ಯೂಟ್ಯೂಬ್ ನೋಡಿ ಗರ್ಭಪಾತದ ಸಾಹಸಕ್ಕೆ ಕೈ ಹಾಕಿದ ಬಾಲಕಿ !! | ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರಿದ ಅಪ್ರಾಪ್ತೆ – ಪ್ರಿಯಕರ ಅರೆಸ್ಟ್
ಇತ್ತೀಚಿನ ಮಕ್ಕಳು ಏನೇ ಕೆಲಸ ಮಾಡುವುದಿದ್ದರೂ ಒಮ್ಮೆ ಯೂಟ್ಯೂಬ್ ಅನ್ನು ರೆಫರ್ ಮಾಡುತ್ತಾರೆ. ಅದು ಉತ್ತಮ ಕಾರ್ಯಕ್ಕಾದರೆ ಒಳ್ಳೆಯದು, ಆದರೆ ಕೆಟ್ಟ ಸಾಹಸಕ್ಕೆ ಇದು ಬಳಕೆಯಾಗಬಾರದು. ಆದರೆ ಇಲ್ಲೊಬ್ಬಳು ಬಾಲಕಿ ಯೂಟ್ಯೂಬ್ ನೋಡಿ ಗರ್ಭಪಾತಕ್ಕೆ ಮುಂದಾಗಿ ಆಸ್ಪತ್ರೆ ಸೇರಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ನಾಗ್ಪುರದ ನಾರ್ಖೇಡ್ನ 17 ವರ್ಷದ ಬಾಲಕಿ, ನೆರೆಮನೆಯ 27 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದಳು. ಕಳೆದ ವರ್ಷ ಯುವಕನಿಗೆ ನಾಗ್ಪುರದ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತ್ತು. ಹಾಗಾಗಿ, ಆತ ನಾಗ್ಪುರದ ಐಎಂಡಿಸಿ ಪ್ರದೇಶದಲ್ಲಿ ಬಾಡಿಗೆ …