Day: April 10, 2022

ಮಲ್ಪೆ : ಕುಟುಂಬದೊಂದಿಗೆ ವಿಹಾರಕ್ಕೆಂದು ಬೀಚ್ ಗೆ ಬಂದಿದ್ದ ಮಹಿಳೆಯ ಬ್ಯಾಗ್ ಕಳವು!

ಮಲ್ಪೆ : ಬೀಚ್‌ಗೆ ವಿಹಾರಕ್ಕೆಂದು ಕುಟುಂಬದೊಂದಿಗೆ ಬಂದಿದ್ದ ಮಹಿಳೆಯೊಬ್ಬರ ಬ್ಯಾಗ್ ಕಳುವಾಗಿರುವ ಘಟನೆಯೊಂದು ಎ.9ರಂದು ಸಂಜೆ 5ಗಂಟೆಯ ಸುಮಾರಿಗೆ ನಡೆದಿದೆ. ಬೈಂದೂರು ಮುದೂರು ನಿವಾಸಿ ಗಾಡ್ವಿನ್ ಮಾಬೆನ್ ಎಂಬವರ ಬೆಲೆಬಾಳುವ ಸ್ವತ್ತುಗಳಿದ್ದ ಬ್ಯಾಗ್ ಕಳುವಾಗಿದೆ. ಬ್ಯಾಗ್‌ನ್ನು ಬೀಚ್‌ನಲ್ಲಿ ಇಟ್ಟು ಸಮುದ್ರದಲ್ಲಿ ಆಟ ಆಡಿ, ಡ್ರೆಸ್ಸಿಂಗ್ ರೂಮಿಗೆ ಹೋಗಿದ್ದುವಾಪಾಸ್ಸು ಬೀಚ್‌ಗೆ ಬಂದು ನೋಡಿದಾಗ ಬ್ಯಾಗ್ ಕಳವಾಗಿರುವುದು ಕಂಡು ಬಂತು. ಅದರಲ್ಲಿ ಮೂರು ಮೊಬೈಲ್, ಚಿನ್ನದ ಬ್ರಾಸ್ಲೆಟ್, ಚಿನ್ನದ ಚೈನ್, ಚಿನ್ನದ ಉಂಗುರ, ವೋಟರ್ ಐಡಿ, ಆಧಾರ್ ಕಾರ್ಡ್, ಎಟಿಎಮ್ …

ಮಲ್ಪೆ : ಕುಟುಂಬದೊಂದಿಗೆ ವಿಹಾರಕ್ಕೆಂದು ಬೀಚ್ ಗೆ ಬಂದಿದ್ದ ಮಹಿಳೆಯ ಬ್ಯಾಗ್ ಕಳವು! Read More »

ಉಳ್ಳಾಲ : ಟ್ಯಾಂಕರ್ ನಿಂದಾದ ಅವಘಡ! ವಿದ್ಯುತ್ ಟ್ರಾನ್ಸ್ ಫಾರ್ಮರ್, ತಂತಿಗಳಿಗೆ ಹಾನಿ!

ಉಳ್ಳಾಲ : ಟ್ಯಾಂಕರೊಂದು ವಿದ್ಯುತ್ ತಂತಿ ಹಾಗೂ ಕಂಬಗಳಿಗೆ ಹಾನಿಗೊಳಿಸಿದ ಘಟನೆಯೊಂದು ಕುತ್ತಾರಿನಲ್ಲಿ ನಡೆದಿದೆ. ವಿದ್ಯುತ್ ಟ್ರಾನ್ಸ್ ಫಾರ್ಮರ್, ಕಂಬಗಳು, ತಂತಿಗಳು ಹಾನಿಗೊಂಡಿದೆ. ಮೆಲ್ಕಾರ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದಾಗ ಡಿಕ್ಕಿಯಾಗಿ ಈ ಅವಘಡ ಉಂಟಾಗಿದೆ. ಸ್ಥಳೀಯ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.

ಮಂಗಳೂರು: ಜಿಲ್ಲಾ ಕಾಂಗ್ರೆಸ್ ಪಾಳಯದಲ್ಲಿ ಹೊಸ ಸಂಚಲನ !! | ರಾಜಕೀಯಕ್ಕೆ ಎಂಟ್ರಿ ಕೊಟ್ಟ ಜನಾರ್ದನ ಪೂಜಾರಿ ಪುತ್ರ

ದ.ಕ ಜಿಲ್ಲೆ ಕಂಡ ಜನಪ್ರಿಯ ರಾಜಕೀಯ ನಾಯಕರಲ್ಲಿ ಜನಾರ್ದನ ಪೂಜಾರಿ ಕೂಡಾ ಒಬ್ಬರು. ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್‌ ಮುಖಂಡ ಜನಾರ್ದನ ಪೂಜಾರಿ ರಾಜಕೀಯದಲ್ಲಿ ಇಂದಿಗೂ ತಮ್ಮ ಪ್ರಭಾವವನ್ನೂ ಉಳಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ, ಕೇಂದ್ರ ಸಚಿವರಾಗಿದ್ದರೂ ಕೂಡ ತಮ್ಮ ಮಕ್ಕಳನ್ನು ಎಂದಿಗೂ ರಾಜಕೀಯಕ್ಕೆ ಕರೆ ತಂದಿರಲಿಲ್ಲ. ಆದರೆ ಇದೀಗ ಜನಾರ್ದನ ಪೂಜಾರಿ ಅವರ ಪುತ್ರ ದೀಪಕ್‌ ಪೂಜಾರಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಎಐಸಿಸಿ ದೀಪಕ್‌ ಪೂಜಾರಿ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಆದೇಶ …

ಮಂಗಳೂರು: ಜಿಲ್ಲಾ ಕಾಂಗ್ರೆಸ್ ಪಾಳಯದಲ್ಲಿ ಹೊಸ ಸಂಚಲನ !! | ರಾಜಕೀಯಕ್ಕೆ ಎಂಟ್ರಿ ಕೊಟ್ಟ ಜನಾರ್ದನ ಪೂಜಾರಿ ಪುತ್ರ Read More »

ಮುಸ್ಲಿಂ ವ್ಯಾಪಾರಿ ಮೇಲೆ ದೌರ್ಜನ್ಯ ಪ್ರಕರಣ- ಶ್ರೀರಾಮಸೇನೆ ಕಾರ್ಯಕರ್ತ ಅರೆಸ್ಟ್!!!

ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದ್ದ ಹಿಂದೂಪರ ಸಂಘಟನೆ ಕಾರ್ಯಕರ್ತರು ಏಕಾಏಕಿ ಕೆಲ ಮುಸ್ಲಿಂ ಅಂಗಡಿಗಳ ಮೇಲೆ ದಾಳಿ ನಡೆಸಿ, ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ ಅಂಗಡಿ ತೆರವು ಮಾಡಿದ ಆರೋಪ ಕೇಳಿಬಂದಿತ್ತು. ಧಾರವಾಡದ ಪ್ರತಿಷ್ಠಿತ ನುಗ್ಗಿಕೇರಿ ದೇವಸ್ಥಾನದ ಆವರಣದಲ್ಲಿ ಈ ಘಟನೆ ನಡೆದಿತ್ತು. ಪ್ರಕರಣ ಸಂಬಂಧ ಇದೀಗ ಓರ್ವ ಶ್ರೀರಾಮಸೇನೆ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಹಾಲಿಂಗ ಐಗಳಿ ಎಂದು ಗುರುತಿಸಲಾಗಿ ವ್ಯಾಪಾರಿ ನಬಿಸಾಬ್ ನೀಡಿದ ದೂರಿನ ಮೇರೆಗೆ ಧಾರವಾಡ ಗ್ರಾಮೀಣ …

ಮುಸ್ಲಿಂ ವ್ಯಾಪಾರಿ ಮೇಲೆ ದೌರ್ಜನ್ಯ ಪ್ರಕರಣ- ಶ್ರೀರಾಮಸೇನೆ ಕಾರ್ಯಕರ್ತ ಅರೆಸ್ಟ್!!! Read More »

ಉಗ್ರರ ಬೆದರಿಕೆಯ ನಡುವೆಯೂ ಎರಡು ಸಾವಿರಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ವಾಪಸ್ !!

“ದಿ ಕಾಶ್ಮೀರ್ ಫೈಲ್ಸ್” ಸಿನಿಮಾದ ನಂತರ ಕಾಶ್ಮೀರಿ ಪಂಡಿತರ ನರಮೇಧದ ಕುರಿತ ನೈಜತೆ ಬಯಲಾಗಿದೆ. ಅದೆಷ್ಟೋ ಜನರಲ್ಲಿ ಕಾಶ್ಮೀರಿ ಪಂಡಿತರ ಪರಿಸ್ಥಿತಿಯ ಬಗ್ಗೆ ಮರುಕ ಉಂಟಾಗಿದೆ. ಇದೀಗ ಉಗ್ರರ ಬೆದರಿಕೆಯ ಹೊರತಾಗಿಯೂ ಕಾಶ್ಮೀರದಿಂದ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತರು ಸಂವಿಧಾನದ 370ನೇ ವಿಧಿ ರದ್ದತಿ ನಂತರ ಅಪಾರ ಪ್ರಮಾಣದಲ್ಲಿ ಕಣಿವೆ ಪ್ರದೇಶಕ್ಕೆ ಮರಳುತ್ತಿದ್ದಾರೆ. ನಾಲ್ವರು ಕಾಶ್ಮೀರಿ ಪಂಡಿತರ ಕೊಲೆ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು, ವಲಸೆ ಕಾರ್ಮಿಕರ ಮೇಲೆ ಉಗ್ರರ ಹಲ್ಲೆಯ ಹೊರತಾಗಿಯೂ ಸುಮಾರು 2,100 ಪಂಡಿತರು …

ಉಗ್ರರ ಬೆದರಿಕೆಯ ನಡುವೆಯೂ ಎರಡು ಸಾವಿರಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ವಾಪಸ್ !! Read More »

ಓದುಗರೇ ನಿಮಗೊಂದು ಚಾಲೆಂಜ್|ಈ ಚಿತ್ರದಲ್ಲಿರುವ ಮಾವಿನಕಾಯಿ ರಾಶಿಯಲ್ಲಿ ಅಡಗಿರುವ ಈ ಪುಟ್ಟ ಗಿಳಿನಾ ನೀವು ಪತ್ತೆ ಮಾಡಬಲ್ಲಿರಾ!?

ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ.ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡೊ ಚಾಲೆಂಜ್ ಇಲ್ಲಿದೆ ನೋಡಿ. ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆಯ ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿದ್ದು,ಇವು ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡುವುದಲ್ಲದೆ ಕುತೂಹಲ ಮೂಡಿಸುವುದರಲ್ಲಿ ಸಂಶಯವೇ ಇಲ್ಲ.ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ಮಾವಿನ ಹಣ್ಣಿನಲ್ಲಿ ಅಡಗಿರುವ ಗಿಳಿಯನ್ನು ಪತ್ತೆ ಹಚ್ಚೋ …

ಓದುಗರೇ ನಿಮಗೊಂದು ಚಾಲೆಂಜ್|ಈ ಚಿತ್ರದಲ್ಲಿರುವ ಮಾವಿನಕಾಯಿ ರಾಶಿಯಲ್ಲಿ ಅಡಗಿರುವ ಈ ಪುಟ್ಟ ಗಿಳಿನಾ ನೀವು ಪತ್ತೆ ಮಾಡಬಲ್ಲಿರಾ!? Read More »

ಗೋ ಕಳ್ಳರನ್ನು ಸಿನಿಮೀಯ ಶೈಲಿಯಲ್ಲಿ 22 ಕಿ.ಮೀ ಬೆನ್ನಟ್ಟಿ ಹಿಡಿದ ಪೊಲೀಸರು !!

ಗೋ ಕಳ್ಳಸಾಗಣೆ ಮಾಡುತ್ತಿದ್ದ ಐವರನ್ನು ಸಿನಿಮೀಯ ಶೈಲಿಯಲ್ಲಿ 22 ಕಿ.ಮೀ. ಬೆನ್ನಟ್ಟಿದ ಖಾಕಿಪಡೆ ಕೊನೆಗೂ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದ ಘಟನೆಯೊಂದು ಬೆಳಕಿಗೆ ಬಂದಿದೆ. ದೆಹಲಿ ಬಳಿಯ ಗುರುಗ್ರಾಮ್ ನಲ್ಲಿ ಜಾನುವಾರು ಕಳ್ಳರನ್ನು ಬಂಧಿಸಲಾಗಿದೆ. ಸೈಬರ್ ಸಿಟಿ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳಿಂದ ಕೆಲವು ದೇಶೀಯ ಬಂದೂಕುಗಳು ಹಾಗೂ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾಕಿ ಪಡೆ ದೆಹಲಿ ಗಡಿಯಿಂದ ಆರೋಪಿಗಳನ್ನು ಬೆನ್ನಟ್ಟಿದಾಗ ಗುರುಗ್ರಾಮಕ್ಕೆ ಪ್ರವೇಶಿಸುವ ವೇಳೆ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿತು. ಇದನ್ನು ಲೆಕ್ಕಿಸದೇ ವಾಹನವನ್ನು …

ಗೋ ಕಳ್ಳರನ್ನು ಸಿನಿಮೀಯ ಶೈಲಿಯಲ್ಲಿ 22 ಕಿ.ಮೀ ಬೆನ್ನಟ್ಟಿ ಹಿಡಿದ ಪೊಲೀಸರು !! Read More »

ಪ್ರಿಯತಮ ಪ್ರೀತಿ ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಪ್ರೇಯಸಿ ಹಾಗೂ ಆಕೆಯ ಸ್ನೇಹಿತರು!!|ಆಕೆಯ ಪ್ರೇಮ ವೈಫಲ್ಯಕ್ಕೆ ಗೆಳತಿಯರ ಈ ನಿರ್ಧಾರದ ಕಾರಣ ನಿಗೂಢ

ಪ್ರೀತಿ ಮಾಡಿದವ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕೇ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲದೆ, ಆಕೆಯ ಇತರ ಐದು ಸ್ನೇಹಿತರು ಕೂಡ ವಿಷ ಸೇವಿಸಿರುವ ಆಶ್ಚರ್ಯಕರ ಘಟನೆ ನಡೆದಿದೆ. ಈ ಘಟನೆ ಬಿಹಾರದ ಔರಂಗಾಬಾದ್‌ನಲ್ಲಿ ನಡೆದಿದ್ದು,ಐವರಲ್ಲಿ ಮೂವರು ಸಾವನ್ನಪ್ಪಿದ್ದು,ಮೂವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಎಲ್ಲರ ವಯಸ್ಸು ಸುಮಾರಿ 12ರಿಂದ 16 ಇರಬಹುದು ಎಂದು ಅಂದಾಜು ಮಾಡಲಾಗಿದ್ದು,ಪ್ರೀತಿ ಮಾಡಿದವ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಘಟನೆಯ ವಿವರ:ಬಾಲಕಿ ತನ್ನ ಸೋದರ ಮಾವನನ್ನು ಪ್ರೀತಿಸುತ್ತಿದ್ದಳು ಎಂದು ಔರಂಗಾಬಾದ್ …

ಪ್ರಿಯತಮ ಪ್ರೀತಿ ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಪ್ರೇಯಸಿ ಹಾಗೂ ಆಕೆಯ ಸ್ನೇಹಿತರು!!|ಆಕೆಯ ಪ್ರೇಮ ವೈಫಲ್ಯಕ್ಕೆ ಗೆಳತಿಯರ ಈ ನಿರ್ಧಾರದ ಕಾರಣ ನಿಗೂಢ Read More »

ಪ್ರಮೋದ್ ಮುತಾಲಿಕ್ ಕೋಲಾರಕ್ಕೆ ದಿಢೀರ್ ಭೇಟಿ| ಆಯೋಜಕರಿಗೆ ಖಡಕ್ ಎಚ್ಚರಿಕೆ ಕೊಟ್ಟ ಎಸ್ ಪಿ!!!

ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಕೋಲಾರದಲ್ಲಿನ ಶೋಭಯಾತ್ರೆಗೆ ದಿಢೀರ್ ಪ್ರತ್ಯಕ್ಷವಾಗಿ, ಪೊಲೀಸರು ವಿರೋಧ ವ್ಯಕ್ತಪಡಿಸಿದ್ದಾರೆ. ಪೊಲೀಸರು ಮುತಾಲಿಕ್ ಅವರನ್ನು ಸುತ್ತುವರಿದಿದ್ದು, 20 ನಿಮಿಷದಲ್ಲಿ ಹೊರ ಕಳಿಸಬೇಕು ಎಂದು ಆಯೋಜಕರಿಗೆ ಎಸ್ ಪಿ ದೇವರಾಜ್ ಖಡಕ್ ಎಚ್ಚರಿಕೆ ಕೂಡಾ ನೀಡಿದ್ದಾರೆ. ಅನುಮತಿ ಇಲ್ಲದೇ ಮುತಾಲಿಕ್ ಕೋಲಾರಕ್ಕೆ ಬಂದಿದ್ದಾರೆ ಎಂದು ಪೊಲೀಸರು ಶೋಭಾಯಾತ್ರೆಗೆ ತಡೆಯೊಡ್ಡಿದ್ದಾರೆ. ಪರಿಣಾಮವಾಗಿ ಕೋಲಾರ ಎಂ.ಜಿ.ರಸ್ತೆಯಲ್ಲಿನ ಛತ್ರಪತಿ ಶಿವಾಜಿಗೆ ಹಾರ ಹಾಕಿ,ಕೇಸರಿ ಬಾವುಟ ಹಾರಿಸಿ ಪ್ರಮೋದ್ ಮುತಾಲಿಕ್ ಧ್ವಜಾರೋಹಣ ಮಾಡಿ ಅಲ್ಲಿಂದ ವಾಪಸ್ ಹೋದರು.

ಹೆತ್ತವರನ್ನೇ ನಡುರಸ್ತೆಯಲ್ಲಿ ಕೊಂದ ಮಗ!! ಘಟನೆಯ ಬಳಿಕ ಪೊಲೀಸರಿಗೆ ಕರೆ ಮಾಡಿ ಪರಾರಿ -ಆರೋಪಿಯ ಪತ್ತೆಗಾಗಿ ಮುಂದುವರಿದ ಶೋಧ

ಹೆತ್ತ ತಂದೆ ತಾಯಿಯನ್ನು ಪಾಪಿ ಮಗನೊಬ್ಬ ನಡುರಸ್ತೆಯಲ್ಲಿಯೇ ಕೊಲೆ ಮಾಡಿರುವ ಘಟನೆಯೊಂದು ಕೇರಳದ ತ್ರಿಶೂರ್ ನಲ್ಲಿ ನಡೆದಿದೆ. ಆರೋಪಿ ಅನೀಶ್ ( 30 ) ಎಂಬಾತನೇ ಈ ಕೃತ್ಯ ಮಾಡಿ, ತಲೆಮರೆಸಿಕೊಂಡಿದ್ದಾನೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ತ್ರಿಶೂರ್ ಇಂಚಕುಂಡ್ ಮೂಲದ ಕುಟ್ಟನ್ ( 60) ಮತ್ತು ಪತ್ನಿ ಚಂದ್ರಿಕಾ ( 55) ಕೊಲೆಯಾದ ವ್ಯಕ್ತಿಗಳು. ಕೌಟುಂಬಿಕ ಕಲಹ ಹಿನ್ನೆಲೆ ಹೆತ್ತವರನ್ನು ಮಗ ಅನೀಶ್ ಕೊಲೆಗೈದಿದ್ದಾನೆ. ಇಂದು ಮನೆಮುಂದೆಯ ಹುಲ್ಲು ಕಟಾವು …

ಹೆತ್ತವರನ್ನೇ ನಡುರಸ್ತೆಯಲ್ಲಿ ಕೊಂದ ಮಗ!! ಘಟನೆಯ ಬಳಿಕ ಪೊಲೀಸರಿಗೆ ಕರೆ ಮಾಡಿ ಪರಾರಿ -ಆರೋಪಿಯ ಪತ್ತೆಗಾಗಿ ಮುಂದುವರಿದ ಶೋಧ Read More »

error: Content is protected !!
Scroll to Top