ತುಳುನಾಡಿನ ಜನಮನಸ್ಸು ಗೆದ್ದ ‘ದೇವೆರೆ ಕಿನ್ನಿ’!! ಮತ್ತೊಮ್ಮೆ ತಾಯಿಯ ನಿಷ್ಕಲ್ಮಶ ಮಡಿಲಿನಲ್ಲಿ ಜೋಗುಳ ಕೇಳುವಂತೆ ಮಾಡಿದ ಹಾಡಿನ ಹಿಂದಿದೆ ಮಮತೆಯ ಚಿತ್ರಣ!!
ಕೆಲ ದಿನಗಳಿಂದ ಅದೊಂದು ಹಾಡು ಜೋಗುಳದ ರೀತಿಯಲ್ಲಿ ಎಲ್ಲೆಡೆಯಿಂದಲೂ ಕೇಳುತ್ತಿದೆ. ವಾಟ್ಸಪ್ ಸ್ಟೇಟಸ್ ಗಳಲ್ಲಿ,ಶಾಲೆಗೆ ತೆರಳುವ ಮಕ್ಕಳ ಬಾಯಿಂದ ಹಿಡಿದು ಸಣ್ಣ ಪುಟ್ಟ ಕೆಲಸದಲ್ಲಿ ಮಗ್ನರಾಗಿರುವ ಕೆಲ ಯುವಕ-ಯುವತಿಯರ ಬಾಯಲ್ಲಿ, ಇತರ ಸುತ್ತಮುತ್ತಲ ಪ್ರದೇಶಗಳಲ್ಲಿ ಹಾಗೂ ಮಾತೆಯರ ಬಾಯಲ್ಲೂ ಅದೇ ಹಾಡು. ಅಷ್ಟರ ಮಟ್ಟಿಗೆ ಅದೊಂದು ಆಲ್ಬಮ್ ಸಾಂಗ್ ಎಲ್ಲರ ಮನಗೆದ್ದು, ಅತೀ ಹೆಚ್ಚು ವೀಕ್ಷಣೆ ಹೊಂದಿ ತನ್ನ ಇರುವಿಕೆಯನ್ನು ಗುರುತಿಸಿಕೊಂಡಿದೆ.ಇತ್ತೀಚಿನ ದಿನಗಳಲ್ಲಿ ಬರುವ ಹಲವಾರು ಆಲ್ಬಮ್ ಸಾಂಗ್ ಗಳಿಗಿಂತಲೂ ಈ ಹಾಡಿನಲ್ಲಿ ಅದೇನೋ ಮಮತೆ, ಪ್ರೀತಿ …