ಹುಚ್ಚು ನಾಯಿ ಕಚ್ಚಿ ಹಲವರಿಗೆ ಗಾಯ | ಹಸು ಕೋಳಿ ನಾಯಿಗಳಿಗೂ ಕಚ್ಚಿ ನಡೆಸಿತು ದಾಂಧಲೆ

ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಹಲವರಿಗೆ ಹುಚ್ಚು ನಾಯಿಯೊಂದು ದಾಳಿ ಮಾಡಿ ಗಾಯಗೊಳಿಸಿದ ಘಟನೆ ಮೇ.21 ರಂದು ವರದಿಯಾಗಿದೆ.

ಶುಕ್ರವರ ಮುಂಜಾನೆ ಹುಚ್ಚು ನಾಯಿಯೊಂದು ಪಟ್ರಮೆ ಪ್ರದೇಶದಲ್ಲಿ ತಿರುಗಾಡುತ್ತಿದ್ದು, ಆ ಪರಿಸರದಲ್ಲಿರುವ ಕೆಲವು ಹಸುಗಳು, ಕೋಳಿ ಹಾಗೂ ನಾಯಿಗಳಿಗೆ ಕಚ್ಚಿ ಗಾಯಗೊಳಿಸಿದೆ.

ಪಟ್ರಮೆ ಗ್ರಾಮ ನಿವಾಸಿಗಳಾದ ಸುನಂದಾ ಕಲ್ಲಾಪು, ವಾಸಪ್ಪ ನಾಯ್ಕ ಕೇಶವ, ನೆಬಿಸಾ ಎಂಬವರಿಗೆ ಗಂಭೀರ ಗಾಯಗಳಾಗಿವೆ.

ಗಾಯಗೊಂಡ ಇವರುಗಳು ಸಮೀಪದ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.