ಮನುಷ್ಯನ ಮುಖದಲ್ಲಿ ‘ ಗುಳಿ ಕೆನ್ನೆ’ ಮೂಡಲು ಕಾರಣವೇನು? ವ್ಯಕ್ತಿಯ ಸೌಂದರ್ಯವನ್ನು ದುಪ್ಪಟ್ಟು ಮಾಡುವ ಈ ‘ ಗುಳಿ’ ಯ ರಹಸ್ಯ ತಿಳಿಯೋಣ ಬನ್ನಿ!!!

0 11

‘ಗುಳಿ ಕೆನ್ನೆ’ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಾತಾಡುವಾಗ, ನಗುವಾಗ ಮುಖದಲ್ಲಿ ಮೇಲೈಸುವ ಈ ‘ಗುಳಿ’ ನೋಡಲು ಬಲು ಅಂದ, ಚೆಂದ. ಇದರಿಂದ ವ್ಯಕ್ತಿಯ ಸೌಂದರ್ಯ ದುಪ್ಪಟ್ಟಾಗುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ‘ಗುಳಿ’ ಕೆಲವೇ ಮಂದಿಯಲ್ಲಿ ಮಾತ್ರ ಕಾಣುತ್ತದೆ. ಅಂದರೆ ಅಂದಾಜು ಶೇಕಡಾ 20 ಮಂದಿಗೆ ಗುಳಿಕೆನ್ನೆಗಳಿರುತ್ತವೆ. ಇದು ಹೇಗೆ ಉಂಟಾಗುತ್ತದೆ. ಇದರ ಬಗ್ಗೆ ತಿಳಿಯೋಣ ಬನ್ನಿ.

ಯಾಕೆಂದರೆ ತಲೆಯಲ್ಲಿರುವ ‘ಗ್ಲಿಮ್ಯಾಟಿಕಸ್’ ಎಂಬ ಒಂದು ಸ್ನಾಯುವಿನಿಂದಾಗಿ ಈ ತರಹ ಗುಳಿಗಳಾಗಲು ಕಾರಣ.

ಮುಖದ ವಿವಿಧ ಹಾವಭಾವಗಳನ್ನು ಬಿಂಬಿಸಲು ಗ್ಲಿಮ್ಯಾಟಿಕಸ್ ಎಂಬ ಸ್ನಾಯು ಸಹಕಾರಿಯಾಗುತ್ತದೆ. ಕೆಲವರಲ್ಲಿ ಕೆನ್ನೆಯೊಳಗೆ ಗ್ಲಿಮ್ಯಾಟಿಕಸ್ ಸ್ನಾಯುವನ್ನು ಹೊಂದಿಕೊಂಡಿರುವ ಒಂದು ನರ ಒಳಭಾಗದೊಳಕ್ಕೆ ಆಕರ್ಷಿಸಲ್ಪಡುತ್ತದೆ. ಹಾಗೂ ಮುಖದ ಮೇಲೆ ಗುಳಿ ಕಾಣುತ್ತದೆ. ಹೀಗಾಗಿ ನಕ್ಕಾಗ ಗುಳಿ ಮತ್ತಷ್ಟು ಸ್ಪಷ್ಟವಾಗಿ ಕಾಣಿಸುತ್ತದೆ. ಇವರು ಬಹುದೊಡ್ಡ ವ್ಯಕ್ತಿಗಳಾಗುತ್ತಾರೆ. ಜೊತೆಗೆ ಇತರರಿಗೆ ಸಹಾಯ ಮಾಡುತ್ತಾರೆ. ಇನ್ನು ಎಲ್ಲರನ್ನು ತನ್ನೆಡೆಗೆ ಸುಲಭವಾಗಿ ಸೆಳೆಯುತ್ತಾರೆ. ಪ್ರತಿಕ್ಷಣ ಖುಷಿಯಾಗಿರಲು ಪ್ರಯತ್ನಿಸುತ್ತಾರೆ.

ಇತ್ತೀಚೆಗೆ ಕೆಲವರು ತಮ್ಮ ಕೆನ್ನೆಗಳಲ್ಲಿ ಗುಳಿ ಮೂಡಿಸಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ಹಾಗೂ ಸ್ಟೇಜ್ ಶೋಗಳನ್ನು ನೀಡುವವರಿಗೆ ಹೆಚ್ಚಾಗಿ ಗುಳಿ ಕೆನ್ನೆ ಗಳಿರುತ್ತವೆ.

Leave A Reply