ಕೆಸರಿಗೆ ಸ್ಕಿಡ್ಡಾಗಿ ರಸ್ತೆಗೆ ಬಿದ್ದ ಬೈಕ್ ಸವಾರ | ತಿಂಗಳಿಗಾಗುವಷ್ಟು ಮದ್ಯದ ಪ್ಯಾಕೆಟ್ ತುಂಬಿಕೊಂಡು ಹೊರಟವನ ಗುಟ್ಟು ರಟ್ಟಾಯಿತು !

ಈಗ ಬೀಳುತ್ತಿರುವ ಮಳೆಗೆ ರಸ್ತೆಯಲ್ಲಿರುವ ಕೆಸರಿಗೆ ಟೈಯರ್ ಬೈಕೊಂದು ಸ್ಕಿಡ್ ಆಗಿ ಬಿದ್ದ ವೇಳೆ ಸವಾರ ಗಾಯಗೊಂಡಿದ್ದಾರೆ. ಆದರೆ ಅವರು ರಸ್ತೆಗೆ ಬೀಳುವ ಸಂದರ್ಭದಲ್ಲಿ ತಮ್ಮೊಂದಿಗೆ ಒಯ್ಯುತ್ತಿದ್ದ ಮದ್ಯದ ಪ್ಯಾಕೆಟ್ ಗಳ ರಾಶಿ ರಸ್ತೆಗೆ ಬಿದ್ದಿದೆ.

ಕೊಲ್ಲಮೊಗ್ರದ ನಿಟ್ಟೂರು ಬಳಿ ಇಂದು ಬೆಳಿಗ್ಗೆ ಬೈಕೊಂದು ಪಲ್ಟಿಯಾಗಿ ಸವಾರ ಬಿದ್ದು ಗಾಯಗೊಂಡಿದ್ದರು. ಈ ವೇಳೆ ಬೈಕಲ್ಲಿ ಮದ್ಯದ ಪ್ಯಾಕೆಟ್ ಒಯ್ಯುತ್ತಿದ್ದುದು ಕಂಡುಬಂದಿದೆ.

ಬೈಕಿನ ಬಾಕ್ಸ್ ನಲ್ಲಿ ಮತ್ತು ಸವಾರನ ಬ್ಯಾಗ್ ನಲ್ಲಿ ಮದ್ಯದ ಹಲವು ಪ್ಯಾಕೆಟ್ ಗಳು ಇದ್ದವು. ಅದು ಅಕ್ರಮ ಮದ್ಯವಾಗಿರದೆ, ವೈನ್ ಶಾಪ್ ನಿಂದ ಕೊಂಡುಕೊಂಡು ಬಳಕೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿದುಬಂದಿದೆ.

ಅಪಘಾತ ನಡೆದ ಸ್ಥಳಕ್ಕೆ ಬಂದ ಪಂಚಾಯತ್ ಸದಸ್ಯರೊಬ್ಬರು ಸವಾರನನ್ನು ಅಲ್ಲೇ ನಿಲ್ಲಿಸಿ ಅಬಕಾರಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಅದು ಅವರ ಸ್ವಂತ ಬಳಕೆಗೆ ತೆಗೆದುಕೊಂಡು ಹೋಗುತ್ತಿದ್ದಾರೆಯೇ ಅಥವಾ ಅದನ್ನು ಮಾರಾಟ ಮಾಡುವ ಉದ್ದೇಶ ಇದೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಲಾಕ್ ಡೌನ್ ಇರುವ ಕಾರಣದಿಂದ ತಮ್ಮ ಇಡೀ ತಿಂಗಳ ಬಳಕೆಗೆಂದು ಸ್ಟೋರ್ ಮಾಡಿಕೊಳ್ಳಲು ಅದನ್ನು ಒಯ್ಯಲಾಗುತ್ತಿತ್ತು ಎನ್ನಲಾಗಿದೆ.

Leave A Reply

Your email address will not be published.