ಹೆತ್ತವರನ್ನೇ ನಡುರಸ್ತೆಯಲ್ಲಿ ಕೊಂದ ಮಗ!! ಘಟನೆಯ ಬಳಿಕ ಪೊಲೀಸರಿಗೆ ಕರೆ ಮಾಡಿ ಪರಾರಿ -ಆರೋಪಿಯ ಪತ್ತೆಗಾಗಿ ಮುಂದುವರಿದ ಶೋಧ

0 7

ಹೆತ್ತ ತಂದೆ ತಾಯಿಯನ್ನು ಪಾಪಿ ಮಗನೊಬ್ಬ ನಡುರಸ್ತೆಯಲ್ಲಿಯೇ ಕೊಲೆ ಮಾಡಿರುವ ಘಟನೆಯೊಂದು ಕೇರಳದ ತ್ರಿಶೂರ್ ನಲ್ಲಿ ನಡೆದಿದೆ.

ಆರೋಪಿ ಅನೀಶ್ ( 30 ) ಎಂಬಾತನೇ ಈ ಕೃತ್ಯ ಮಾಡಿ, ತಲೆಮರೆಸಿಕೊಂಡಿದ್ದಾನೆ.

ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ತ್ರಿಶೂರ್ ಇಂಚಕುಂಡ್ ಮೂಲದ ಕುಟ್ಟನ್ ( 60) ಮತ್ತು ಪತ್ನಿ ಚಂದ್ರಿಕಾ ( 55) ಕೊಲೆಯಾದ ವ್ಯಕ್ತಿಗಳು.

ಕೌಟುಂಬಿಕ ಕಲಹ ಹಿನ್ನೆಲೆ ಹೆತ್ತವರನ್ನು ಮಗ ಅನೀಶ್ ಕೊಲೆಗೈದಿದ್ದಾನೆ.

ಇಂದು ಮನೆಮುಂದೆಯ ಹುಲ್ಲು ಕಟಾವು ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಅನೀಶ್ ಚಾಕುವಿನಿಂದ ಕೊಲೆ ಮಾಡಿದ್ದಾನೆ. ನಂತರ ಸ್ವತಃ ಪೊಲೀಸರಿಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದ್ದಾನೆ. ಹಾಗೂ ಕೂಡಲೇ ಪರಾರಿಯಾಗಿದ್ದಾನೆ.

Leave A Reply