“ಹಿಂದೂ ಎದ್ದರೆ ಕೇಸರಿ, ಹಿಂದೂ ಎದ್ದರೆ ವ್ಯಾಘ್ರ, ನಮ್ಮನ್ನು ಕೆಣಕಬೇಡಿ” ಎಂದು ಗುಡುಗಿದ ಗೋ ಮಧುಸೂದನ್ | ದೇಶವನ್ನು ಉಳಿಸಿಕೊಳ್ಳುವುದು ಹಿಂದೂಗಳಿಗೆ ಚೆನ್ನಾಗಿ ಗೊತ್ತಿದೆ ಎಂದು ಕಾಂಗ್ರೆಸ್ ಗೆ ತಿವಿದ ಬಿಜೆಪಿ ನಾಯಕ

ಹಿಂದೂಗಳ ವಿರುದ್ಧ ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ವಿರುದ್ಧ ಇದೀಗ ಬಿಜೆಪಿ ನಾಯಕರೊಬ್ಬರು ಸಿಡಿದೆದ್ದಿದ್ದಾರೆ.“ಹಿಂದು ಎದ್ದರೆ ಕೇಸರಿ, ಹಿಂದು ಎದ್ದರೆ ವ್ಯಾಘ್ರ” ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಿಜೆಪಿ ನಾಯಕ ಗೋ.ಮಧುಸೂದನ್ ಗುಡುಗಿದ್ದಾರೆ.

ಕಾಂಗ್ರೆಸ್ ಅಲ್ಪಸಂಖ್ಯಾತ ರಾಷ್ಟ್ರೀಯ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗಡಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಹಿಂದುಗಳು ತಾಳ್ಮೆಯಿಂದ ಇದ್ದಾರೆ, ಹಿಂದುಗಳು ಸಹನೆಯಿಂದ ಇದ್ದಾರೆ. ಹಾಗಂತ ಹಿಂದುಗಳು ಹೇಡಿಗಳ ಅನ್ನೋ ಮನೋಭಾವನೆಯಲ್ಲಿ ಇರಬೇಡಿ ಎಂದರು.

ನೀವು ಟಿಪ್ಪು ವಂಶಸ್ಥರಿರಬಹುದು, ಬಾಬರ್ ವಂಶಸ್ಥರಿರಬಹುದು, ಅಲ್ಲಾವುದ್ದೀನ್ ಖಿಲ್ಲಿ ವಂಶಸ್ಥರಿರಬಹುದು. ದೇಶದ ಮೇಲೆ ದಾಳಿ ಮಾಡಿದ ಯಾವುದೇ ದುರಾಕ್ರಮಿಗಳ ವಂಶಸ್ಥರಿರಬಹುದು. ಆಕ್ರಮಣ ಮಾಡಿದವರೆಲ್ಲ ಪರಾಸ್ತ್ರರಾಗಿದ್ದಾರೆ ವಿನಃ ದೇಶ ಸಾವಿರಾರು ವರ್ಷಗಳಿಂದ ಹಾಗೇ ಉಳಿದಿದೆ ಎಂದರು.

“ಇದು ದೇವಭೂಮಿ ಭಾರತ. ನೂರಾರು ವರ್ಷ ಗುಲಾಮಗಿರಿ ಅನುಭವಿಸಿದರೂ ಕೂಡ ಈ ದೇಶವನ್ನು ಕ್ರಿಶ್ಚಿಯನ್ ಮಯ, ಮುಸ್ಲಿಂಮಯ ಮಾಡಲು ಆಗಿಲ್ಲ. ಶೇಕಡ 90ರಷ್ಟು ಭಾರತೀಯರು ಹಿಂದುಗಳಾಗಿ ಉಳಿದಿದ್ದಾರೆ. ಅದೆಷ್ಟೋ ಮಂದಿ ದೇಶಕ್ಕೋಸ್ಕರ, ಧರ್ಮಕ್ಕೋಸ್ಕರ ತಮ್ಮ ತಲೆ ಕೊಟ್ಟಿದ್ದಾರೆ.

ಇತಿಹಾಸದಲ್ಲಿ ಸಿಖ್ ಸಮುದಾಯದವರು ಇಸ್ಲಾಂ ಮುಂದೆ ಯಾರೂ ತಲೆ ತಗ್ಗಿಸಿಲ್ಲ. ಹಿಂದು ಎದ್ದರೆ ಕೇಸರಿ, ಹಿಂದು ಎದ್ದರೆ ವ್ಯಾಘ್ರ. ನಮ್ಮನ್ನು ಕೆರಳಿಸಬೇಡಿ ಈ ದೇಶವನ್ನು ಉಳಿಸಿಕೊಳ್ಳೋದು ಹಿಂದುಗಳಿಗೆ ಗೊತ್ತಿದೆ ಎಂದು ಗೋ ಮಧುಸೂದನ್ ಗುಡುಗಿದರು.

Leave A Reply

Your email address will not be published.