ಜಿಲ್ಲಾಡಳಿತದ ನಿಯಮ ಮೀರಿ ಮದುವೆ | ಎ.ಸಿ.ದಾಳಿ,ವಾಹನಗಳ ಮುಟ್ಟುಗೋಲು

ಕೋವಿಡ್ ನಿಯಮ ಮೀರಿ ನಗರದ ಮಂಗಳಾದೇವಿ ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದ ಅದ್ಧೂರಿ ಮದುವೆ ಸಮಾರಂಭಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸದ್ಯ ನಿಯಮದ ಪ್ರಕಾರದ ಯಾವುದೇ ಹಾಲ್‌ನಲ್ಲಿ, ದೇವಸ್ಥಾನದಲ್ಲಿ ಮದುವೆ ನಡೆಸುವಂತಿಲ್ಲ. ಸರಕಾರದ ಮಾರ್ಗಸೂಚಿ ಗಾಳಿಗೆ ತೂರಿ 4 ಜೋಡಿಯ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ದೇವಾಲಯದ ಹೊರಗೆ ನಿಂತಿದ್ದ 40 ಕ್ಕೂ ಹೆಚ್ಚು ಕಾರುಗಳು, ವಾದ್ಯ ವಾಲಗದ ಸದ್ದು ಕೇಳಿ ಯಾರೋ ಜಿಲ್ಲಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

ದೂರು ಬಂದ ಹಿನ್ನೆಲೆ ಸಹಾಯಕ ಆಯುಕ್ತ ಮದನ್ ಮೋಹನ್ ನೇತೃತ್ವದಲ್ಲಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.ಅನುಮತಿ ಇಲ್ಲದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಸ್ಥಳೀಯ ರಾಜಕೀಯ ನಾಯಕರೊಬ್ಬರ ಮಗಳ ಮದುವೆ ಸೇರಿದಂತೆ ಒಟ್ಟು ನಾಲ್ಕು ಮದುವೆ ಜೋಡಿಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

Leave A Reply

Your email address will not be published.