ಚಾರ್ಮಾಡಿ ಘಾಟ್ ನಲ್ಲಿ ಚಲಿಸುತ್ತಿದ್ದ ಬಸ್ಸಿನ ನಿರ್ವಾಹಕನಿಗೆ ಹೃದಯಾಘಾತ | ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನ

ಚಲಿಸುತ್ತಿದ್ದ ಬಸ್ಸಿನಲ್ಲಿದ್ದ ನಿರ್ವಾಹಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಚಾರ್ಮಾಡಿ ಘಾಟ್‌ನ ಮಲಯಮಾರುತ ಸಮೀಪ ಇಂದು ಬೆಳಗ್ಗೆ ನಡೆದಿದೆ.

ಮೃತ ನಿರ್ವಾಹಕರನ್ನು ವಿಜಯ್ (43) ಎಂದು ಗುರುತಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಚಿಕ್ಕಮಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ಬಸ್‌ನಲ್ಲಿದ್ದ ನಿರ್ವಾಹಕ ವಿಜಯ್ ಅವರಿಗೆ ಬೆಳಗ್ಗೆ 8.30ಕ್ಕೆ ಹೃದಯಾಘಾತ ಸಂಭವಿಸಿದೆ. ಈ ವೇಳೆ ಅವರನ್ನು ಬಣಕಲ್ ಸಮಾಜ ಸೇವಕ ಆರಿಫ್ ಅವರ ಆಂಬ್ಯುಲೆನ್ಸ್‌ನಲ್ಲಿ ಬಣಕಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಯಿತು.

ಆದರೆ ಮೂಡಿಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿರ್ವಾಹಕ ವಿಜಯ್ ಮೃತಪಟ್ಟಿದ್ದಾರೆ.

error: Content is protected !!
Scroll to Top
%d bloggers like this: