ದ.ಕ.ಜಿಲ್ಲೆಯಲ್ಲಿ ಜೂ.21ರಿಂದ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದ್ದು, ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಜೂನ್ 28 ರವರೆಗೆ ಅಥವಾ ಜುಲೈ 5 ರವರೆಗೆ ಲಾಕ್‌ಡೌನ್ ಸಡಿಲಿಕೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ಆ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಡಿಸಿ ಸ್ಪಷ್ಪಪಡಿಸಿದ್ದಾರೆ.
ಹೊಸ ಮಾರ್ಗಸೂಚಿ ವಿವರಗಳು
ಹೊಸ ಮಾರ್ಗಸೂಚಿಯ ಪ್ರಕಾರ ಬೆಳಿಗ್ಗೆ 7ರಿಂದ ಮಧ್ಯಾಹ್ನ ಒಂದರವರೆಗೆ ಈ ಕೆಳಗಿನ ಸೇವೆಗಳು ಲಭ್ಯವಿರುತ್ತವೆ.
ದಿನಸಿ ತರಕಾರಿ ಹಾಲು ಹಣ್ಣು ಲಭ್ಯ
ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಡೆಸಬಹುದು
ಮೀನು ಮಾಂಸ ಮತ್ತು ಡೈರಿ ಉತ್ಪನ್ನಗಳು ಲಭ್ಯ
ಪ್ರಾಣಿಗಳ ಮೇವು ದೊರೆಯುತ್ತದೆ
ಸ್ವಾತಂತ್ರ ಮದ್ಯದಂಗಡಿಗಳು ಮತ್ತು ಮದ್ಯದ ಮಳಿಗೆಗಳು ತೆರೆದಿರಲಿವೆ. ಆದ್ರೆ ಪಾರ್ಸೆಲ್ ಗೆ ಮಾತ್ರ ಅವಕಾಶ.
ಸಾರ್ವಜನಿಕ ಪಡಿತರ ವಿತರಣಾ ಕೇಂದ್ರಗಳು ತೆರೆದಿರಲಿವೆ.
ಸಿಮೆಂಟು ಕಬ್ಬಿಣ ಮುಂತಾದ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಬೇಕಾದ ವಸ್ತುಗಳ ಅಂಗಡಿಗಳು ಓಪನ್. ರಿಪೇರಿ ಮಾಡುವ ಅಂಗಡಿಗಳೂ ತೆರೆಯಬಹುದು.
ಕನ್ನಡಕದ ಅಂಗಡಿಗಳನ್ನು ತೆರೆಯಲು ಅವಕಾಶ
ಘನ ತ್ಯಾಜ್ಯ ಸಂಗ್ರಹಣೆ ಮತ್ತು ವೈದ್ಯಕೀಯ ಸಂಬಂಧಿತ ಶಿಬಿರಕ್ಕೆ ಅವಕಾಶ
ಈ ಸಮಯದಲ್ಲಿ ಮಾತ್ರ ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳು ಇಬ್ಬರು ಪ್ರಯಾಣಿಕರ ಸಹಿತ ಸಂಚರಿಸಬಹುದು. ಜಿಲ್ಲೆಯಲ್ಲಿ ಪಾರ್ಕ್ ಮತ್ತು ಸಾರ್ವಜನಿಕ ಉದ್ಯಾನ ತೆರೆಯಲು ಅವಕಾಶ ಇಲ್ಲ. ಖಾಸಗಿ ಹಾಗೂ ಕೆಎಸ್‍ಆರ್ ಟಿಸಿ ಬಸ್‍ಗಳು ಜಿಲ್ಲೆಯಿಂದ ಹೊರಗೆ ಹಾಗೂ ಒಳಗೆ ಓಡಾಟ ಮಾಡುವಂತಿಲ್ಲ. ಅಲ್ಲದೆ ಹೊರ ಜಿಲ್ಲೆಗಳಿಂದಲೂ ಕೆಎಸ್‍ಆರ್ ಟಿಸಿ ಬಸ್‍ಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.
ಮಧ್ಯಾಹ್ನ1:00 ಗಂಟೆಯ ಒಳಗೆ ಕಂಪ್ಲೀಟ್ ಪ್ಯಾಕಪ್ ಮಾಡುವುದು ಅನಿವಾರ್ಯ

