್ಲಿ ಕಾಡುಕೋಣಗಳ ಓಡಾಟ ಕಾಣಸಿಕ್ಕಿದೆ. ಬೆಳ್ಳಾರೆಗೆ ಹೋಗುವ ರಸ್ತೆಯಲ್ಲಿ ಪಾತಾಜೆ ,ಪೂವಾಜೆ ಭಾಗದಿಂದ ಚೆನ್ನಾವರ ಭಾಗಕ್ಕೆ ಹೊಂದಿಕೊಂಡಿರುವ ಕಾಡಿನತ್ತ ಕಾಡುಕೋಣಗಳು ಹೋಗಿವೆ. ಜನವಸತಿ ಹಾಗೂ ಕೃಷಿ ಭೂಮಿ ಹೆಚ್ಚಿರುವ ಪ್ರದೇಶಕ್ಕೆ ಕಾಡುಕೋಣಗಳು ಇಳಿಯುವ ಆತಂಕ ಈಗ ಜನತೆಗೆ ಎದುರಾಗಿದೆ.

ಲಾಕ್ ಡೌನ್ ಮತ್ತೆ 14 ದಿನ ಮುಂದಕ್ಕೆ | ಜೂನ್ 7 ರ ವರೆಗೆ ಮುಂದುವರಿಕೆ

ಕರ್ನಾಟಕದಲ್ಲಿ ಜೂನ್ 7 ರವರಿಗೆ ಮಾತನ್ನು ವಿಸ್ತರಿಸಿ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಕೊರೊನಾ ಸೋಂಕು ಹಳ್ಳಿಹಳ್ಳಿಗೂ ಹಬ್ಬುತ್ತಿರುವುದು ಆತಂಕಕಾರಿಯಾಗಿದೆ. ಆದುದರಿಂದ ಮತ್ತೆ 14 ದಿನಗಳ ಕಾಲ ಲಾಕ್ ಡೌನ್ ಅನಿವಾರ್ಯ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಮೇ 24 ರಿಂದ ಜೂನ್ 7 ನೇ ತಾರೀಕಿನವರೆಗೆ ಈ ಲಾಕ್‌ಡೌನ್ ಜಾರಿಯಲ್ಲಿರಲಿದ್ದು ಈ ಹಿಂದಿನ ಮಾರ್ಗಸೂಚಿಯೇ ಈ ಅವಧಿಯಲ್ಲಿ ಮುಂದುವರೆಯುತ್ತದೆ. ಆದರೆ ಈ ಬಾರಿ ಕಠಿಣ ರೂಲ್ಸ್ ಜಾರಿಯಲ್ಲಿರುತ್ತದೆ. ಹಳೆಯ ಮಾರ್ಗಸೂಚಿಗೆ ಇದ್ದರೂ ಅದರ ಪಾಲನೆಯಲ್ಲಿ ಕಟ್ಟುನಿಟ್ಟು ಅಧಿಕವಾಗಿರುತ್ತದೆ. ಬೆಳಗ್ಗೆ …

ಲಾಕ್ ಡೌನ್ ಮತ್ತೆ 14 ದಿನ ಮುಂದಕ್ಕೆ | ಜೂನ್ 7 ರ ವರೆಗೆ ಮುಂದುವರಿಕೆ Read More »

ಮಂಗಳೂರು ಮೂಲದವರ ಸಂಪರ್ಕ, ನೆರವಿಗೆ ಸಮನ್ವಯ ವೇದಿಕೆ ಆರಂಭ..ಕೊರೊನಾ ತಲ್ಲಣ ನಡುವೆ ಜನ ಸ್ನೇಹಿ ನಡೆ

ವಿದೇಶದಲ್ಲಿರುವ ಮಂಗಳೂರು ಮೂಲದವರ ಸಂಪರ್ಕ, ನೆರವಿಗಾಗಿ ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ಸಮನ್ವಯ ವೇದಿಕೆಯೊಂದನ್ನು ಆರಂಭಿಸಲಾಗಿದೆ.<br>ಉದ್ಯೋಗ ಸಹಿತ ವಿವಿಧ ಕಾರಣದಿಂದ ವಿದೇಶಗಳಲ್ಲಿ ನೆಲೆಸಿರುವ ಮಂಗಳೂರು ಮೂಲದ ಕುಟುಂಬಗಳ ತುರ್ತು ಸಂಕಷ್ಟಗಳಿಗೆ ಸ್ಪಂದಿಸುವ ಹಾಗೂ ನೆರವು ನೀಡುವ ಉದ್ದೇಶದೊಂದಿಗೆ ಕೋವಿಡ್ ‘ಸಮನ್ವಯ’ ಹೆಲ್ಪ್‌ಲೈನ್‌ಗೆ ಶುಕ್ರವಾರ ಚಾಲನೆ ನೀಡಲಾಯಿತು. ಅನಿವಾಸಿ ಭಾರತೀಯರ (ಎನ್‌ಆರ್‌ಐ) ಜತೆ ಅವರ ಸಮಸ್ಯೆಗಳ ಬಗ್ಗೆ ಶುಕ್ರವಾರ ವೆಬಿನಾರ್ ನಡೆಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸಲಹೆ, ಸೂಚನೆ, ಅಹವಾಲುಗಳನ್ನು ಸ್ವೀಕರಿಸಿದರು. ಎನ್‌ಆರ್‌ಐಗಳು ಸಹಾಯಕ್ಕಾಗಿ …

ಮಂಗಳೂರು ಮೂಲದವರ ಸಂಪರ್ಕ, ನೆರವಿಗೆ ಸಮನ್ವಯ ವೇದಿಕೆ ಆರಂಭ..ಕೊರೊನಾ ತಲ್ಲಣ ನಡುವೆ ಜನ ಸ್ನೇಹಿ ನಡೆ Read More »

ಕೋವಿಡ್ ಸೋಂಕಿತರ ಮನೆಗಳು ಇನ್ನು ಮುಂದೆ ಸೀಲ್ ಡೌನ್

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರ ಮನೆಗಳು ಇನ್ನು ಮುಂದೆ ಸೀಲ್ ಡೌನ್ ಆಗಲಿವೆ. ಇಂತಹದ್ದೊಂದು ನಿರ್ಧಾರಕ್ಕೆ ಉಡುಪಿ ಜಿಲ್ಲಾಡಳಿತ ಬಂದಿದೆ. ಉಡುಪಿ ಜಿಲ್ಲೆಯಲ್ಲಿ ಜಾರಿಗೆ ಬರುವ ಈ ಹೊಸ ನಿಯಮದ ಪ್ರಕಾರ ಹೋಂ ಐಸೋಲೇಷನ್ ಇರುವ ಮನೆಗಳಿಗೆ ಪಟ್ಟಿ ಅಳವಡಿಕೆ ಮಾಡಿ ಆ ಮೂಲಕಪಾಸಿಟಿವ್ ಬಂದವರನ್ನು ಸುಲಭವಾಗಿ ಗುರುತಿಸಲು ಈ ಕ್ರಮ ಸಹಕಾರಿಯಾಗಲಿದೆ. ಇದರಿಂದಾಗಿ ಸೋಂಕಿತರ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸುವ ಉದ್ದೇಶ ಇದೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ. …

ಕೋವಿಡ್ ಸೋಂಕಿತರ ಮನೆಗಳು ಇನ್ನು ಮುಂದೆ ಸೀಲ್ ಡೌನ್ Read More »

ವಿಟ್ಲ: ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಭೆ

ವಿಟ್ಲ ಸರ್ಕಾರಿ ಶಾಲೆಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಟಾಸ್ಕ್ ಪೋರ್ಸ್ ಸಮಿತಿ ಸಭೆಯು ಪುತ್ತೂರು ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ನಡೆಯಿತು. ವಿಟ್ಲ ಪಟ್ಟಣ ಪಂಚಾಯತ್ ವತಿಯಿಂದ ಆಶಾಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರಿಗೆಆಕ್ಸಿಮೀಟರ್, ಗ್ಲಾಸ್, ಸ್ಯಾನಿಟೈಸರ್, ಮಾಸ್ಕ್, ಛತ್ರಿ ವಿತರಿಸಲಾಯಿತು. ವಿಟ್ಲ ಔಷಧಿ ವ್ಯಾಪಾರಸ್ಥರಿಂದ ಥರ್ಮಮೀಟರ್ ನೀಡಲಾಯಿತು. ಮನೆ ಹಾನಿಗೊಂಡ ಕುಟುಂಬಕ್ಕೆ ಶಾಸಕರು ಚೆಕ್ ಹಸ್ತಾಂತರ ಮಾಡಿದರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಉಪಾಧ್ಯಕ್ಷೆ ಉಷಾ ಕೃಷ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಕಲ್ಲಕಟ್ಟ, ಮುಖ್ಯಾಧಿಕಾರಿ …

ವಿಟ್ಲ: ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಭೆ Read More »

ಮುಕ್ಕೂರು ಕೋವಿಡ್ ನಿಯಂತ್ರಣ ಕಾರ್ಯಪಡೆ ಸಭೆ

ಮುಕ್ಕೂರು : ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಕ್ಕೂರು ವಾರ್ಡ್‌ನಲ್ಲಿ ಕೋವಿಡ್ ನಿಯಂತ್ರಣ ಕಾರ್ಯಪಡೆಯ ಪ್ರಥಮ ಸಭೆ ಹಾಗೂ ಆಶಾ ಕಾರ್ಯಕರ್ತೆರ್ಯರಿಗೆ ಪಲ್ಸ್ ಆಕ್ಸಿ ಮೀಟರ್, ಪುಡ್ ಕಿಟ್ ವಿತರಣೆಯು ಮುಕ್ಕೂರು ಶಾಲಾ ವಠಾರದಲ್ಲಿ ಮೇ 21 ರಂದು ನಡೆಯಿತು. ಸಭಾ ಅಧ್ಯಕ್ಷತೆಯನ್ನು ವಹಿಸಿದ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಕೊರೊನಾ ಪ್ರಕರಣಗಳು ನಗರದಿಂದ ಗ್ರಾಮಾಂತರಕ್ಕೆ ಹಬ್ಬಿದ್ದು ಸಮುದಾಯಕ್ಕೆ ಹರಡುತ್ತಿದೆ. ಇದರ ನಿಯಂತ್ರಣದ ಬಗ್ಗೆ ನಾವೆಲ್ಲರೂ ಸ್ವಯಂ-ಜಾಗೃತಿ ವಹಿಸಬೇಕು. ಭವಿಷ್ಯದ ಮುನ್ನೆಚ್ಚೆರಿಕೆ ದೃಷ್ಟಿಯಿಂದ ಮುಕ್ಕೂರು …

ಮುಕ್ಕೂರು ಕೋವಿಡ್ ನಿಯಂತ್ರಣ ಕಾರ್ಯಪಡೆ ಸಭೆ Read More »

ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ವರ್ಗಾವಣೆ ಆದೇಶ ರದ್ದು

ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರನ್ನು ಬುಧವಾರ ರಾತ್ರಿ ವರ್ಗಾವಣೆ ಮಾಡಲಾಗಿದ್ದು, ಆದರೆ ಗುರುವಾರ ಬೆಳಗ್ಗೆ ರವಿ ಅವರ ವರ್ಗಾವಣೆ ಆದೇಶ ರದ್ದಾಗಿದೆ. ಮೂರು ತಿಂಗಳ ಅಂತರದಲ್ಲಿ ಎರಡು ಬಾರಿ ವರ್ಗಾವಣೆ ಆಗಿದ್ದರೂ ಕೂಡಾ ಎರಡು ಬಾರಿಯೂ ಅವರ ವರ್ಗಾವಣೆ ಆದೇಶ ರದ್ದು ಮಾಡಲಾಗಿದೆ. ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 37 ಮಂದಿ ಸೋಂಕಿತರು ಸಾವನ್ನಪ್ಪಿದ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಕರ್ತವ್ಯ ಲೋಪವನ್ನು ನ್ಯಾಯಾದೀಶರ ಸತ್ಯಶೋಧನಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಬಳಿಕ ಹೈಕೋರ್ಟ್ ಸೂಚನೆಯಂತೆ ರಾಜ್ಯ ಸರ್ಕಾರವು …

ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ವರ್ಗಾವಣೆ ಆದೇಶ ರದ್ದು Read More »

ಹುಚ್ಚು ನಾಯಿ ಕಚ್ಚಿ ಹಲವರಿಗೆ ಗಾಯ | ಹಸು ಕೋಳಿ ನಾಯಿಗಳಿಗೂ ಕಚ್ಚಿ ನಡೆಸಿತು ದಾಂಧಲೆ

ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಹಲವರಿಗೆ ಹುಚ್ಚು ನಾಯಿಯೊಂದು ದಾಳಿ ಮಾಡಿ ಗಾಯಗೊಳಿಸಿದ ಘಟನೆ ಮೇ.21 ರಂದು ವರದಿಯಾಗಿದೆ. ಶುಕ್ರವರ ಮುಂಜಾನೆ ಹುಚ್ಚು ನಾಯಿಯೊಂದು ಪಟ್ರಮೆ ಪ್ರದೇಶದಲ್ಲಿ ತಿರುಗಾಡುತ್ತಿದ್ದು, ಆ ಪರಿಸರದಲ್ಲಿರುವ ಕೆಲವು ಹಸುಗಳು, ಕೋಳಿ ಹಾಗೂ ನಾಯಿಗಳಿಗೆ ಕಚ್ಚಿ ಗಾಯಗೊಳಿಸಿದೆ. ಪಟ್ರಮೆ ಗ್ರಾಮ ನಿವಾಸಿಗಳಾದ ಸುನಂದಾ ಕಲ್ಲಾಪು, ವಾಸಪ್ಪ ನಾಯ್ಕ ಕೇಶವ, ನೆಬಿಸಾ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಇವರುಗಳು ಸಮೀಪದ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಖ್ಯಾತ ಪರಿಸರವಾದಿ, ಅಪ್ಪಿಕೋ ಚಳವಳಿ ನೇತಾರ ಸುಂದರ್ ಲಾಲ್ ಬಹುಗುಣ ಕೋವಿಡ್ ನಿಂದ ವಿಧಿವಶ

ಖ್ಯಾತ ಪರಿಸರವಾದಿ, ಚಿಪ್ಕೊ ಚಳವಳಿ ಮುಖಂಡ ಮತ್ತು ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಸುಂದರ್ ಲಾಲ್ ಬಹುಗುಣ (94ವರ್ಷ) ಅವರು ಕೋವಿಡ್ 19 ಸೋಂಕಿನಿಂದ ಶುಕ್ರವಾರ(ಮೇ 21) ರಿಷಿಕೇಶದ ಏಮ್ಸ್ ನಲ್ಲಿ ನಿಧನರಾಗಿರುವುದಾಗಿ ವರದಿ ತಿಳಿಸಿದೆ. ಖ್ಯಾತ ಪರಿಸರವಾದಿ ಸುಂದರ್ ಲಾಲ್ ಬಹುಗುಣ್ ಅವರು ತನಗೆ ಜ್ವರ ಬಂದಿರುವುದಾಗಿ ಹೇಳಿದ ನಂತರ ಕುಟುಂಬದ ಸದಸ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಪರೀಕ್ಷೆಯ ನಂತರ ಕೋವಿಡ್ 19 ಪಾಸಿಟಿವ್ ವರದಿ ಬಂದಿರುವುದಾಗಿ ವರದಿ ಹೇಳಿದೆ. ಆಸ್ಪತ್ರೆಯಲ್ಲಿ ಬಹುಗುಣ್ ಅವರಿಗೆ ಚಿಕಿತ್ಸೆ …

ಖ್ಯಾತ ಪರಿಸರವಾದಿ, ಅಪ್ಪಿಕೋ ಚಳವಳಿ ನೇತಾರ ಸುಂದರ್ ಲಾಲ್ ಬಹುಗುಣ ಕೋವಿಡ್ ನಿಂದ ವಿಧಿವಶ Read More »

error: Content is protected !!
Scroll to Top