ಹಾಸನದಲ್ಲಿ ಅಪಘಾತದಲ್ಲಿ ಬೆಳ್ತಂಗಡಿಯ ಇಬ್ಬರು ಮೃತ್ಯು | ಶ್ರಮಿಕ ನೆರವು ಮೂಲಕ ಮೃತದೇಹ ಹುಟ್ಟೂರಿಗೆ

ಹಾಸನ : ನಿನ್ನೆ ಲಾರಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಬೆಳ್ತಂಗಡಿ ಮೂಲದ ಇಬ್ಬರು ಸಹೋದರರು ಸ್ಥಳದಲ್ಲೇ ಸಾವನ್ನಪ್ಪಿ ,ಬಂಗಾಡಿಯ ಓರ್ವ ಗಂಭೀರ ಗಾಯಗೊಂಡ ಘಟನೆ ಹಾಸನ ಜಿಲ್ಲೆಯ ಕೆಂಚಟ್ಟಹಳ್ಳಿ ಎಂಬಲ್ಲಿ ನಡೆದಿತ್ತು.

ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕುತ್ರಬೆಟ್ಟು ಮನೆಯ ದಿ.ಗಣಪ ಗೌಡರ ಮಕ್ಕಳಾದ ಜಯಪ್ರಕಾಶ್(25) , ಯೋಗಿಶ್(23) ಎಂದು ಮೃತಪಟ್ಟಿದ್ದರು.

ಅಪಘಾತದಿಂದ ಬೆಳ್ತಂಗಡಿಯ ಇಬ್ಬರು ಮೃತಪಟ್ಟ ಮಾಹಿತಿ ತಿಳಿದ ಕೂಡಲೇ ಶಾಸಕ ಹರೀಶ್ ಪೂಂಜ ಅವರು ಹಾಸನದ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಸೂಕ್ತ ವ್ಯವಸ್ಥೆ ಗೆ ಕೋರಿಕೊಂಡಿದ್ದರು.

ಧರ್ಮಸ್ಥಳ ಗ್ರಾ.ಪಂ.ಸದಸ್ಯ ಸುಧಾಕರ ಅವರು ಹಾಸನಕ್ಕೆ ತೆರಳಿ ಪೊಲೀಸ್ ಇಲಾಖೆಯ ಅಗತ್ಯ ಕೆಲಸಗಳನ್ನು ಪೂರ್ತಿಗೊಳಿಸಿ,ಶಾಸಕ ಹರೀಶ್ ಪೂಂಜ ಅವರು ಕಳುಹಿಸಿದ ಶ್ರಮಿಕ ಅಂಬ್ಯುಲೆನ್ಸ್ ಮೂಲಕ ಹುಟ್ಟೂರಿಗೆ ಮೃತದೇಹ ತರಲಾಯಿತು.

Leave A Reply

Your email address will not be published.