ಗರ್ಭಿಣಿಯಾದರೆ ಪತ್ನಿಯ ಸೌಂದರ್ಯ ಹಾಳಾಗುತ್ತೆ ಎಂದು 4 ಬಾರಿ ಗರ್ಭಪಾತ ಮಾಡಿಸಿದ ಪತಿ ಮಹಾಶಯ!

ತಾಯ್ತನ ಅನ್ನೋದು ಒಂದು ಸುಂದರ ಅನುಭವ. ಈ ಅನುಭವವನ್ನೇ ಕಸಿದುಕೊಂಡಿದ್ದಾನೆ ಇಲ್ಲೊಬ್ಬ ಪತಿ. ಎಲ್ಲಿ ತನ್ನ ಪತ್ನಿ ಗರ್ಭಿಣಿಯಾದರೆ ಸೌಂದರ್ಯ ಹಾಳಾಗುತ್ತೆ ಎಂದು ಪತ್ನಿಯನ್ನು ತಾಯಿ ಆಗಲು ಬಿಡದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ. ತಾಯಿ ಆಗಲು ಬಿಡದ ಪತಿಯ ವಿರುದ್ಧ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ತನ್ನ ಪತಿ ನನಗೆ ತಾಯಿಯಾಗಲು ಬಿಡುತ್ತಿಲ್ಲ. ನೀನು ತಾಯಿ ಆದರೆ ನಿನ್ನ ಸೌಂದರ್ಯ ಹಾಳಾಗುತ್ತೆ. ಆಗ ನಾನು ನಿನ್ನ‌ಜೊತೆ ಹೇಗೆ ಬದುಕಲಿ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಇದರ ಜೊತೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನೆ ಎಂದು ಕೂಡಾ ಆರೋಪಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

5 ವರ್ಷದಲ್ಲಿ ‌ನಾಲ್ಕು ಬಾರಿ ಗರ್ಭಿಣಿ ಆಗಿದ್ದೇನೆ. ಆದರೆ ನನ್ನ ಪತಿ ಗರ್ಭಪಾತ ಮಾಡಿಸಿದ್ದಾನೆ. ಕುಟುಂಬಸ್ಥರ ಒಪ್ಪಿಗೆ ಪಡೆದು ನಾವಿಬ್ಬರು ಅಂತರ್ಜಾತಿ ವಿವಾಹವಾಗಿದ್ದೆವು. ಈ ವೇಳೆ ನನ್ನ ಪತಿ ಮನೆ ಅಳಿಯನಾಗಿರುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ನನ್ನ ಮನೆಯವರು ಕೂಡಾ ಒಪ್ಪಿದ್ದಾರೆ. ಇದಾದ ನಂತರ ನಾನು ನನ್ನ ಪತಿಯ ಜೊತೆ ಕವಿನಗರದ ಕಾಲೋನಿಯಲ್ಲಿ ವಾಸಿಸುತ್ತಿದ್ದೇವೆ. ಪತಿ ನನ್ನ ತಂದೆಯ ಬಳಿ ಬಿಲ್ಡರ್ ಕೆಲಸಕ್ಕಾಗಿ ಹಣ ಕೇಳಿದ್ದನು. ಆದರೆ ನನ್ನ ತಂದೆ ಹಣ ಕೊಡಲು ಒಪ್ಪಲಿಲ್ಲ. ಆವಾಗ ನನ್ನ ಪತಿ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ಎಸ್ ಎಸ್ ಪಿ ಕಚೇರಿಯಲ್ಲಿ ದೂರು ನೀಡಿದ್ದು, ಇದೀಗ ಈ ಪ್ರಕರಣವನ್ನು ಕವಿನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.

error: Content is protected !!
Scroll to Top
%d bloggers like this: