ಹರ್ಷಲ್ ಪಟೇಲ್ ಸಹೋದರಿ ವಿಯೋಗ ; ಕುಟುಂಬದಲ್ಲಿ ಜರುಗಿದ ದುರಂತ

Share the Article

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್ ಕುಟುಂಬದಲ್ಲಿ ದುರಂತವೊಂದು ಸಂಭವಿಸಿದ್ದು ಹರ್ಷಲ್ ಪಟೇಲ್ ಸಹೋದರಿ ನಿಧನ ಹೊಂದಿದ್ದಾರೆ. 

ಹರ್ಷಲ್ ಪಟೇಲ್ ಅವರ ಸೋದರಿ ಅರ್ಚಿತಾ ಪಟೇಲ್ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಮೂವರು ಮಕ್ಕಳ ಪೈಕಿ ಅರ್ಚಿತಾ ಪಟೇಲ್ ಕೊನೆಯವರಾಗಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದ್ದರು. ಈ ಪಂದ್ಯದ ಮುಕ್ತಾಯದ ಬಳಿಕ ಕುಟುಂಬದಲ್ಲಿ ನಡೆದ ದುರಂತದ ಬಗ್ಗೆ ಹರ್ಷಲ್ ಪಟೇಲ್‌ಗೆ ತಿಳಿದಿದ್ದು ತಕ್ಷಣವೇ ಅವರು ತಂಡದ ಬಯೋಬಬಲ್ ತೊರೆದಿದ್ದಾರೆ ಎಂದು ವರದಿಯಾಗಿದೆ.

Leave A Reply