ಓದುಗರೇ ನಿಮಗೊಂದು ಚಾಲೆಂಜ್|ಈ ಚಿತ್ರದಲ್ಲಿರುವ ಮಾವಿನಕಾಯಿ ರಾಶಿಯಲ್ಲಿ ಅಡಗಿರುವ ಈ ಪುಟ್ಟ ಗಿಳಿನಾ ನೀವು ಪತ್ತೆ ಮಾಡಬಲ್ಲಿರಾ!?

ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ.ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡೊ ಚಾಲೆಂಜ್ ಇಲ್ಲಿದೆ ನೋಡಿ.

ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆಯ ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿದ್ದು,ಇವು ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡುವುದಲ್ಲದೆ ಕುತೂಹಲ ಮೂಡಿಸುವುದರಲ್ಲಿ ಸಂಶಯವೇ ಇಲ್ಲ.ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ಮಾವಿನ ಹಣ್ಣಿನಲ್ಲಿ ಅಡಗಿರುವ ಗಿಳಿಯನ್ನು ಪತ್ತೆ ಹಚ್ಚೋ ಸವಾಲು.


Ad Widget

Ad Widget

Ad Widget

ರಾಶಿ ರಾಶಿ ಮಾವಿನಹಣ್ಣಿನ ಮಧ್ಯೆ ಗಿಳಿಯೊಂದು ಅಡಗಿ ಕುಳಿತಿದ್ದು,ಇದನ್ನು ಹುಡುಕುವ ಚಾಲೆಂಜ್ ನೆಟ್ಟಿಗರಾದ ನಿಮ್ಮ ಮುಂದಿದೆ.ವೈರಲ್ ಆಗುತ್ತಿರುವ ಈ ಆಪ್ಟಿಕಲ್ ಇಲ್ಯೂಷನ್ ಕೆಂಪು ಮತ್ತು ಹಸಿರು ಬಣ್ಣದ ಮಾವಿನ ಹಣ್ಣಿನ ದೊಡ್ಡ ರಾಶಿಯನ್ನು ತೋರಿಸುತ್ತದೆ. ಮಾವಿನ ಹಣ್ಣುಗಳ ಮಧ್ಯದಲ್ಲಿ ಗಿಳಿ ಒಂದೇ ಬಣ್ಣದಲ್ಲಿದ್ದು ಮರೆಮಾಚಿದೆ. ಎಲ್ಲಾ ಮಾವಿನ ಹಣ್ಣುಗಳ ಮೇಲೆ ಕಪ್ಪು ಚುಕ್ಕೆ ಇರುವುದರಿಂದ ಗಿಳಿಯ ಕಣ್ಣು ಕೂಡ ಮರೆಯಾಗಿದೆ. ಮಾವಿನಹಣ್ಣುಗಳ ನಡುವೆ ಅಡಗಿಕೊಳ್ಳಲು ಹಕ್ಕಿ ನಿಜವಾಗಿಯೂ ಪರಿಪೂರ್ಣ ಹೊಂದಾಣಿಕೆ ಮತ್ತು ಗಾತ್ರವನ್ನು ಹೊಂದಿದೆ.

ಅನೇಕ ನೆಟ್ಟಿಗರಿಗೆ ಹಣ್ಣಿನಲ್ಲಿ ಅಡಗಿರುವ ಹಕ್ಕಿಯನ್ನು ಹುಡುಕಲು ಸಾಧ್ಯವಾಗದೆ ನೀವು ಈ ಚಾಲೆಂಜ್ ನಲ್ಲಿ ಸೋತಿರಬಹುದು. ಕೆಲವೊಬ್ಬರು ಗೆದ್ದಿರಬಹುದು.ಗೆದ್ದವರಿಗೂ ಸೋತವರಿಗೂ ಪರದೆಯಲ್ಲಿರುವ ಗಿಳಿಯ ಪತ್ತೆ ನಾವು ಮಾಡಿದ್ದೇವೆ ನೋಡಿ. ಹೌದು. ಈ ಕೆಳಗಿನ ಚಿತ್ರವು ಒಗಟಿಗೆ ಉತ್ತರವನ್ನು ಬಹಿರಂಗಪಡಿಸಿದೆ.ಫೋಟೋದ ಮೇಲಿನ ಎಡ ಮೂಲೆಯಲ್ಲಿ ಗಿಳಿ ಕುಳಿತಿರುವುದನ್ನು ನೀವು ನೋಡಬಹುದಾಗಿದೆ.

Leave a Reply

error: Content is protected !!
Scroll to Top
%d bloggers like this: