ಲಾಕ್ ಡೌನ್ ಮತ್ತೆ 14 ದಿನ ಮುಂದಕ್ಕೆ | ಜೂನ್ 7 ರ ವರೆಗೆ ಮುಂದುವರಿಕೆ

ಕರ್ನಾಟಕದಲ್ಲಿ ಜೂನ್ 7 ರವರಿಗೆ ಮಾತನ್ನು ವಿಸ್ತರಿಸಿ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಕೊರೊನಾ ಸೋಂಕು ಹಳ್ಳಿಹಳ್ಳಿಗೂ ಹಬ್ಬುತ್ತಿರುವುದು ಆತಂಕಕಾರಿಯಾಗಿದೆ. ಆದುದರಿಂದ ಮತ್ತೆ 14 ದಿನಗಳ ಕಾಲ ಲಾಕ್ ಡೌನ್ ಅನಿವಾರ್ಯ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಮೇ 24 ರಿಂದ ಜೂನ್ 7 ನೇ ತಾರೀಕಿನವರೆಗೆ ಈ ಲಾಕ್‌ಡೌನ್ ಜಾರಿಯಲ್ಲಿರಲಿದ್ದು ಈ ಹಿಂದಿನ ಮಾರ್ಗಸೂಚಿಯೇ ಈ ಅವಧಿಯಲ್ಲಿ ಮುಂದುವರೆಯುತ್ತದೆ. ಆದರೆ ಈ ಬಾರಿ ಕಠಿಣ ರೂಲ್ಸ್ ಜಾರಿಯಲ್ಲಿರುತ್ತದೆ. ಹಳೆಯ ಮಾರ್ಗಸೂಚಿಗೆ ಇದ್ದರೂ ಅದರ ಪಾಲನೆಯಲ್ಲಿ ಕಟ್ಟುನಿಟ್ಟು ಅಧಿಕವಾಗಿರುತ್ತದೆ.
ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವಿರುತ್ತದೆ. ಹಾಲು ಹಣ್ಣು ತರಕಾರಿ ಹಿಂದಿನಂತೆ ಲಭ್ಯ. ಮೀನು, ಮಾಂಸ ಮತ್ತು ಮದ್ಯ ಬೆಳಿಗ್ಗೆ 6 ರಿಂದ 10 ರವರೆಗೆ ಲಭ್ಯ.
ಹಿಂದಿನಂತೆ ಪ್ರತಿ ದಿನವೂ ದಿನಸಿ ಕೊಳ್ಳಲು ಅವಕಾಶ. ವೀಕೆಂಡ್ ಕರ್ಫ್ಯೂ ಇರೋದಿಲ್ಲ. ಪ್ರತಿ ದಿನವೂ ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಕೊಳ್ಳಬಹುದು.
ಇನ್ನು ಮುಂದೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಮತ್ತಷ್ಟು ಟಪ್ ರೂಲ್ಸ್.ಪೊಲೀಸರಿಗೆ ಫುಲ್ ಪವರ್ ಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ. ಇಂದು ನಿನ್ನೆಯಂತೆ ಅಡ್ಡಾದಿಡ್ಡಿ ಜನರು ಓಡಾಡುವಂತಿಲ್ಲ. ಮಾತು ಕೇಳದೆ ಸಮಯದೊಳಗೆ ಮನೆ ಸೇರದಿದ್ದರೆ ಲಾಠಿಯೇಟು ಗ್ಯಾರಂಟಿ.
ಬೆಳಿಗ್ಗೆ 6ರಿಂದ 10 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅನುಮತಿ. ಆದರೆ ಬೆಳಿಗ್ಗೆ 9.45 ಗೆ ಎಲ್ಲಾ ವ್ಯಾಪಾರ ಬಂದ್ ಮಾಡಿ ಹೊರಡಬೇಕು.10 ಗಂಟೆಯೊಳಗೆ ಎಲ್ಲಾ ಬಂದ್ ಆಗಬೇಕು.