Day: November 17, 2021

ಕಡಬ : ಕೋಡಿಂಬಾಳದಲ್ಲಿ ಬಸ್-ಕಾರು ನಡುವೆ ಅಪಘಾತ

ಕಡಬ : ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ವಿಫ್ಟ್ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಘಟನೆ ಇಲ್ಲಿಗೆ ಸಮೀಪದ ಕೋಡಿಂಬಾಳ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಕಡಬದಿಂದ ಎಡಮಂಗಲ ಮಾರ್ಗವಾಗಿ ಪುತ್ತೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸ್ವಿಫ್ಟ್ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬ್ರೇಕ್ ಬದಲು ಎಕ್ಸ್‌ಲೆಟರ್ ತುಳಿದ ಚಾಲಕ | ಇಬ್ಬರು ಮಹಿಳೆಯರ ಮೇಲೆ ಹರಿದ ಕಾರು

ಚಾಲಕನೊಬ್ಬನ ಅಚಾತುರ್ಯದಿಂದ ಬ್ರೇಕ್ ಬದಲು ಎಕ್ಸ್‌ಲೆಟರ್ ತುಳಿದ ಪರಿಣಾಮ ಕಾರೊಂದು ಫುಟ್‌ಪಾತ್‌ಗೆ ನುಗ್ಗಿ ಇಬ್ಬರು ಮಹಿಳೆಯರ ಮೇಲೆ ಹರಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೈಸೂರಿನ ದೇವರಾಜ ಅರಸು ರಸ್ತೆಯ ಯಶಸ್ವಿನಿ ಸಿಲ್ಕ್ ಮಳಿಗೆ ಮುಂಭಾಗದ ಪಾರ್ಕಿಂಗ್‌ನಿಂದ ಹೊರಟಿದ್ದ ಕಾರೊಂದು ಚಾಲಕನ ಅಜಾಗರೂಕತೆಯಿಂದ ಏಕಾಏಕಿ ಫುಟ್ ಪಾತ್ ಮೇಲೆ ನುಗ್ಗಿ ಎದುರಿಗಿದ್ದ ಭಾಗ್ಯ ಮತ್ತು ಲಕ್ಷ್ಮೀ ಎಂಬವರಿಗೆ ಕಾರು ಗುದ್ದುತ್ತಿದ್ದಾಗ ಎಚ್ಚೆತ್ತಕೊಂಡ ಅವರು ದೂರು …

ಬ್ರೇಕ್ ಬದಲು ಎಕ್ಸ್‌ಲೆಟರ್ ತುಳಿದ ಚಾಲಕ | ಇಬ್ಬರು ಮಹಿಳೆಯರ ಮೇಲೆ ಹರಿದ ಕಾರು Read More »

ಬಹುಕೋಟಿ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ನಾಪತ್ತೆ

ಬೆಂಗಳೂರು : ಬಹುಕೋಟಿ ಬಿಟ್ ಕಾಯಿನ್ ಹಗರಣ ಸಂಬಂಧ ಪ್ರಮುಖ ಆರೋಪಿ ಎನ್ನಲಾದ ಶ್ರೀಕೃಷ್ಣಗೆ ಜೀವ ಬೆದರಿಕೆ ದೂರಿನ ಹಿನ್ನೆಲೆ ಪೊಲೀಸರು ಭದ್ರತೆ ನೀಡಲು ಮುಂದಾಗಿದ್ದರೂ ಆತ ಮಾತ್ರ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಆತನಿಗೆ ಪೊಲೀಸರು ಭದ್ರತೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದರು. ಈ ಕುರಿತಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆಯ ಮೇರೆಗೆ ಸಬ್‌ಇನ್‌ಸ್ಪೆಕ್ಟರ್‌ ಒಬ್ಬರನ್ನು ಶ್ರೀಕೃಷ್ಣ ಭದ್ರತೆಗೆ ನಿಯೋಜಿಸಲಾಗಿದೆ. ಭದ್ರತೆ ನೀಡಲೆಂದು ಶ್ರೀಕೃಷ್ಣ ಮನೆಯವರನ್ನು ಸಂಪರ್ಕಿಸಿದರೂ …

ಬಹುಕೋಟಿ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ನಾಪತ್ತೆ Read More »

ಡಿ.30ರೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು: ಡಿಸೆಂಬರ್ 30 ರೊಳಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. ಅಲ್ಲದೆ, ನವೆಂಬರ್ 26 ರೊಳಗೆ ಮೀಸಲಾತಿ ಪಟ್ಟಿ ಒದಗಿಸಲು ಹೈಕೋರ್ಟ್ ಆದೇಶಿಸಿದೆ. ನಗರ ಸ್ಥಳಿಯ ಸಂಸ್ಥೆಗಳ ಚುನಾವಣೆ ವಿಳಂಬ ಹಿನ್ನಲೆ ಇಂದು ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ನಡೆಸಿತು. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಹೈಕೋರ್ಟ್ ಗೆ ಹಾಜರಾಗಿದ್ದರು. ನ.26 ರೊಳಗೆ ಮೀಸಲಾತಿ ಅಧಿಸೂಚನೆ ಹೊರಡಿಸುತ್ತೇವೆ ಎಂದು …

ಡಿ.30ರೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಹೈಕೋರ್ಟ್ ಸೂಚನೆ Read More »

ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾಗಿ ಶಾಫಿ ಸ‌ಅದಿ | ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿರುವುದು ಸಂತಸ-ಶಶಿಕಲಾ ಜೊಲ್ಲೆ

ಕರ್ನಾಟಕ ರಾಜ್ಯ ಮಂಡಳಿ ಅಧ್ಯಕ್ಷರಾಗಿ ಇದೇ ಮೊದಲ ಬಾರಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಮಹಮದ್ ಶಾಫಿ ಸಆದಿ ಆಯ್ಕೆಯನ್ನು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಅ. ಜೊಲ್ಲೆ ಸ್ವಾಗತಿಸಿ ಅಭಿನಂದಿಸಿದ್ದಾರೆ. ಬುಧವಾರ ಕರ್ನಾಟಕ ವಕ್ಫ್ ಮಂಡಳಿಗೆ ಭೇಟಿ ನೀಡಿ ರಾಜ್ಯ ವಕ್ಫ್ ಮಂಡಳಿ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಮಹಮದ್ ಷಫಿ ಸಾ ಆದಿಯವರನ್ನು ಅಭಿನಂದಿಸಿ ಮಾತನಾಡಿದ ಅವರು, ಯಾವುದೇ ಸಮುದಾಯ ಮೊದಲು ಶೈಕ್ಷಣಿಕವಾಗಿ ಅಭಿವೃದ್ಧಿಯಾದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುವುದರಿಂದ ಆ ನಿಟ್ಟಿನಲ್ಲಿ ಸಮುದಾಯವು …

ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾಗಿ ಶಾಫಿ ಸ‌ಅದಿ | ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿರುವುದು ಸಂತಸ-ಶಶಿಕಲಾ ಜೊಲ್ಲೆ Read More »

ಹುಚ್ಚನ ಸಾವಿಗೆ ಕಣ್ಣೀರಾದ ಊರ ಜನತೆ | ವಿಐಪಿ ಯಂತೆ ಅಂತ್ಯಕ್ರಿಯೆ ನಡೆಸಿ ನೋವಿನ ವಿದಾಯ|ಈ ಹುಚ್ಚ ಬಸ್ಯಾ ಇಷ್ಟು ಅಭಿಮಾನಿ ಬಳಗ ಹೊಂದಲು ಕಾರಣವಾದ್ರೂ ಏನು!? ಅಷ್ಟಕ್ಕೂ ಯಾರೀತ??

ಅನೇಕ ಸಾಧನೆಯನ್ನು ಮಾಡಿರುವವರಿಗೆ, ಸಿನಿಮಾಗಳಲ್ಲಿ ನಟಿಸೋರಿಗೆ, ರಾಜಕಾರಣಿಗಳು ಸಾಮಾನ್ಯವಾಗಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ. ಇಂತವರಿಗೆ ಅದೇನೇ ತೊಂದರೆ ಅಥವಾ ಏನಾದರೂ ಸುದ್ದಿ ಪ್ರಚಾರವಾದ ಕೂಡಲೇ ಎಲ್ಲಾ ಜನರು ಸ್ಥಳಕ್ಕೆ ಆಗಮಿಸುತ್ತಾರೆ.ಆದರೆ ಇಲ್ಲೊಬ್ಬ ಸ್ಟಾರ್‌ ಅಲ್ಲ, ರಾಜಕಾರಣಿಯೂ ಅಲ್ಲ ನಮ್ಮ ನಿಮ್ಮಂತೆ ಸಾಮಾನ್ಯನು ಅಲ್ಲ, ಆದ್ರೂ ಕೂಡ ಈತನ ಅಂತ್ಯಕ್ರಿಯೆಗೆ ಸಾವಿರಾರು ಜನ ಸೇರಿದ್ದರು ಅಂದ್ರೆ ಆತನ ಬಗ್ಗೆ ನಮಗೆ ಕೂತುಹಲ ಮೂಡುವುದು ಸಹಜ ಅಲ್ವಾ?ಹೌದು. ಈತನ ಸ್ಟೋರಿ ಡಿಫರೆಂಟ್ ಆಗೇ ಇದ್ರೂ ಇಂಟರೆಸ್ಟಿಂಗ್ ಆಗೇ ಇದೆ. …

ಹುಚ್ಚನ ಸಾವಿಗೆ ಕಣ್ಣೀರಾದ ಊರ ಜನತೆ | ವಿಐಪಿ ಯಂತೆ ಅಂತ್ಯಕ್ರಿಯೆ ನಡೆಸಿ ನೋವಿನ ವಿದಾಯ|ಈ ಹುಚ್ಚ ಬಸ್ಯಾ ಇಷ್ಟು ಅಭಿಮಾನಿ ಬಳಗ ಹೊಂದಲು ಕಾರಣವಾದ್ರೂ ಏನು!? ಅಷ್ಟಕ್ಕೂ ಯಾರೀತ?? Read More »

“ಹಿಂದೂ ಎದ್ದರೆ ಕೇಸರಿ, ಹಿಂದೂ ಎದ್ದರೆ ವ್ಯಾಘ್ರ, ನಮ್ಮನ್ನು ಕೆಣಕಬೇಡಿ” ಎಂದು ಗುಡುಗಿದ ಗೋ ಮಧುಸೂದನ್ | ದೇಶವನ್ನು ಉಳಿಸಿಕೊಳ್ಳುವುದು ಹಿಂದೂಗಳಿಗೆ ಚೆನ್ನಾಗಿ ಗೊತ್ತಿದೆ ಎಂದು ಕಾಂಗ್ರೆಸ್ ಗೆ ತಿವಿದ ಬಿಜೆಪಿ ನಾಯಕ

ಹಿಂದೂಗಳ ವಿರುದ್ಧ ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ವಿರುದ್ಧ ಇದೀಗ ಬಿಜೆಪಿ ನಾಯಕರೊಬ್ಬರು ಸಿಡಿದೆದ್ದಿದ್ದಾರೆ.“ಹಿಂದು ಎದ್ದರೆ ಕೇಸರಿ, ಹಿಂದು ಎದ್ದರೆ ವ್ಯಾಘ್ರ” ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಿಜೆಪಿ ನಾಯಕ ಗೋ.ಮಧುಸೂದನ್ ಗುಡುಗಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತ ರಾಷ್ಟ್ರೀಯ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗಡಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಹಿಂದುಗಳು ತಾಳ್ಮೆಯಿಂದ ಇದ್ದಾರೆ, ಹಿಂದುಗಳು ಸಹನೆಯಿಂದ ಇದ್ದಾರೆ. ಹಾಗಂತ ಹಿಂದುಗಳು ಹೇಡಿಗಳ ಅನ್ನೋ ಮನೋಭಾವನೆಯಲ್ಲಿ ಇರಬೇಡಿ ಎಂದರು. ನೀವು ಟಿಪ್ಪು ವಂಶಸ್ಥರಿರಬಹುದು, …

“ಹಿಂದೂ ಎದ್ದರೆ ಕೇಸರಿ, ಹಿಂದೂ ಎದ್ದರೆ ವ್ಯಾಘ್ರ, ನಮ್ಮನ್ನು ಕೆಣಕಬೇಡಿ” ಎಂದು ಗುಡುಗಿದ ಗೋ ಮಧುಸೂದನ್ | ದೇಶವನ್ನು ಉಳಿಸಿಕೊಳ್ಳುವುದು ಹಿಂದೂಗಳಿಗೆ ಚೆನ್ನಾಗಿ ಗೊತ್ತಿದೆ ಎಂದು ಕಾಂಗ್ರೆಸ್ ಗೆ ತಿವಿದ ಬಿಜೆಪಿ ನಾಯಕ Read More »

ಕರ್ನಾಟಕ ವಕ್ಫ್ ಬೋರ್ಡ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಫಿ ಸಅದಿ ಉಸ್ತಾದ ಅವರನ್ನು ಅಭಿನಂದಿಸಿದ ಚೆನ್ನಾವರ ಮಸೀದಿಯ ಆಡಳಿತ ಮಂಡಳಿ

ಸವಣೂರು : ಕರ್ನಾಟಕ ವಕ್ಫ್ ಬೋರ್ಡ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಫಿ ಸಅದಿ ಉಸ್ತಾದ್ ಅವರನ್ನು ಪಾಲ್ತಾಡಿ ಗ್ರಾಮದ ಚೆನ್ನಾವರ ಮುಹಿಯುದ್ದೀನ್ ಜುಮಾ ಮಸೀದಿ ಚೆನ್ನಾವರ, ಖಿದ್ಮತುಲ್ ಇಸ್ಲಾಂ ಆಡಳಿತ ಸಮಿತಿ ವತಿಯಿಂದ ಹೂ ಗುಚ್ಛ ನೀಡಿ ಅಭಿನಂದಿಸಲಾಯಿತು. ಆಡಳಿತ ಸಮಿತಿ ಸದಸ್ಯರಾದ ಶಾಫಿ ಚೆನ್ನಾವರ, ಶರೀಫ್ ಕುಂಡಡ್ಕ, ಜಮಾಅತ್ ಸದಸ್ಯರಾದ ಹನೀಫ್ ಕುಂಡಡ್ಕ, ಮುಹಮ್ಮದ್ ಮೇಜರ್, ಇಸ್ಹಾಕ್ ಸಾಹಿಬ್ ಪಾಲ್ತಾಡಿ,ಅಬ್ದುಲ್ ರಹಿಮಾನ್ ಮೊಗರ್ಪಣೆ ಉಪಸ್ಥಿತರಿದ್ದರು.

ಕ್ಯಾನಿಸ್ ನ ಮನೆಯ ಮುದ್ದು ಈ ಮಿಡಾಸ್ !! | ನಾಲ್ಕು ಕಿವಿ ಹೊಂದಿರುವ ಮಿಡಾಸ್ ಎಷ್ಟು ಕ್ಯೂಟಾಗಿದೆ ಗೊತ್ತಾ??

ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅದರಿಂದ ಬಹಳ ಉಪಯೋಗಗಳಿವೆ ಎನ್ನುತ್ತವೆ ಸಂಶೋಧನೆಗಳು. ಆರೋಗ್ಯ, ಮಾನಸಿಕ ನೆಮ್ಮದಿ ಎಲ್ಲವನ್ನು ಮನೆಯಲ್ಲಿನ ಸಾಕು ಪ್ರಾಣಿಗಳು ಸುಧಾರಿಸುತ್ತವಂತೆ. ಸಾಕು ಪ್ರಾಣಿಗಳ ಒಡನಾಟ, ಮನಸ್ಸಿಗೆ ಉಲ್ಲಾಸ ತರುತ್ತದೆ. ಇನ್ನು ಸದಾ ಒಂದಲ್ಲ ಒಂದು ಸಾಕು ಪ್ರಾಣಿಯೊಂದಿಗೆ ಬಿಝಿಯಾಗಿರುವವರು ತುಂಬಾ ಆ್ಯಕ್ಟಿವ್‌ ಆಗಿರುತ್ತಾರಂತೆ. ಪ್ರಾಣಿಗಳು ತುಂಬಾ ಸೂಕ್ಷ್ಮ, ಸಣ್ಣ ಶಬ್ಧವಾದರೂ ಸಹ ಅವುಗಳ ಕಿವಿ ನೆಟ್ಟಗಾಗುತ್ತದೆ. ಇರುವ ಎರಡೇ ಕಿವಿಗಳು ಅಷ್ಟೊಂದು ಸೂಕ್ಷ್ಮವಾಗಿದ್ದರೆ, ಇನ್ನು ನಾಲ್ಕು ಕಿವಿಗಳಿದ್ದರೆ ಹೇಗಿರಬಹುದು ಊಹಿಸಿ..? ಸಾಧ್ಯವಿರದ್ದನ್ನು ಊಹಿಸುವುದೇಕೆ ಅಂತೀರಾ..? ತಪ್ಪು, …

ಕ್ಯಾನಿಸ್ ನ ಮನೆಯ ಮುದ್ದು ಈ ಮಿಡಾಸ್ !! | ನಾಲ್ಕು ಕಿವಿ ಹೊಂದಿರುವ ಮಿಡಾಸ್ ಎಷ್ಟು ಕ್ಯೂಟಾಗಿದೆ ಗೊತ್ತಾ?? Read More »

ಕನಸಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಪೋಲಿಸ್!! | ಅಷ್ಟಕ್ಕೂ ಈ ಕೃತ್ಯ ಎಸಗಲು ಕಾರಣವಾದ ಆ ಕನಸಾದರೂ ಎಂತಹದ್ದು ??

ಸಾಮಾನ್ಯವಾಗಿ ಪ್ರತಿಯೊಬ್ಬರಿಗು ಕನಸು ಬೀಳುವುದು ಸಹಜ.ಒಬ್ಬೊಬ್ಬರಿಗೆ ಒಳ್ಳೆಯ ಕನಸು ಬಿದ್ದರೆ, ಇನ್ನೂ ಕೆಲವರಿಗೆ ಭೂತ, ಪಿಶಾಚಿ, ಕಳ್ಳರ ಕನಸು ಬೀಳುತ್ತದೆ.ಆದರೆ ಇದು ಪ್ರಕೃತಿಯ ಸಹಜ ಗುಣವೆಂದೇ ಹೇಳಬಹುದು.ಪ್ರಪಂಚದಲ್ಲಿ ಭೂತ ಪ್ರೇತ ಆತ್ಮಗಳು ಇದೆಯಾ ಎಂಬುದಕ್ಕೆ ಇನ್ನೂ ಸ್ಟಷ್ಟ ಉತ್ತರ ಸಿಕ್ಕಿಲ್ಲ. ಅನೇಕರು ದೆವ್ವ ಇರೋದು ನಿಜ ಅಂದರೆ, ಮತ್ತೆ ಕೆಲವರು ಅದರ ಅನುಭವವಾಗಿದೆ ಎನ್ನುತ್ತಾರೆ.ಇತಂಹ ವಿಡಿಯೋಗಳು, ಸುದ್ದಿಗಳು ವೈರಲ್​ ಆಗುತ್ತಲೆ ಇರುತ್ತವೆ. ಆದರೆ ಮನುಷ್ಯನನ್ನು ಈ ದೆವ್ವಗಳ ವಿಚಾರ ಭಯ ಬೀಳಿಸುವಷ್ಟು ಮತ್ತೊಂದು ವಿಚಾರ ಇಲ್ಲ ನೋಡಿ.ಅದಕ್ಕೆ …

ಕನಸಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಪೋಲಿಸ್!! | ಅಷ್ಟಕ್ಕೂ ಈ ಕೃತ್ಯ ಎಸಗಲು ಕಾರಣವಾದ ಆ ಕನಸಾದರೂ ಎಂತಹದ್ದು ?? Read More »

error: Content is protected !!
Scroll to Top