Day: June 20, 2021

ದ.ಕ.ಜಿಲ್ಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಸದ್ಯಕ್ಕೆ ಇಲ್ಲ | ಜಿಲ್ಲಾಧಿಕಾರಿ ಅನುಮತಿ ನೀಡಿದ ಬಳಿಕ ಸಂಚಾರ

ಮಂಗಳೂರು : ರಾಜ್ಯದ ಇತರ ಕಡೆಗಳಲ್ಲಿ ಜೂ.21ರಿಂದ ಕೆಎಸ್ ಆರ್ ಟಿ ಸಿ ಬಸ್ ಓಡಲಿದೆ ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಓಡಿಸಲು ಜಿಲ್ಲಾಡಳಿತ ಅನುಮತಿ ನೀಡದೆ ಇರುವುದರಿಂದ ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಎಸ್ ಆರ್ ಟಿ ಸಿ ಬಸ್ ಸಂಚಾರ ಇರುವುದಿಲ್ಲ ಎಂದು ಮಂಗಳೂರು ಕೆ ಎಸ್ ಆರ್ ಟಿ ಸಿ ವಿಭಾಗದ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಿರುವ ಕಾರಣದಿಂದ ಬೆಳಿಗ್ಗೆ7 ರಿಂದ …

ದ.ಕ.ಜಿಲ್ಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಸದ್ಯಕ್ಕೆ ಇಲ್ಲ | ಜಿಲ್ಲಾಧಿಕಾರಿ ಅನುಮತಿ ನೀಡಿದ ಬಳಿಕ ಸಂಚಾರ Read More »

ತರಕಾರಿ ,ಸೊಪ್ಪನ್ನು ಕಾಲಿನಿಂದ ತುಳಿದು ದರ್ಪ ಪ್ರದರ್ಶಿಸಿದ ಪಿಎಸೈ ಅಮಾನತು

ಆಹಾರವಾಗಿ ಬಳಸುವ ತರಕಾರಿ, ಸೊಪ್ಪನ್ನು ಕಾಲಿನಿಂದ ಒದ್ದು ದರ್ಪ ತೋರಿಸಿದ್ದ ರಾಯಚೂರು ಸದರ ಬಜಾರ್‌ ಠಾಣೆ ಪಿಎಸ್‌ಐ ಆಜಂ ಖಾನ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ರಾಯಚೂರು ಎಸ್.ಪಿ. ಪ್ರಕಾಶ್ ನಿಕ್ಕಂ ಅವರು ಪಿಎಸ್‌ಐ ಅಜಂ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ವೀಕೆಂಡ್ ಕರ್ಪ್ಯೂ ಸಂದರ್ಭದಲ್ಲಿ ರಾಯಚೂರಿನ ಚಂದ್ರಮೌಳೇಶ್ವರ ವೃತ್ತದಲ್ಲಿ ತರಕಾರಿ, ಸೊಪ್ಪನ್ನು ಮಾರಾಟ ಮಾಡುತ್ತಿದ್ದು, ಅಲ್ಲಿಗೆ ಬಂದ ಅಜಂ ಕಾಲಿನಿಂದ ತರಕಾರಿ, ಸೊಪ್ಪು ಒದ್ದು ಚೆಲ್ಲಾಪಿಲ್ಲಿ ಮಾಡಿದ್ದರು. ರಾಯಚೂರಿನ ಚಂದ್ರಮೌಳೇಶ್ವರ ವೃತ್ತದ ಬಳಿ ಏಕಾಏಕಿ ಬಂದು …

ತರಕಾರಿ ,ಸೊಪ್ಪನ್ನು ಕಾಲಿನಿಂದ ತುಳಿದು ದರ್ಪ ಪ್ರದರ್ಶಿಸಿದ ಪಿಎಸೈ ಅಮಾನತು Read More »

ಪರಸ್ಪರ ಕೈಗೆ ಕೊಳ ಹಾಕಿಕೊಂಡು 123 ದಿನ ಕಳೆದ ಜೋಡಿ | ಕೋಳ ಬಿಚ್ಚುವ ದಿನ ಮದುವೆಯಾಗುವ ಅವರ ಪ್ಲಾನ್ ಫ್ಲಾಪ್ ಆದದ್ದು ಯಾಕೆ ಗೊತ್ತಾ ?!

ಉಕ್ರೇನ್‌ನ ರಾಜಧಾನಿ ಕೀವ್ ನಲ್ಲಿ ಇಬ್ಬರು ಜೊತೆಗಾರರು ದಂಪತಿ ವಿಶಿಷ್ಟ ಕಾರಣಕ್ಕಾಗಿ ಗಮನ ಸೆಳೆದಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 123 ದಿನಗಳ ಕಾಲ ಪರಸ್ಪರ ಕೈಗೆ ಕೋಳ ಹಾಕಿಕೊಂಡು ಅವರು ಒಟ್ಟಿಗೆ ದಿನ ರಾತ್ರಿ ಕಳೆದಿದ್ದಾರೆ. ಇದೇ ಕಾರಣಕ್ಕಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಈಗ ಚರ್ಚೆಯಾಗ್ತಿದ್ದಾರೆ. 123 ದಿನಗಳ ಕಾಲ ಒಟ್ಟಿಗಿದ್ದ ಈ ಜೋಡಿ ವಿಶ್ವ ದಾಖಲೆ ಬರೆದಿದ್ದಾರೆ. ಆದರೆ ವಿಶ್ವದಾಖಲೆಯೇನೋ ಆಗಿ ಹೋಯಿತು. ಆದರೆ ಪರಸ್ಪರ ಮದುವೆಯಾಗಿ ಜೀವನ ಪೂರ್ತಿ ಜೊತೆಗಿರುವ ಅವರ …

ಪರಸ್ಪರ ಕೈಗೆ ಕೊಳ ಹಾಕಿಕೊಂಡು 123 ದಿನ ಕಳೆದ ಜೋಡಿ | ಕೋಳ ಬಿಚ್ಚುವ ದಿನ ಮದುವೆಯಾಗುವ ಅವರ ಪ್ಲಾನ್ ಫ್ಲಾಪ್ ಆದದ್ದು ಯಾಕೆ ಗೊತ್ತಾ ?! Read More »

ಹಾಸನದಲ್ಲಿ ಅಪಘಾತದಲ್ಲಿ ಬೆಳ್ತಂಗಡಿಯ ಇಬ್ಬರು ಮೃತ್ಯು | ಶ್ರಮಿಕ ನೆರವು ಮೂಲಕ ಮೃತದೇಹ ಹುಟ್ಟೂರಿಗೆ

ಹಾಸನ : ನಿನ್ನೆ ಲಾರಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಬೆಳ್ತಂಗಡಿ ಮೂಲದ ಇಬ್ಬರು ಸಹೋದರರು ಸ್ಥಳದಲ್ಲೇ ಸಾವನ್ನಪ್ಪಿ ,ಬಂಗಾಡಿಯ ಓರ್ವ ಗಂಭೀರ ಗಾಯಗೊಂಡ ಘಟನೆ ಹಾಸನ ಜಿಲ್ಲೆಯ ಕೆಂಚಟ್ಟಹಳ್ಳಿ ಎಂಬಲ್ಲಿ ನಡೆದಿತ್ತು. ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕುತ್ರಬೆಟ್ಟು ಮನೆಯ ದಿ.ಗಣಪ ಗೌಡರ ಮಕ್ಕಳಾದ ಜಯಪ್ರಕಾಶ್(25) , ಯೋಗಿಶ್(23) ಎಂದು ಮೃತಪಟ್ಟಿದ್ದರು. ಅಪಘಾತದಿಂದ ಬೆಳ್ತಂಗಡಿಯ ಇಬ್ಬರು ಮೃತಪಟ್ಟ ಮಾಹಿತಿ ತಿಳಿದ ಕೂಡಲೇ ಶಾಸಕ ಹರೀಶ್ ಪೂಂಜ ಅವರು ಹಾಸನದ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಸೂಕ್ತ ವ್ಯವಸ್ಥೆ …

ಹಾಸನದಲ್ಲಿ ಅಪಘಾತದಲ್ಲಿ ಬೆಳ್ತಂಗಡಿಯ ಇಬ್ಬರು ಮೃತ್ಯು | ಶ್ರಮಿಕ ನೆರವು ಮೂಲಕ ಮೃತದೇಹ ಹುಟ್ಟೂರಿಗೆ Read More »

ದ.ಕ. | ಲಾಕ್‌ಡೌನ್ ಸಡಿಲಿಕೆ | ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

ದ.ಕ.ಜಿಲ್ಲೆಯಲ್ಲಿ ಜೂ.21ರಿಂದ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದ್ದು, ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಜೂನ್ 28 ರವರೆಗೆ ಅಥವಾ ಜುಲೈ 5 ರವರೆಗೆ ಲಾಕ್‌ಡೌನ್ ಸಡಿಲಿಕೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ಆ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಡಿಸಿ ಸ್ಪಷ್ಪಪಡಿಸಿದ್ದಾರೆ. ಹೊಸ ಮಾರ್ಗಸೂಚಿ ವಿವರಗಳು ಹೊಸ ಮಾರ್ಗಸೂಚಿಯ ಪ್ರಕಾರ ಬೆಳಿಗ್ಗೆ 7ರಿಂದ ಮಧ್ಯಾಹ್ನ ಒಂದರವರೆಗೆ ಈ ಕೆಳಗಿನ ಸೇವೆಗಳು …

ದ.ಕ. | ಲಾಕ್‌ಡೌನ್ ಸಡಿಲಿಕೆ | ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತಾಧಿಗಳ ಪ್ರವೇಶಕ್ಕೆ ನಿರ್ಬಂಧ | ಸರಕಾರದ ಆದೇಶದ ಬಳಿಕವೇ ಅವಕಾಶ

ದ.ಕ ಜಿಲ್ಲೆಯಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗ ಹರಡುವಿಕೆಯು ತೀವ್ರವಾಗಿ ಹೆಚ್ಚಿದ್ದು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆದುದರಿಂದ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಮತ್ತು ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಶ್ರೀ ದೇವಳದಲ್ಲಿ ಅರ್ಚಕರು ಮತ್ತು ಅಗತ್ಯ ಸಿಬ್ಬಂದಿಗಳ ಮೂಲಕ ದೈನಂದಿನ ಪೂಜೆಗಳಿಗೆ ಮಾತ್ರ ಅವಕಾಶವಿದ್ದು, ಶ್ರೀ ದೇವಳಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ದೇವಳಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿಲ್ಲ. ಸರಕಾರ …

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತಾಧಿಗಳ ಪ್ರವೇಶಕ್ಕೆ ನಿರ್ಬಂಧ | ಸರಕಾರದ ಆದೇಶದ ಬಳಿಕವೇ ಅವಕಾಶ Read More »

ಜಿಲ್ಲಾಡಳಿತದ ನಿಯಮ ಮೀರಿ ಮದುವೆ | ಎ.ಸಿ.ದಾಳಿ,ವಾಹನಗಳ ಮುಟ್ಟುಗೋಲು

ಕೋವಿಡ್ ನಿಯಮ ಮೀರಿ ನಗರದ ಮಂಗಳಾದೇವಿ ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದ ಅದ್ಧೂರಿ ಮದುವೆ ಸಮಾರಂಭಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸದ್ಯ ನಿಯಮದ ಪ್ರಕಾರದ ಯಾವುದೇ ಹಾಲ್‌ನಲ್ಲಿ, ದೇವಸ್ಥಾನದಲ್ಲಿ ಮದುವೆ ನಡೆಸುವಂತಿಲ್ಲ. ಸರಕಾರದ ಮಾರ್ಗಸೂಚಿ ಗಾಳಿಗೆ ತೂರಿ 4 ಜೋಡಿಯ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ದೇವಾಲಯದ ಹೊರಗೆ ನಿಂತಿದ್ದ 40 ಕ್ಕೂ ಹೆಚ್ಚು ಕಾರುಗಳು, ವಾದ್ಯ ವಾಲಗದ ಸದ್ದು ಕೇಳಿ ಯಾರೋ ಜಿಲ್ಲಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ದೂರು ಬಂದ ಹಿನ್ನೆಲೆ ಸಹಾಯಕ ಆಯುಕ್ತ ಮದನ್ ಮೋಹನ್ ನೇತೃತ್ವದಲ್ಲಿ ಸ್ಥಳಕ್ಕೆ …

ಜಿಲ್ಲಾಡಳಿತದ ನಿಯಮ ಮೀರಿ ಮದುವೆ | ಎ.ಸಿ.ದಾಳಿ,ವಾಹನಗಳ ಮುಟ್ಟುಗೋಲು Read More »

ಕೆಮ್ಮಾರ | ಇಲಿಪಾಷಾಣ ತಿಂದು ಎರಡೂವರೇ ವರ್ಷದ ಹೆಣ್ಣು ಮಗು ಸಾವು

ನೆಲ್ಯಾಡಿ: ಇಲಿ ಪಾಷಾಣ ತಿಂದು ಎರಡೂವರೇ ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ಘಟನೆ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ನಡೆದಿದೆ. ಕೆಮ್ಮಾರ ನಿವಾಸಿ, ನಿವೃತ್ತ ಸೈನಿಕ ಸೈಜು ಎಂಬವರ ಪುತ್ರಿ, ಎರಡೂವರೇ ವರ್ಷದ ಶ್ರೇಯಾ ಮೃತಪಟ್ಟ ಮಗು. ಜೂ.19 ರಂದು ಬೆಳಿಗ್ಗೆ ಮಗುವಿನ ತಂದೆ, ತಾಯಿ ನಾಯಿ ಗೂಡಿನ ಮೇಲಿದ್ದ ಪಿವಿಎಸ್ ಪೈಪು ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಕ್ಲೀನ್ ಮಾಡಿದ್ದು ಇದರಲ್ಲಿ ಎರಡು-ಮೂರು ತಿಂಗಳ ಹಿಂದೆ ತಂದಿದ್ದ ಇಲಿ ಪಾಷಾಣದ ಟ್ಯೂಬ್ ಸಹ ಇತ್ತು. ಮನೆಯವರು ಕೆಲಸ ಮಾಡುತ್ತಿದ್ದಂತೆ …

ಕೆಮ್ಮಾರ | ಇಲಿಪಾಷಾಣ ತಿಂದು ಎರಡೂವರೇ ವರ್ಷದ ಹೆಣ್ಣು ಮಗು ಸಾವು Read More »

ರಾಜ್ಯದಲ್ಲಿ ಮುಂಗಾರು ಚುರುಕು | ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸೋಮವಾರದ ತನಕವೂ ಮಳೆ ಮುಂದುವರೆಯಲಿದೆ. ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ಯೆಲ್ಲೊ ಅಲರ್ಟ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯಲ್ಲಿ ಗಂಟೆಗೆ 50 ಕಿ. ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, 3.9 ಮೀಟರ್ ನಷ್ಟು …

ರಾಜ್ಯದಲ್ಲಿ ಮುಂಗಾರು ಚುರುಕು | ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ Read More »

ವಾಮಾಚಾರ ಪ್ರಯೋಗ ಮಾಡುತ್ತಿದ್ದಾಗ ಸ್ಥಳೀಯರಿಂದ ದಾಳಿ | ಬಾಲಕಿಯ ರಕ್ಷಣೆ

ಬೆಂಗಳೂರು: ದುಷ್ಟ ಶಕ್ತಿಯನ್ನು ಪಡೆಯಲು ಬಾಲಕಿಯನ್ನು ಬಳಸಿಕೊಂಡು ವಾಮಾಚಾರ ಮಾಡಿರುವ ಘಟನೆ, ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾಲಕಿಯ ರಕ್ಷಣೆ ಮಾಡಲಾಗಿದೆ. ಕೊರೊನಾ ಲಾಕ್‍ಡೌನ್ ನಡುವೆ ಮಂತ್ರವಾದಿಗಳ ಕುತಂತ್ರ ಬೆಳಕಿಗೆ ಬಂದಿದೆ. ಸ್ಥಳೀಯ ಕೆಲವು ಕುತಂತ್ರಿಗಳು ಬಾಲಕಿಗೆ ಪೂಜೆ ಮಾಡಿ ನರಬಲಿಗೆ ಸಿದ್ಧತೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಬಾಲಕಿಗೆ ಅರಿಶಿನ, ಕುಂಕುಮ, ನಿಂಬೆಹಣ್ಣು ಇನ್ನಿತರ ವಸ್ತುಗಳನ್ನು ಬಳಸಿ ಪೂಜೆ ಮಾಡುವಂತಹ ಲಕ್ಷಣಗಳು ಜಾಗದಲ್ಲಿ ಕಂಡು ಬಂದಿದ್ದು, …

ವಾಮಾಚಾರ ಪ್ರಯೋಗ ಮಾಡುತ್ತಿದ್ದಾಗ ಸ್ಥಳೀಯರಿಂದ ದಾಳಿ | ಬಾಲಕಿಯ ರಕ್ಷಣೆ Read More »

error: Content is protected !!
Scroll to Top