ದಿವ್ಯ ಶ್ರೀಧರ್ ಆಕೆಯ ಸ್ನೇಹಿತನ ಜೊತೆ ಸೇರಿ ಗರ್ಭಪಾತ ಮಾಡಿದ್ದಾಳೆ | ಸ್ನೇಹಿತ ಹಾಗೂ ವೈದ್ಯರ ಮೇಲೆ ಕ್ರಮ ಕೈಗೊಳ್ಳಿ – ಗಂಡ ಅರ್ನವ್ ದೂರು ದಾಖಲು

ಕಿರುತೆರೆ ನಟಿಯೋರ್ವರ ದಾಂಪತ್ಯದಲ್ಲಿ ಬಿರುಕು ಬಿಟ್ಟದ್ದು ಹಾಗೂ ಈ ಬಗ್ಗೆ ಲವ್ ಜಿಹಾದ್ ಆರೋಪ ಬಂದಿರುವ ಕುರಿತು ನಿನ್ನೆಯಷ್ಟೇ ವರದಿಯಾಗಿತ್ತು. ಈಗ ಈ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿಗಳು ಹೊರಬರುತ್ತಿವೆ. ನಿನ್ನೆಯಷ್ಟೇ ನನ್ನ ಪತಿ ಹಲ್ಲೆ ಮಾಡಿದ್ದಾರೆ ಎಂದು ಹೇಳಿರುವ ನಟಿ, ಈಗ ಇದರ ಮುಂದುವರಿದ ಬೆಳವಣಿಗೆಯಲ್ಲಿ ಆಕೆಯ ಗಂಡ ಕೂಡಾ ಕೆಲವೊಂದು ವಿಚಾರ ಹೇಳಿದ್ದಾರೆ.

ಹೌದು, ಧಾರಾವಾಹಿ ನಟ ಅರ್ನವ್ ಮತ್ತು ಕರ್ನಾಟಕ ಮೂಲದ ಕಿರುತೆರೆ ನಟಿ ದಿವ್ಯಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, “ಪತ್ನಿ ದಿವ್ಯಾ ಗರ್ಭಪಾತ “ಮಾಡಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಪತಿ ಅರ್ನವ್ ದೂರು ದಾಖಲಿಸಿದ್ದಾರೆ.

6 ವರ್ಷಗಳಿಂದ ಇವರಿಬ್ಬರು ಸಂಬಂಧದಲ್ಲಿದ್ದರು. ಕಳೆದ ಜೂನ್‌ನಲ್ಲಿ ಮದುವೆಯಾಗಿದ್ದಾರೆ. ಚೆನ್ನೈ ಉತ್ತರ ಜಿಲ್ಲಾ ರಿಜಿಸ್ಟ್ರಾರ್ ಕಚೇರಿಯಲ್ಲಿ ಇವರಿಬ್ಬರು ಮದುವೆಯಾಗಿದ್ದಾರೆ. ನಂತರ ದಿವ್ಯಾ ಕೂಡ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ದಿವ್ಯಾ ಗರ್ಭಿಣಿಯಾಗುವವರೆಗೂ ಅವರು ಉತ್ತಮ ದಾಂಪತ್ಯ ಜೀವನ ನಡೆಸುತ್ತಿದ್ದರು.

ಆದರೆ ಈಗ ದಿವ್ಯಾ ತನ್ನ ಪತಿ ಅರ್ನವ್ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ವಿಡಿಯೋ ಬಿಡುಗಡೆ ಮಾಡಿದ್ದು, ಇದೊಂದು ಲವ್ ಜಿಹಾದ್ ಹುನ್ನಾರವೇ ಎಂಬ ಮಾತು ಕೇಳಿ ಬಂದಿತ್ತು. ಆದರೆ ಪತಿ ಅರ್ನವ್ ಪ್ರತಿಕ್ರಿಯೆ ನೀಡಿ, ನನ್ನ ಒಪ್ಪಿಗೆಯಿಲ್ಲದೇ ತಮ್ಮ ಮಗುವಿನ ಗರ್ಭಪಾತ ಮಾಡಲು ಯತ್ನಿಸಿದ್ದಾರೆ. ಈಗಾಗಲೇ ಗರ್ಭಪಾತ ಆಗಿದೆ ಎಂದು ಆರೋಪ ಮಾಡಿದ್ದಾರೆ.

ದಿವ್ಯಾರ ಆರೋಪವನ್ನು ಒಪ್ಪದ ಅರ್ನವ್ ಪೊಲೀಸ್ ಕಮಿಷನರೇಟ್‌ನಲ್ಲಿ ದೂರು ನೀಡಿದ್ದಾರೆ. “ನನ್ನ ಪತ್ನಿ ಸ್ನೇಹಿತ ಈಶ್ವರ್ ಎಂಬಾತನ ಜೊತೆ ಸೇರಿಕೊಂಡು ಗರ್ಭಪಾತ ಮಾಡಿಸಿದ್ದಾರೆ. ಹಾಗಾಗಿ ದಿವ್ಯಾ ಮತ್ತು ಆಕೆಯ ಸ್ನೇಹಿತ ಈಶ್ವರ್ ಮತ್ತು ಅವರಿಗೆ ಸಹಾಯ ಮಾಡಿದ ವೈದ್ಯರ ಮೇಲೆ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ಅರ್ನವ್​​ ಉಲ್ಲೇಖಿಸಿದ್ದಾರೆ.

ದೂರು ಕೊಟ್ಟ ನಂತರ ಸುದ್ದಿಗಾರರನ್ನು ಭೇಟಿ ಮಾಡಿದ ನಟ ಅರ್ನವ್, ” ನನ್ನ ಹೆಂಡತಿ ದಿವ್ಯಾಳ ಹಿಂದಿನ ವೈವಾಹಿಕ ಜೀವನದ ಬಗ್ಗೆ ನನಗೆ ನಮ್ಮ ಮದುವೆಯ ದಿನದಂದು ತಿಳಿಯಿತು. ಅದನ್ನು ಕೇಳಿ ನನಗೆ ಆಘಾತವಾಯಿತು. ಆದರೂ ನಾನು ನನ್ನ ಪ್ರೀತಿ ಉಳಿಸಿಕೊಳ್ಳಲು ಅವರನ್ನು ಒಪ್ಪಿಕೊಂಡೆ. ನಾನು ಅವರ ಮೇಲೆ ಹಲ್ಲೆ ಮಾಡಿಲ್ಲ. ನನ್ನ ಬಳಿ ಅದಕ್ಕೆ ಬೇಕಾದ ಪುರಾವೆಗಳಿವೆ. ಪೊಲೀಸರಿಗೆ ಬೇಕಾದಾಗ ನಾನು ಪುರಾವೆ ನೀಡಲು ಸಿದ್ಧನಿದ್ದೇನೆ. ನನ್ನ ಹೊಡೆತದಿಂದ ಎಂದು ಆರೋಪಿಸಿ ಅವರು ಗರ್ಭಪಾತ ಮಾಡಿದ್ದಾರೋ ಅಥವಾ ಅವಳ ಸ್ನೇಹಿತ ಈಶ್ವರ್ ನಮ್ಮ ಮಗುವಿನ ಗರ್ಭಪಾತ ಮಾಡಿಸಿದ್ದಾನೋ ಎಂದು ನನಗೆ ಇನ್ನೂ ಅನುಮಾನವಿದೆ. ಈಶ್ವರ್ ಒಳ್ಳೆಯವರಂತೆ ನಟಿಸಿ ನನಗೆ ಮೋಸ ಮಾಡಿದ್ದಾನೆ. ನನಗೆ ಹಲವಾರು ಬಾರಿ ಬೆದರಿಕೆ ಹಾಕಿದ್ದಾನೆ. ನಾನು ಅವಳಿಂದ ಬೇರ್ಪಡುವ ಮಾತನ್ನು ಹೇಳಲಿಲ್ಲ, ನಾನು ಯಾವಾಗಲೂ ನನ್ನ ಹೆಂಡತಿಯೊಂದಿಗೆ ಇರಲು ಬಯಸುತ್ತೇನೆ” ಎಂದು ತಿಳಿಸಿದ್ದಾರೆ.

ಆದರೆ ಇತ್ತ ಕಡೆ ಪತಿ ಅಮ್ಜದ್​ ಖಾನ್ ಮೇಲೆ ನಟಿ ದಿವ್ಯಾ ಶ್ರೀಧರ್‌ ಮತ್ತೊಂದು ಆರೋಪ ಹೊರಸಿದ್ದಾಳೆ.
ನನ್ನ ಪತಿ ಬೇರೆಯೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಮುಸ್ಲಿಂ ಯುವತಿ ಜೊತೆ ಸಂಬಂಧ ಇಟ್ಟುಕೊಂಡಿದ್ದ ಎಂದು ಆರೋಪ ಹೊರಸಿದ್ದಾಳೆ.

Leave A Reply