ಕೆಮ್ಮಾರ | ಇಲಿಪಾಷಾಣ ತಿಂದು ಎರಡೂವರೇ ವರ್ಷದ ಹೆಣ್ಣು ಮಗು ಸಾವು

ನೆಲ್ಯಾಡಿ: ಇಲಿ ಪಾಷಾಣ ತಿಂದು ಎರಡೂವರೇ ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ಘಟನೆ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ನಡೆದಿದೆ.

ಕೆಮ್ಮಾರ ನಿವಾಸಿ, ನಿವೃತ್ತ ಸೈನಿಕ ಸೈಜು ಎಂಬವರ ಪುತ್ರಿ, ಎರಡೂವರೇ ವರ್ಷದ ಶ್ರೇಯಾ ಮೃತಪಟ್ಟ ಮಗು.

ಜೂ.19 ರಂದು ಬೆಳಿಗ್ಗೆ ಮಗುವಿನ ತಂದೆ, ತಾಯಿ ನಾಯಿ ಗೂಡಿನ ಮೇಲಿದ್ದ ಪಿವಿಎಸ್ ಪೈಪು ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಕ್ಲೀನ್ ಮಾಡಿದ್ದು ಇದರಲ್ಲಿ ಎರಡು-ಮೂರು ತಿಂಗಳ ಹಿಂದೆ ತಂದಿದ್ದ ಇಲಿ ಪಾಷಾಣದ ಟ್ಯೂಬ್ ಸಹ ಇತ್ತು. ಮನೆಯವರು ಕೆಲಸ ಮಾಡುತ್ತಿದ್ದಂತೆ ಮಗು ಆಟವಾಡುತ್ತ ಬಂದು ಇಲಿ ಪಾಷಾಣ ತಿಂದಿದೆ ಎಂದು ಹೇಳಲಾಗಿದೆ.

ಮಧ್ಯಾಹ್ನದ ವೇಳೆ ಮಗುವಿಗೆ ವಾಂತಿ ಆರಂಭಗೊಂಡಿದ್ದು ತಕ್ಷಣ ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆತಂದು ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗು ತೀವ್ರ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಜೂ.20ರಂದು ಬೆಳಿಗ್ಗೆ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ತಪಾಸಣೆ ವೇಳೆ ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತ ಶ್ರೇಯಾ ತಂದೆ ಸೈಜು, ತಾಯಿ ದೀಪ್ತಿ,ಸಹೋದರ ಸಿಯೋನ್‌ರನ್ನು ಅಗಲಿದ್ದಾರೆ.

Leave A Reply

Your email address will not be published.