ವಿಟ್ಲ ಸರ್ಕಾರಿ ಶಾಲೆಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಟಾಸ್ಕ್ ಪೋರ್ಸ್ ಸಮಿತಿ ಸಭೆಯು ಪುತ್ತೂರು ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ನಡೆಯಿತು.

ವಿಟ್ಲ ಪಟ್ಟಣ ಪಂಚಾಯತ್ ವತಿಯಿಂದ ಆಶಾಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರಿಗೆ
ಆಕ್ಸಿಮೀಟರ್, ಗ್ಲಾಸ್, ಸ್ಯಾನಿಟೈಸರ್, ಮಾಸ್ಕ್, ಛತ್ರಿ ವಿತರಿಸಲಾಯಿತು. ವಿಟ್ಲ ಔಷಧಿ ವ್ಯಾಪಾರಸ್ಥರಿಂದ ಥರ್ಮಮೀಟರ್ ನೀಡಲಾಯಿತು. ಮನೆ ಹಾನಿಗೊಂಡ ಕುಟುಂಬಕ್ಕೆ ಶಾಸಕರು ಚೆಕ್ ಹಸ್ತಾಂತರ ಮಾಡಿದರು.
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಉಪಾಧ್ಯಕ್ಷೆ ಉಷಾ ಕೃಷ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಕಲ್ಲಕಟ್ಟ, ಮುಖ್ಯಾಧಿಕಾರಿ ಮಾಲಿನಿ, ಆರೋಗ್ಯ ಶಿಕ್ಷಣ ಅಧಿಕಾರಿ ಕುಸುಮಾ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಇಂದಿರಾ,
ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಶ್ರೀಧರ್ ಉಪಸ್ಥಿತರಿದ್ದರು.