ಸುಳ್ಯ : ಸವಣೂರು-ಬೆಳ್ಳಾರೆ ರಸ್ತೆಯ ಕುಂಡಡ್ಕ ಸಮೀಪದ ಕಾಪುತಕಾಡಿನಲ್ಲಿ ಕಾಡುಕೋಣಗಳ ಓಡಾಟ ಕಾಣಸಿಕ್ಕಿದೆ.
ಬೆಳ್ಳಾರೆಗೆ ಹೋಗುವ ರಸ್ತೆಯಲ್ಲಿ ಪಾತಾಜೆ ,ಪೂವಾಜೆ ಭಾಗದಿಂದ ಚೆನ್ನಾವರ ಭಾಗಕ್ಕೆ ಹೊಂದಿಕೊಂಡಿರುವ ಕಾಡಿನತ್ತ ಕಾಡುಕೋಣಗಳು ಹೋಗಿವೆ.
ಜನವಸತಿ ಹಾಗೂ ಕೃಷಿ ಭೂಮಿ ಹೆಚ್ಚಿರುವ ಪ್ರದೇಶಕ್ಕೆ ಕಾಡುಕೋಣಗಳು ಇಳಿಯುವ ಆತಂಕ ಈಗ ಜನತೆಗೆ ಎದುರಾಗಿದೆ.