ಉದಯೋನ್ಮುಖ ನಟನಿಂದ ಜೂನಿಯರ್ ಕಲಾವಿದೆಯ ಜೊತೆ ಪ್ರೀತಿ ಪ್ರೇಮದ ನಾಟಕ | ನಟಿ ಗರ್ಭಿಣಿ ಎಂದು ತಿಳಿದ ಕೂಡಲೇ ಪರಾರಿ!!!

ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುವ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಹೆಣ್ಣನ್ನು ಕಾಮದ ವಸ್ತುವಾಗಿ ಕಾಣುವ ಮಂದಿಯೇ ಹೆಚ್ಚು ಎಂದರೂ ತಪ್ಪಾಗಲಾರದು. ಹಾಗೆಂದು ಇಡೀ ಪುರುಷ ಸಮಾಜವೆ ಹೀಗೆ ಪರಿಗಣಿಸುತ್ತದೆ ಎಂದು ಒಂದೇ ತಕ್ಕಡಿಯಲ್ಲಿ ತೂಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ, ಹೆಣ್ಣನ್ನು ತಾಯಿಯ ಸ್ಥಾನದಲ್ಲಿ ಗೌರವಿಸುವ ಮನೋಧರ್ಮದವರು ಕೂಡ ಇದ್ದಾರೆ.

ನಟನಿಂದ ಕಲಾವಿದೆಯೊಬ್ಬರು ವಂಚನೆಗೆ ಒಳಗಾದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಟಾಲಿವುಡ್ ಉದಯೋನ್ಮುಖ​ ನಟನಿಂದ ಜೂನಿಯರ್​ ಕಲಾವಿದೆಯೊಬ್ಬರು ಮೋಸ ಹೋಗಿರುವ ಘಟನೆ ನಡೆದಿದೆ.

ಪ್ರೀತಿ…ಪ್ರೀತಿ ಎಂದು ಮಹಿಳೆಯ ಬಾಳಲ್ಲಿ ಪ್ರೇಮದಾಟವಾಡಿ ನಟ ಕಲಾವಿದೆಯನ್ನು ಗರ್ಭಿಣಿಯನ್ನಾಗಿ ಮಾಡಿ ಪರಾರಿಯಾಗಿದ್ದಾನೆ. ಕೊತ್ತಗ ಮಾ ಕಾರ್ಯ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರದಲ್ಲಿ ನಟಿಸಿರುವ ನಟ ಪ್ರಿಯಾಂತ್​ ಮಹಿಳೆಗೆ ಮೋಸ ಮಾಡಿ ಪೋಲಿಸ್ ಅತಿಥಿಯಾಗಿರುವ ಪ್ರಕರಣ ವರದಿಯಾಗಿದೆ.

ವೆಂಕಟಗಿರಿಯಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ವಾಸವಿದ್ದು, ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿ 25ರ ಹರೆಯದ ಜುಬಿಲಿ ಹಿಲ್ಸ್ ರಸ್ತೆ ಯಲ್ಲಿ ವಾಸವಾಗಿದ್ದ ಪ್ರಿಯಾಂತ್ ರಾವ್ ಎಂಬುವರ ಜೊತೆ ಪರಿಚಯವಾಗಿದ್ದು, ಇವರ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿದೆ.

ಪ್ರಿಯಾಂತ್​ ರಾವ್​ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದಾನೆ. ಕಳೆದ ಜನವರಿಯಲ್ಲಿ ಆಕೆ ಗರ್ಭಿಣಿಯಾಗಿದ್ದಾರೆ. ಈ ವಿಷಯ ತಿಳಿದ ಬಳಿಕ ಜುಬಿಲಿ ಗರ್ಭಿಣಿಯಾಗಿರುವ ವಿಚಾರವನ್ನು ಪ್ರಿಯಾಂತ್​ ಗಮನಕ್ಕೆ ತಂದಿದ್ದು, ಗರ್ಭಪಾತದ ಮಾತ್ರೆಗಳನ್ನು ನೀಡಿ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾನೆ.

ಈ ಬಳಿಕ ಪ್ರಿಯಾಂತ್ ಗೆ ಈಗಾಗಲೇ ಮದುವೆಯಾಗಿ ಮಗಳು ಕೂಡ ಇದ್ದಾಳೆ ಎಂಬ ಸಂಗತಿ ಜುಬಿಲಿಗೆ ತಿಳಿದು ಬಂದಿದೆ ಇದರ ಬಗ್ಗೆ ಪ್ರಿಯಾಂತ್​ನನ್ನು ಪ್ರಶ್ನಿಸಿದಾಗ ಪತ್ನಿಗೆ ವಿಚ್ಛೇದನ ನೀಡುವುದಾಗಿ ಹೇಳಿ ಜ್ಯೂನಿಯರ್ ಕಲಾವಿದೆಗೆ ನಂಬಿಸಿದ್ದಾನೆ.

ಪ್ರೀತಿ ಕುರುಡು ಎಂಬ ಮಾತಿನಂತೆ ನಟನ ಮರುಳು ಮಾತನ್ನು ನಂಬಿ ಜೂನಿಯರ್ ಕಲಾವಿದೆ ಗರ್ಭಿಣಿಯಾಗಿದ್ದು ಇದಕ್ಕೆ ಕಾರಣನಾದ ಉದಯೋನ್ಮುಖ ನಟನನ್ನು ಜುಬ್ಲಿ ಹಿಲ್ಸ್ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಇತ್ತೀಚೆಗೆ ಪ್ರಿಯಾಂತ್​ ತಾಯಿಗೆ ಕಲಾವಿದೆ ಮದುವೆ ವಿಷಯದ ಕುರಿತು ತಿಳಿಸಲು ಮುಂದಾದಾಗ ಪ್ರಿಯಾಂತ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Leave A Reply

Your email address will not be published.