ಖ್ಯಾತ ಪರಿಸರವಾದಿ, ಅಪ್ಪಿಕೋ ಚಳವಳಿ ನೇತಾರ ಸುಂದರ್ ಲಾಲ್ ಬಹುಗುಣ ಕೋವಿಡ್ ನಿಂದ ವಿಧಿವಶ

ಖ್ಯಾತ ಪರಿಸರವಾದಿ, ಚಿಪ್ಕೊ ಚಳವಳಿ ಮುಖಂಡ ಮತ್ತು ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಸುಂದರ್ ಲಾಲ್ ಬಹುಗುಣ (94ವರ್ಷ) ಅವರು ಕೋವಿಡ್ 19 ಸೋಂಕಿನಿಂದ ಶುಕ್ರವಾರ(ಮೇ 21) ರಿಷಿಕೇಶದ ಏಮ್ಸ್ ನಲ್ಲಿ ನಿಧನರಾಗಿರುವುದಾಗಿ ವರದಿ ತಿಳಿಸಿದೆ.

ಖ್ಯಾತ ಪರಿಸರವಾದಿ ಸುಂದರ್ ಲಾಲ್ ಬಹುಗುಣ್ ಅವರು ತನಗೆ ಜ್ವರ ಬಂದಿರುವುದಾಗಿ ಹೇಳಿದ ನಂತರ ಕುಟುಂಬದ ಸದಸ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಪರೀಕ್ಷೆಯ ನಂತರ ಕೋವಿಡ್ 19 ಪಾಸಿಟಿವ್ ವರದಿ ಬಂದಿರುವುದಾಗಿ ವರದಿ ಹೇಳಿದೆ.

ಆಸ್ಪತ್ರೆಯಲ್ಲಿ ಬಹುಗುಣ್ ಅವರಿಗೆ ಚಿಕಿತ್ಸೆ ನೀಡಿದ್ದು, ಅದು ಫಲಕಾರಿಯಾಗದೆ ವಿಧಿವಶರಾಗಿರುವುದಾಗಿ ವರದಿ ವಿವರಿಸಿದೆ.

  

ಅಪ್ಪಿಕೋಚಳುವಳಿ 1973 ರಲ್ಲಿ ಅಹಿಂಸಾತ್ಮಕ ಆಂದೋಲನವಾಗಿದ್ದು ಅದು ಮರಗಳ ರಕ್ಷಣೆ ಮತ್ತು ಸಂರಕ್ಷಣೆಯನ್ನು ಗುರಿಯಾಗಿರಿಸಿಕೊಂಡಿತ್ತು. ಕಾಡುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಮಹಿಳೆಯರ ಸಾಮೂಹಿಕ ಸಜ್ಜುಗೊಳಿಸುವಿಕೆಯನ್ನು ಇದು ನೆನಪಿಸುತ್ತದೆ.

ಮರಗಳನ್ನು ಕಡಿಯುವುದು ಮತ್ತು ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವುದರ ವಿರುದ್ಧದ ದಂಗೆ 1973 ರಲ್ಲಿ ಉತ್ತರ ಪ್ರದೇಶದ ಚಮೋಲಿ ಜಿಲ್ಲೆಯಲ್ಲಿ (ಈಗ ಉತ್ತರಾಖಂಡ) ಹುಟ್ಟಿಕೊಂಡಿತು. ಗ್ರಾಮಸ್ಥರು ಮರಗಳನ್ನು ತಬ್ಬಿಕೊಂಡು ಕಡಿಯಲು ಆಗದಂತೆ ತಡೆಯಲು ಸುತ್ತುವರೆದಿದ್ದರಿಂದ ‘ಅಪ್ಪಿಕೊ ಚಳುವಳಿಯ ಹೆಸರು ಬಂದಿದೆ.

Leave A Reply

Your email address will not be published.