ಮಲ್ಪೆ : ಕುಟುಂಬದೊಂದಿಗೆ ವಿಹಾರಕ್ಕೆಂದು ಬೀಚ್ ಗೆ ಬಂದಿದ್ದ ಮಹಿಳೆಯ ಬ್ಯಾಗ್ ಕಳವು!

0 6

ಮಲ್ಪೆ : ಬೀಚ್‌ಗೆ ವಿಹಾರಕ್ಕೆಂದು ಕುಟುಂಬದೊಂದಿಗೆ ಬಂದಿದ್ದ ಮಹಿಳೆಯೊಬ್ಬರ ಬ್ಯಾಗ್ ಕಳುವಾಗಿರುವ ಘಟನೆಯೊಂದು ಎ.9ರಂದು ಸಂಜೆ 5ಗಂಟೆಯ ಸುಮಾರಿಗೆ ನಡೆದಿದೆ.

ಬೈಂದೂರು ಮುದೂರು ನಿವಾಸಿ ಗಾಡ್ವಿನ್ ಮಾಬೆನ್ ಎಂಬವರ ಬೆಲೆಬಾಳುವ ಸ್ವತ್ತುಗಳಿದ್ದ ಬ್ಯಾಗ್ ಕಳುವಾಗಿದೆ.

ಬ್ಯಾಗ್‌ನ್ನು ಬೀಚ್‌ನಲ್ಲಿ ಇಟ್ಟು ಸಮುದ್ರದಲ್ಲಿ ಆಟ ಆಡಿ, ಡ್ರೆಸ್ಸಿಂಗ್ ರೂಮಿಗೆ ಹೋಗಿದ್ದು
ವಾಪಾಸ್ಸು ಬೀಚ್‌ಗೆ ಬಂದು ನೋಡಿದಾಗ ಬ್ಯಾಗ್ ಕಳವಾಗಿರುವುದು ಕಂಡು ಬಂತು. ಅದರಲ್ಲಿ ಮೂರು ಮೊಬೈಲ್, ಚಿನ್ನದ ಬ್ರಾಸ್ಲೆಟ್, ಚಿನ್ನದ ಚೈನ್, ಚಿನ್ನದ ಉಂಗುರ, ವೋಟರ್ ಐಡಿ, ಆಧಾರ್ ಕಾರ್ಡ್, ಎಟಿಎಮ್ ಹಾಗೂ ಪಾನ್‌ಕಾರ್ಡ್‌ಗಳಿದ್ದವು. ಇವುಗಳ ಒಟ್ಟು ಮೌಲ್ಯ 77,500ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply